ಕಬ್ಜ ಥಿಯೇಟರ್ ಲಿಸ್ಟ್ ಬಿಡುಗಡೆ; ಮೈನ್ ಥಿಯೇಟರ್ ಯಾವುದು? ಬುಕಿಂಗ್ ಯಾವಾಗ ಆರಂಭ?

ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಆರ್ ಚಂದ್ರು ಕಾಂಬಿನೇಶನ್‌ನಲ್ಲಿ ತಯಾರಾಗಿರುವ ಮೂರನೇ ಚಿತ್ರ ಕಬ್ಜ ಬಿಡುಗಡೆ ದಿನ ಸಮೀಪಿಸುತ್ತಿದ್ದು, ಉಪ್ಪಿ ಅಭಿಮಾನಿಗಳಲ್ಲಿ ನಿರೀಕ್ಷೆ ದುಪ್ಪಟ್ಟಾಗಿದೆ. ಇದೇ ತಿಂಗಳ 17ರಂದು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಈ ಚಿತ್ರ ತೆರೆಗೆ ಬರಲಿದ್ದು, ಚಿತ್ರದ ಹಾಡುಗಳು ಹಾಗೂ ಟ್ರೈಲರ್ ಈಗಾಗಲೇ ಸಿನಿ ರಸಿಕರನ್ನು ಕೆರಳಿಸಿದೆ.

ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿಯೂ ಕಬ್ಜ ಚಿತ್ರ ತೆರೆಗೆ ಬರುತ್ತಿದ್ದು, ಚಿತ್ರಕ್ಕಿರುವ ಹೈಪ್ ನೋಡಿದರೆ ಮೊದಲ ದಿನ ಕರ್ನಾಟಕದಲ್ಲಿ ದಾಖಲೆಯ ಓಪನಿಂಗ್ ಡೇ ಕಲೆಕ್ಷನ್ ಆಗುವುದು ಪಕ್ಕಾ ಎನ್ನಬಹುದು. ಸದ್ಯ ಚಿತ್ರತಂಡ ಪ್ರಚಾರ ಕಾರ್ಯಗಳಲ್ಲಿ ಬ್ಯುಸಿಯಾಗಿದ್ದು, ಮುಂಬೈ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದೆ.

Kabzaa initial theatre list announced; Narthaki is main theatre and booking to starts from March 12

ತೆಲುಗು ರಾಜ್ಯಗಳು, ಕೇರಳ ಹಾಗೂ ತಮಿಳುನಾಡಿನಲ್ಲಿಯೂ ಕಬ್ಜ ಚಿತ್ರತಂಡ ಪ್ರಚಾರವನ್ನು ಮಾಡಲಿದೆ. ಇನ್ನು ರಾಜ್ಯದಲ್ಲಿ ಈಗಾಗಲೇ ಚಿತ್ರಕ್ಕೆ ದೊಡ್ಡ ಹೈಪ್ ಸಿಕ್ಕಿದ್ದು, ಬಿಡುಗಡೆಗೆ ಇನ್ನು ಏಳು ದಿನಗಳು ಬಾಕಿ ಇರುವಾಗಲೇ ಚಿತ್ರದ ಆರಂಭಿಕ ಚಿತ್ರಮಂದಿರಗಳ ಪಟ್ಟಿ ಬಿಡುಗಡೆಯಾಗಿದೆ. ಹೌದು, ಕಬ್ಜ ಚಿತ್ರದ ಇನಿಷಿಯಲ್ ಥಿಯೇಟರ್ ಲಿಸ್ಟ್ ಅನ್ನು ಚಿತ್ರತಂಡ ಘೋಷಿಸಿದೆ. ಬೆಂಗಳೂರಿನ ಕೆಜಿ ರಸ್ತೆಯ ನರ್ತಕಿ ಚಿತ್ರಮಂದಿರ ಕಬ್ಜ ಚಿತ್ರಕ್ಕೆ ಮುಖ್ಯ ಚಿತ್ರಮಂದಿರವಾಗಿದೆ.

ನರ್ತಕಿ ಜತೆಗೆ ಲಾಲ್ ಬಾಗ್ ಬಳಿಯ ಊರ್ವಶಿ, ಸ್ಯಾಂಕಿ ರಸ್ತೆಯ ಕಾವೇರಿ, ಸೇವಾ ನಗರದ ಮುಕುಂದ, ಸಂಜಯ್ ನಗರದ ವೈಭವ್, ತಾವರೆಕೆರೆಯ ಬಾಲಾಜಿ, ಮಲ್ಲೇಶ್ವರದ ಸವಿತ, ಉತ್ತರಹಳ್ಳಿಯ ಮುಕ್ತ ಎ2, ನಗರದ ಎಲ್ಲಾ ಪಿವಿಆರ್, ಎಲ್ಲಾ ಐನಾಕ್ಸ್, ಗೋಪಾಲನ್ ಹಾಗೂ ಎಲ್ಲಾ ಸಿನಿಪೊಲಿಸ್‌ಗಳು ಕಬ್ಜ ಚಿತ್ರದ ಇನಿಷಿಯಲ್ ಥಿಯೇಟರ್ ಲಿಸ್ಟ್‌ನಲ್ಲಿವೆ. ಉಳಿದಂತೆ ತುಮಕೂರು, ದೊಡ್ಡಬಳ್ಳಾಪುರ, ತಿಪಟೂರು, ಚನ್ನಪಟ್ಟಣ, ಮೈಸೂರು, ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ, ಕಲ್ಬುರ್ಗಿ, ರಾಯಚೂರು, ಬೀದರ್, ಶಿವಮೊಗ್ಗ, ಕುಂದಾಪುರ, ಮಣಿಪಾಲ ಹಾಗೂ ಮಂಗಳೂರಿನ ಕೆಲ ಚಿತ್ರಮಂದಿರಗಳೂ ಸಹ ಈ ಇನಿಷಿಯಲ್ ಥಿಯೇಟರ್ ಲಿಸ್ಟ್‌ನಲ್ಲಿವೆ.

Kabzaa initial theatre list announced; Narthaki is main theatre and booking to starts from March 12

ಇದು ಕೇವಲ ಮೊದಲ ಹಂತದ ಚಿತ್ರಮಂದಿರಗಳ ಪಟ್ಟಿಯಾಗಿದ್ದು, ಇನ್ನೂ ಹೆಚ್ಚು ಚಿತ್ರಮಂದಿರಗಳು ಮುಂದಿನ ಪಟ್ಟಿಯಲ್ಲಿ ಸೇರ್ಪಡೆಗೊಳ್ಳಲಿವೆ. ಚಿತ್ರದಲ್ಲಿ ಉಪೇಂದ್ರ ಜತೆಗೆ, ಕಿಚ್ಚ ಸುದೀಪ್ ಹಾಗೂ ಶಿವ ರಾಜ್‌ಕುಮಾರ್ ಸಹ ನಟಿಸಿದ್ದು, ದೊಡ್ಡ ಮಟ್ಟದ ಟಾಕ್ ಕ್ರಿಯೇಟ್ ಮಾಡಿದೆ. ಹೀಗಾಗಿ ಈ ಮೂವರೂ ನಟರ ಅಭಿಮಾನಿಗಳೂ ಸಹ ಚಿತ್ರಮಂದಿರಗಳಿಗೆ ನುಗ್ಗಲಿದ್ದು, ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರ ತೆರೆಗೆ ಬರಲಿದೆ ಹಾಗೂ ಮೊದಲ ದಿನ ದಾಖಲೆಯ ಗಳಿಕೆ ಮಾಡಲಿದೆ.

ಇನ್ನು ಚಿತ್ರ ಮುಂದಿನ ಶುಕ್ರವಾರ ( ಮಾರ್ಚ್ 17 ) ಬಿಡುಗಡೆಯಾಗಲಿದ್ದು, ಚಿತ್ರದ ಅಡ್ವಾನ್ಸ್ ಬುಕಿಂಗ್ ಮಾರ್ಚ್ 12ರ ಭಾನುವಾರದಿಂದ ಅಥವಾ ಮಾರ್ಚ್ 13ರ ಸೋಮವಾರದಿಂದ ತೆರೆಯಲಿದೆ. ಚಿತ್ರ ಬಿಡುಗಡೆ ದಿನ ಬೆಳಗಿನ ಜಾವವೇ ಆರಂಭಗೊಳ್ಳಲಿದ್ದು, ಟಿಕೆಟ್ ಖರೀದಿಗಾಗಿ ಜನರು ಮುಗಿಬೀಳುವುದು ಪಕ್ಕಾ.

ಕಬ್ಜ ಚಿತ್ರದ ತಾರಾಗಣ: ನಾಯಕನಾಗಿ ಉಪೇಂದ್ರ, ನಾಯಕಿಯಾಗಿ ಶ್ರೇಯಾ ಶರಣ್ ತಾರಾಗಣದಲ್ಲಿದ್ದರೆ, ಜತೆಗೆ ಕಿಚ್ಚ ಸುದೀಪ್ ಹಾಗೂ ಶಿವ ರಾಜ್‌ಕುಮಾರ್ ಸಹ ಪ್ರಮುಖ ಪಾತ್ರಗಳನ್ನು ನಿರ್ವಹಿಸಲಿದ್ದಾರೆ. ಇನ್ನುಳಿದಂತೆ ಮುರಳಿ ಶರ್ಮಾ, ನವಾಬ್ ಶಾ, ಕೋಟ ಶ್ರೀನಿವಾಸ್ ರಾವ್, ಪೊಸಾನಿ ಕೃಷ್ಣ ಮುರಳಿ, ಸುಧಾ, ಕಬೀರ್ ದುಹಾನ್ ಸಿಂಗ್, ಜಾನ್ ಕೊಕ್ಕೆನ್, ದೇವ್ ಗಿಲ್, ಕಾಮರಾಜನ್, ದನೀಶ್ ಅಖ್ತರ್, ಲಕ್ಕಿ ಲಕ್ಷ್ಮಣ್, ಪ್ರಮೋದ್ ಶೆಟ್ಟಿ, ತಾಹಾ ಶಾ, ಅವಿನಾಶ್, ಸುನಿಲ್ ಪಟ್ನಾಯಕ್, ಅನೂಪ್, ಬಿ ಸುರೇಶ್, ಅಶ್ವತ್ಥ್ ನೀನಾಸಂ, ಸಂದೀಪ್ ಮಲಾನಿ, ಮಾಸ್ಟರ್ ಚಿರು ಹಾಗೂ ಮಾಸ್ಟರ್ ಜ್ಞಾನ್ ಕಬ್ಜ ಚಿತ್ರದ ಭಾಗವಾಗಿದ್ದಾರೆ.

More from Filmibeat

English summary
Kabzaa initial theatre list announced; Narthaki is the main theatre and booking to starts from March 12. Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X