ಉಪೇಂದ್ರ ಹುಟ್ಟುಹಬ್ಬಕ್ಕೆ 'ರಿಯಲ್ ಸರ್ಪ್ರೈಸ್' ಕೊಡಲು ಸಜ್ಜಾದ ಆರ್ ಚಂದ್ರು

ರಿಯಲ್ ಸ್ಟಾರ್ ಉಪೇಂದ್ರ ಹುಟ್ಟುಹಬ್ಬಕ್ಕೆ ಒಂದು ದಿನ ಬಾಕಿಯಿದೆ. ಈ ವರ್ಷವೂ ಅಭಿಮಾನಿಗಳ ಜೊತೆ ಜನುಮದಿನ ಸಂಭ್ರಮಾಚರಣೆ ಬೇಡ ಎಂದು ನಟ ಈಗಾಗಲೇ ಮನವಿ ಮಾಡಿಕೊಂಡಿದ್ದಾರೆ. ಸದ್ಯ ಉಪೇಂದ್ರ ಅವರು ಬೆಂಗಳೂರಿನಲ್ಲಿ ಇಲ್ಲ. ಕುಟುಂಬದ ಜೊತೆ ಬೇರೆ ಕಡೆ ತೆರಳಿದ್ದಾರೆ ಎಂಬ ಮಾಹಿತಿ ಇದೆ.

ಈ ಸಲ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಸಂಭ್ರಮ ಇಲ್ಲ ಎನ್ನುವ ನಿರಾಸೆಗಿಂತ, ಉಪ್ಪಿ ಡೈರೆಕ್ಷನ್ ಸಿನಿಮಾ ಅಧಿಕೃತವಾಗಿ ಘೋಷಣೆಯಾಗಬಹುದು ಎಂಬ ಕಾತುರವೇ ಹೆಚ್ಚಿದೆ. ಉಪೇಂದ್ರ ನಿರ್ದೇಶನದ ಸಿನಿಮಾ ಎನ್ನಲಾದ ಪೋಸ್ಟರ್‌ವೊಂದು ಸೋರಿಕೆಯಾಗಿದ್ದು, ರಿಯಲ್ ಸ್ಟಾರ್ ಅಭಿಮಾನಿಗಳಲ್ಲಿ ಥ್ರಿಲ್ ಹೆಚ್ಚಿಸಿದೆ.

ಉಪೇಂದ್ರ ನಿರ್ದೇಶನದ ಸಿನಿಮಾದ ಹೆಸರು ಹಾಗೂ ಫಸ್ಟ್ ಲುಕ್ ಪೋಸ್ಟರ್ ಎನ್ನುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರ ಜೊತೆಗೆ ಉಪೇಂದ್ರ ನಟಿಸುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜ ಸರ್ಪ್ರೈಸ್ ಸುದ್ದಿ ಹೊರಹಾಕಿದೆ. ಮುಂದೆ ಓದಿ...

ಬರ್ತಡೇಗೆ ಕಬ್ಜ ಉಡುಗೊರೆ

ಬರ್ತಡೇಗೆ ಕಬ್ಜ ಉಡುಗೊರೆ

ಕಬ್ಜ ಅಂಡರ್‌ವರ್ಲ್ಡ್ ಆಧರಿಸಿ ತಯಾರಾಗುತ್ತಿರುವ ಚಿತ್ರ. ರೆಟ್ರೋ ಶೈಲಿಯಲ್ಲಿ ಮೇಕಿಂಗ್ ಆಗುತ್ತಿರುವ ಚಿತ್ರ. ಕಬ್ಜ ಸಿನಿಮಾದಲ್ಲಿ ಉಪ್ಪಿ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದಕ್ಕಾಗಿ ಈಗಾಗಲೇ ಹಲವು ಫೋಟೋಗಳು ಸಾಕ್ಷಿಯಾಗಿವೆ. ಕಬ್ಜ ಚಿತ್ರದ ಫೋಟೋಶೂಟ್ ಕಣ್ಣ ಮುಂದಿದೆ. ಇದೀಗ, ಉಪೇಂದ್ರ ಹುಟ್ಟುಹಬ್ಬದ ಪ್ರಯುಕ್ತ ವಿಶೇಷವಾದ ಟೀಸರ್ ರಿಲೀಸ್ ಮಾಡಲು ಆರ್ ಚಂದ್ರು ತೀರ್ಮಾನಿಸಿದ್ದು, ಆ ಕುರಿತು ಮಾಹಿತಿ ನೀಡಿದ್ದಾರೆ. ಸೆಪ್ಟೆಂಬರ್ 18ಕ್ಕೆ ಕಬ್ಜ ಚಿತ್ರತಂಡ ಉಪ್ಪಿ ಬರ್ತಡೇ ಟೀಸರ್ ಬಿಡುಗಡೆ ಮಾಡುತ್ತಿದೆ.

ಉಪ್ಪಿ-ಸುದೀಪ್ ಜುಗಲ್‌ಬಂಧಿ

ಉಪ್ಪಿ-ಸುದೀಪ್ ಜುಗಲ್‌ಬಂಧಿ

ಕಬ್ಜ ಚಿತ್ರದಲ್ಲಿ ಉಪೇಂದ್ರ ನಾಯಕನಟನಾಗಿ ಅಭಿನಯಿಸುತ್ತಿದ್ದಾರೆ. ಸರ್ಪ್ರೈಸ್ ಎನ್ನುವಂತೆ ಕಿಚ್ಚ ಸುದೀಪ್ ಸಹ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಭಾರ್ಗವ್ ಬಕ್ಷಿ ಎಂಬ ಡಾನ್ ಪಾತ್ರದಲ್ಲಿ ಸುದೀಪ್ ಕಾಣಿಸಿಕೊಳ್ಳುತ್ತಿದ್ದು, ಕಿಚ್ಚನ ಲುಕ್ ಸಹ ಅನಾವರಣಗೊಂಡಿದೆ. ವರದಿಗಳ ಪ್ರಕಾರ, ಸುದೀಪ್ ಮತ್ತು ಉಪೇಂದ್ರ ಮುಖಾಮುಖಿಯಾಗುವ ದೃಶ್ಯಗಳು ಸಹ ಇದೆಯಂತೆ. ಆದರೆ, ಈ ಭಾಗದ ಚಿತ್ರೀಕರಣ ಇನ್ನು ಆಗಿಲ್ಲ ಎನ್ನಲಾಗಿದೆ.

ನಾಯಕಿ ಯಾರು?

ನಾಯಕಿ ಯಾರು?

ಕಬ್ಜ ಚಿತ್ರದಲ್ಲಿ ನಾಯಕಿ ಯಾರು ಎನ್ನುವುದು ಇದುವರೆಗೂ ಬಹಿರಂಗವಾಗಿಲ್ಲ. ಆದರೆ ದಕ್ಷಿಣ ಭಾರತದ ಖ್ಯಾತ ನಟಿಯೊಬ್ಬರು ಹೀರೋಯಿನ್ ಆಗಿ ನಟಿಸುವುದು ಮಾತ್ರ ಪಕ್ಕಾ. ಸದ್ಯದ ವರದಿ ಪ್ರಕಾರ ಕೀರ್ತಿ ಸುರೇಶ್ ಅಥವಾ ತಮನ್ನಾ ಭಾಟಿಯಾ ಅವರನ್ನು ಸಂಪರ್ಕಿಸಲಾಗಿದೆ ಎಂಬ ಸುದ್ದಿ ಇದೆ. ಇದನ್ನು ಆರ್ ಚಂದ್ರು ಅವರೇ ಸ್ಪಷ್ಟಪಡಿಸಬೇಕಿದೆ.

ಪ್ಯಾನ್ ಇಂಡಿಯಾ-ಬಿಗ್ ಬಜೆಟ್

ಪ್ಯಾನ್ ಇಂಡಿಯಾ-ಬಿಗ್ ಬಜೆಟ್

ಕೊರೊನಾ ಇಲ್ಲವಾಗಿದ್ದರೆ ಇಷ್ಟೊತ್ತಿಗಾಗಲೇ ಶೂಟಿಂಗ್ ಮುಗಿಯಬೇಕಿತ್ತು. ಕೊರೊನಾ, ಭೀಕರ ಮಳೆಯಿಂದ ಬೆಂಗಳೂರಿನ ಮಿನರ್ವ್ ಮಿಲ್‌ನಲ್ಲಿ ಹಾಕಲಾಗಿದ್ದ ಸೆಟ್‌ ಸಹ ನಾಶವಾಗಿತ್ತು. ಈಗ ಸೆಪ್ಟೆಂಬರ್ 20ರಿಂದ ಕಬ್ಜ ಶೂಟಿಂಗ್ ಶುರುವಾಗಲಿದೆ. 21ನೇ ತಾರೀಕಿನಿಂದ ಉಪೇಂದ್ರ ಪಾಲ್ಗೊಳ್ಳಲಿದ್ದಾರೆ. ಬೆಂಗಳೂರು ಶೆಡ್ಯೂಲ್ ಮುಗಿದ ಮೇಲೆ ಮಂಗಳೂರು ಹಾರ್ಬರ್‌ನಲ್ಲಿ ಶೂಟಿಂಗ್ ನಡೆಯಲಿದೆ. ಆ ವೇಳೆ ಸುದೀಪ್ ಸಹ ಉಪ್ಪಿ ಜೊತೆ ಸೇರಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಉಪ್ಪಿ ಡೈರೆಕ್ಷನ್ ಚಿತ್ರ?

ಉಪ್ಪಿ ಡೈರೆಕ್ಷನ್ ಚಿತ್ರ?

ಸದ್ಯ ಕೊರೊನಾ ಪರಿಸ್ಥಿತಿ ನೋಡಿಕೊಂಡು ಡೈರೆಕ್ಷನ್ ಸಿನಿಮಾ ಘೋಷಣೆ ಮಾಡಲು ಉಪೇಂದ್ರ ನಿರ್ಧರಿಸಿದ್ದಾರೆ. ಅದಕ್ಕಾಗಿ ಸಿದ್ಧತೆ ನಡೆಯುತ್ತಿದ್ದು, ಸ್ಕ್ರಿಪ್ಟ್ ಮುಗಿದಿದೆಯಂತೆ. ಸದ್ಯಕ್ಕೆ ಒಪ್ಪಿಕೊಂಡಿರುವ ಕಮಿಟ್‌ಮೆಂಟ್‌ಗಳನ್ನು ಮುಗಿಸಿ ತಮ್ಮ ಸ್ವಂತ ಬ್ಯಾನರ್‌ನಲ್ಲಿ ನಿರ್ಮಾಣವಾಗಲಿರುವ ಚಿತ್ರಕ್ಕೆ ಹೈ ಹಾಕಬೇಕಿದೆ. ಬಹುಶಃ ಹುಟ್ಟುಹಬ್ಬದ ದಿನ ಈ ಚಿತ್ರದ ಬಗ್ಗೆ ಏನಾದರೂ ಮಾಹಿತಿ ಸಿಗಬಹುದು ಎಂದು ನಿರೀಕ್ಷೆಯಲ್ಲಿದ್ದಾರೆ ಫ್ಯಾನ್ಸ್.

More from Filmibeat

English summary
R Chandru Directional Kabzaa Movie Team to release special teaser on Actor Upendra Birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X