Kabzaa:ಬೆಂಗಳೂರಿನ ಲೂಲು ಮಾಲ್‌ನಲ್ಲಿ 'ಕಬ್ಜ' ಪ್ರಚಾರ ಮಾಡಿದ ಶ್ರಿಯಾ ಶರಣ್, ತಾನ್ಯ ಹೋಪ್

By ಫಿಲ್ಮಿಬೀಟ್ ಡೆಸ್ಕ್

ಎಲ್ಲಿ ನೋಡಿದರೂ 'ಕಬ್ಜ' ಸಿನಿಮಾದ್ದೇ ದರ್ಬಾರ್. ಸಿನಿಮಾ ಬಿಡುಗಡೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಹೀಗಾಗಿ ಇಡೀ ಚಿತ್ರತಂಡ ಭರ್ಜರಿ ಪ್ರಚಾರದಲ್ಲಿ ಮುಳುಗಿದೆ. 'ಕಬ್ಜ' ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಶ್ರಿಯಾ ಶರಣ್ ಹಾಗೂ ಹಾಡೊಂದಕ್ಕೆ ಹೆಜ್ಜೆ ಹಾಕಿರುವ ತಾನ್ಯ ಹೋಪ್ ಕೂಡ ಕೊನೆಯ ಹಂತದ ಪ್ರಮೋಷನ್‌ನಲ್ಲಿ ಭಾಗಿಯಾಗಿದ್ದಾರೆ.

ಶ್ರಿಯಾ ಶರಣ್ ಹಾಗೂ ತಾನ್ಯಾ ಹೋಪ್ ಇಬ್ಬರೂ ಇಂದು(ಮಾರ್ಚ್ 14) ಬೆಂಗಳೂರಿನ ಲುಲು ಮಾಲ್‌ನಲ್ಲಿ 'ಕಬ್ಜ' ಸಿನಿಮಾದ ಪ್ರಚಾರ ಮಾಡಿದ್ರು. ಲೂಲೂ ಮಾಲ್‌ನಲ್ಲಿ ಹೊಸದಾಗಿ ಆರಂಭಗೊಂಡಿರುವ ಸಿನೆಪೊಲಿಸ್ ಮಲ್ಟಿಪ್ಲೆಕ್ಸ್‌ನಲ್ಲಿ ವಿಶೇಷ ಅತಿಥಿಗಳಾಗಿ ಆಗಮಿಸಿದ್ದರು. ಈ ವೇಳೆ 'ಕಬ್ಜ' ಸಿನಿಮಾದ ವಿಶೇಷ ಪ್ರಚಾರವನ್ನು ಕೈಗೊಂಡಿದ್ದರು.

Kabzaa Star Tanya Hope and Shriya Saran at newly opened cinepolis multiplex in Bengaluru

ಭಾರತದ ಮೊದಲ ಅಂತರಾಷ್ಟ್ರೀಯ ಮಲ್ಟಿಪ್ಲೆಕ್ಸ್ ಚೈನ್ ಸಿನೆಪೊಲಿಸ್. ಬೆಂಗಳೂರಿನ ಲುಲು ಮಾಲ್‌ನಲ್ಲಿ ನಟಿ ತಾನ್ಯಾ ಹೋಪ್ ಹಾಗೂ ಶ್ರಿಯಾ ಶರಣ್ ವಿಶೇಷ ಅತಿಥಿಗಳಾಗಿ ಬಂದಿದ್ದರು. ಈ ವೇಳೆ ಅಭಿಮಾನಿಗಳ ಸಮ್ಮುಖದಲ್ಲಿ ಕಬ್ಜ ಸಿನಿಮಾದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡರು.

ಮಾರ್ಚ್ ತಿಂಗಳ ಆರಂಭದಲ್ಲಿ ಸಿನೆಪೊಲಿಸ್ ತನ್ನ ಮೊದಲ MACRO XE ಮತ್ತು VIP ಸ್ಕ್ರೀನ್‌ಗಳನ್ನು ಬೆಂಗಳೂರಿನ ಲುಲು ಮಾಲ್‌ನಲ್ಲಿ ಆರಂಭಿಸುವುದಾಗಿ ಘೋಷಿಸಿತ್ತು. ಬೆಂಗಳೂರಿನ ಪ್ರಮುಖ ಸ್ಥಳಗಳಲ್ಲಿ ಮಲ್ಟಿಪ್ಲೆಕ್ಸ್‌ಗಳನ್ನು ತೆರೆಯಲು ಕಾರ್ಯೋನ್ಮುಖವಾಗಿದ್ದು, ಮೊದಲ ಐಷಾರಾಮಿ ಮಲ್ಟಿಪ್ಲೆಕ್ಸ್ ಅನ್ನು ಆರಂಭಿಸಿ, ಹೊಸ ಅನುಭವವನ್ನು ನೀಡಲು ಮುಂದಾಗಿದೆ.

ಮೊದಲ ಐಷಾರಾಮಿ ಮಲ್ಟಿಪ್ಲೆಕ್ಸ್‌ ಆರಂಭ ಹಾಗೂ ಒಂದು ಮ್ಯಾಕ್ರೋ XE ಮತ್ತು 3 VIP ಸ್ಕ್ರೀನ್‌ಗಳೊಂದಿಗೆ 11 ಹೊಸ ಸ್ಕ್ರೀನ್‌ಗಳನ್ನು ಆರಂಭಿಸಿದೆ. ಈ ಸ್ಕ್ರೀನ್‌ಗಳಲ್ಲಿ ಪ್ರೇಕ್ಷಕರು ಹೊಸ ಅನುಭವವನ್ನು ಪಡೆಯಬಹುದಾಗಿದೆ. ಈ ಹೊಚ್ಚ ಹೊಸ ಮಾದರಿಯ ಸ್ಕ್ರೀನ್‌ಗಳನ್ನು ಪರಿಚಯಿಸುವುದರ ಜೊತೆಗೆ ನಟಿಯರಾದ ಶ್ರಿಯಾ ಶರಣ್ ಹಾಗೂ ತಾನ್ಯ ಹೋಪ್‌ ಅವರ 'ಕಬ್ಜ' ಸಿನಿಮಾಗೆ ಪ್ರಚಾರವನ್ನು ನೀಡಲಾಗಿದೆ.

ಈ ಸಂದರ್ಭದಲ್ಲಿ ಬಹುಭಾಷಾ ನಟಿ ಶ್ರಿಯಾ ಶರಣ್, ತಾನ್ಯ ಹೋಪ್ ಸೇರಿದಂತೆ ಪ್ರಮುಖ ಗಣ್ಯರು ಭಾಗವಹಿಸಿದ್ರು. ಇಲ್ಲಿ ಶ್ರಿಯಾ ಶರಣ್ ಹಾಗೂ ತಾನ್ಯಾ ಹೋಪ್ ಇಬ್ಬರೂ 'ಕಬ್ಜ' ಸಿನಿಮಾ ಮಾರ್ಚ್ 17ರಂದು ಬಿಡುಗಡೆಯಾಗುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ರು.

More from Filmibeat

English summary
Kabzaa Star Tanya Hope and Shriya Saran promoted movie at newly opended cinepolis multiplex in Bengaluru,Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X