Kabzaa:ಮುಂಬೈನಲ್ಲಿ ಬೈಕ್ ಏರಿ ಬಂದ ಉಪ್ಪಿ–ಶ್ರಿಯಾ ಶರಣ್: ಬಾಲಿವುಡ್ 'ಕಬ್ಜ' ಮಾಡಿದ ಕಿಚ್ಚ
ಸ್ಯಾಂಡಲ್‌ವುಡ್‌ನ ಪ್ಯಾನ್ ಇಂಡಿಯಾ ಸಿನಿಮಾ 'ಕಬ್ಜ' ರಿಲೀಸ್‌ಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಉಪೇಂದ್ರ,ಕಿಚ್ಚ ಸುದೀಪ್,ಶಿವರಾಜ್‌ಕುಮಾರ್ ಕಾಂಬಿನೇಷನ್ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡುವುದಕ್ಕೆ ಸಜ್ಜಾಗಿ ನಿಂತಿದೆ. ಹೀಗಾಗಿ ಕೊನೆಯ ಹಂತದ ಭರ್ಜರಿ ಪ್ರಚಾರ ಆರಂಭಿಸಿದ್ದು, ಮುಂಬೈ 'ಕಬ್ಜ' ಮಾಡಿದೆ.
'ಕಬ್ಜ' ಸಿನಿಮಾದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅರ್ಕೇಶ್ವರನಾಗಿ, ಕಿಚ್ಚ ಸುದೀಪ್ ಭಾರ್ಗವ್ ಭಕ್ಷಿಯಾಗಿ ಘರ್ಜಿಸಲಿದ್ದಾರೆ. ಇನ್ನು ಶಿವರಾಜ್‌ಕುಮಾರ್ ಪಾತ್ರ ಸರ್ಪ್ರೈಸ್ ಆಗಿಯೇ ಇಟ್ಟಿದ್ದಾರೆ. ಹೀಗಾಗಿ ಈ ಮೂವರ ಕಾಂಬಿನೇಷನ್ ಬಗ್ಗೆ ದೂರದೂರು ಮುಂಬೈನಲ್ಲೂ ಹವಾ ಜೋರಾಗಿಯೇ ಇದೆ.

ಆರ್. ಚಂದ್ರು ನಿರ್ಮಿಸಿ, ನಿರ್ದೇಶಿಸಿರುವ 'ಕಬ್ಜ' ಸಿನಿಮಾ ರಿಲೀಸ್‌ಗೆ ಇನ್ನೊಂದು ವಾರವಷ್ಟೇ ಉಳಿದಿದೆ. ಈ ಸಂಬಂಧ ಈಗಾಗಲೇ ಪ್ರಚಾರದಲ್ಲಿ ಬ್ಯುಸಿಯಾಗಿರುವ 'ಕಬ್ಜ' ತಂಡ ಗುರುವಾರ (ಮಾರ್ಚ್ 9) ಮುಂಬೈನಲ್ಲಿ ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಿ ಬಂದಿದೆ. ಮುಂಬೈನಲ್ಲಿ 'ಕಬ್ಜ' ತಂಡಕ್ಕೆ ಅದ್ಧೂರಿ ಸ್ವಾಗತ ಸಿಕ್ಕಿದ್ದು, ಸಿನಿಮಾದ ಪ್ರೀ-ರಿಲೀಸ್ ಈವೆಂಟ್ ಗ್ರ್ಯಾಂಡ್ ಆಗಿ ನಡೆದಿದೆ.
'ಕಬ್ಜ' ಸಿನಿಮಾದ ಹಿಂದಿ ಅವತರಣಿಕೆಯನ್ನು ಬಾಲಿವುಡ್‌ನ ಜನಪ್ರಿಯ ನಿರ್ಮಾಪಕ ಹಾಗೂ ವಿತರಕ ಆನಂದ್ ಪಂಡಿತ್ ರಿಲೀಸ್ ಮಾಡುತ್ತಿದ್ದಾರೆ. ನಿರೀಕ್ಷೆಗೆ ತಕ್ಕ ಹಾಗೆ ಅದ್ಧೂರಿಯಾಗಿ ಪ್ರೀ-ರಿಲೀಸ್ ಈವೆಂಟ್ ಆಯೋಜನೆ ಮಾಡಲಾಗಿತ್ತು. ಆರಂಭದಲ್ಲಿಯೇ ಬುಲೆಟ್ ಮೂಲಕ ಸುಮಾರು 60 ಬೈಕ್‌ಗಳಲ್ಲಿ ಎರಡೂವರೆ ಕಿ.ಮೀ ಸವಾರಿ ಬಂದಿದ್ದರು. ಉಪೇಂದ್ರ, ಆನಂದ್ ಪಂಡಿತ್ ಬುಲೆಟ್ ಏರಿ ಸವಾರಿ ಮಾಡಿದ್ರೆ, ಸುದೀಪ್, ಶ್ರೇಯಾ ಶರಣ್ ಸಹ ಅವರಿಗೆ ಜೊತೆಯಾಗಿದ್ದರು.

ಸುದೀಪ್ ಸಿನಿಮಾ ಬಿಡುಗಡೆಗೆಂದು ಆಗಾಗ ಮುಂಬೈ ಬಂದು ಹೋಗುತ್ತಾರೆ. ಬಾಲಿವುಡ್ ಸಿನಿಮಾಗಳಲ್ಲೂ ಈಗಾಗಲೇ ಸುದೀಪ್ ನಟಿಸಿದ್ದಾರೆ. ಈಗ ರಿಯಲ್ ಸ್ಟಾರ್ ಉಪೇಂದ್ರ ಕೂಡ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದು, ಎಲ್ಲರ ಮಗನ ಸೆಳೆದಿದ್ದಾರೆ. 'ಕಬ್ಜ' ಸಿನಿಮಾ ಇದೇ ಮಾರ್ಚ್ 17 ರಂದು ವಿಶ್ವದಾದ್ಯಂತ ಸುಮಾರು, 50 ದೇಶಗಳಲ್ಲಿ 4 ಸಾವಿರಕ್ಕೂ ಅಧಿಕ ಪರದೆಗಳಲ್ಲಿ ಏಕಕಾಲಕ್ಕೆ ಐದು ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ.


Click it and Unblock the Notifications











