For Quick Alerts
  ALLOW NOTIFICATIONS  
  For Daily Alerts

  ಉಪ್ಪಿ ಹುಟ್ಟುಹಬ್ಬಕ್ಕೂ ಮುನ್ನ ಕಬ್ಜ ಟೀಸರ್; ದಿನಾಂಕ, ಸಮಯ, ಟೀಸರ್ ಲೆಂತ್ ಮಾಹಿತಿ ಇಲ್ಲಿದೆ

  |

  ನಿರ್ದೇಶಕ ಆರ್ ಚಂದ್ರು ನಿರ್ದೇಶನದ, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಕಬ್ಜ ಚಿತ್ರದ ಟೀಸರ್ ಇದೇ ತಿಂಗಳ 17ರಂದು ಬಿಡುಗಡೆಯಾಗಲಿದೆ ಎಂಬ ಸುದ್ದಿ ಹೊರಬಿದ್ದಿದೆ. ಇದೇ ತಿಂಗಳ 18ರಂದು ನಟ ಉಪೇಂದ್ರ ಅವರ ಹುಟ್ಟುಹಬ್ಬವಿದ್ದು, ಇದಕ್ಕೂ ಒಂದು ದಿನ ಮುನ್ನವೇ ಕಬ್ಜ ಚಿತ್ರದ ಟೀಸರ್ ಅನ್ನು ಬಿಡುಗಡೆಗೊಳಿಸಲು ತಂಡ ಯೋಜನೆ ಹಾಕಿದೆ.

  ಇನ್ನು ಕಬ್ಜ ಚಿತ್ರದ ಪೋಸ್ಟರ್‌ಗಳನ್ನು ಗಮನಿಸಿರುವ ಕನ್ನಡ ಸಿನಿ ರಸಿಕರು ಈ ಚಿತ್ರದ ಮೇಲೆ ಕಣ್ಣಿಟ್ಟಿದ್ದಾರೆ. ಈ ಚಿತ್ರ ದೇಶದಾದ್ಯಂತ ಸದ್ದು ಮಾಡುವ ಮತ್ತೊಂದು ಕನ್ನಡ ಸಿನಿಮಾ ಆಗಬಹುದಾ ಎಂಬ ನಿರೀಕ್ಷೆಯೂ ಸಹ ಇದೆ. ಇನ್ನು ಕಬ್ಜ ದೊಡ್ಡ ಬಜೆಟ್‌ನಲ್ಲಿ ಮೂಡಿ ಬರುತ್ತಿದ್ದು, ವಿಷ್ಯುಯಲ್ಸ್ ಮತ್ತೊಂದು ಹಂತದಲ್ಲಿರಲಿವೆ ಎನ್ನಲಾಗುತ್ತಿದೆ.

  ಮುಕುಂದ ಮುರಾರಿ ಬಳಿಕ ಎರಡನೇ ಬಾರಿಗೆ ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವ ಚಿತ್ರ ಇದಾಗಿದ್ದು, ಶ್ರೀ ಸಿದ್ದೇಶ್ವರ ಎಂಟರ್‌ಪ್ರೈಸಸ್ ಬ್ಯಾನರ್ ಅಡಿಯಲ್ಲಿ ಆರ್ ಚಂದ್ರಶೇಖರ್ ಬಂಡವಾಳ ಹೂಡಿದ್ದು, ಎಂಟಿಬಿ ನಾಗರಾಜ್ ಚಿತ್ರವನ್ನು ಅರ್ಪಿಸುತ್ತಿದ್ದಾರೆ. ಇನ್ನು ಈ ಚಿತ್ರದ ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ಅನ್ನು ರವಿ ಬಸ್ರೂರು ಬಾರಿಸಿದ್ದಾರೆ. 2020ರಲ್ಲಿ ಬಿಡುಗಡೆಯಾಗಿದ್ದ ಚಿತ್ರದ ಮೋಷನ್ ಪೋಸ್ಟರ್‌ನಲ್ಲಿ ರವಿ ಬಸ್ರೂರು ಬಿಜಿಎಂ ಸಿಕ್ಕಾಪಟ್ಟೆ ಸದ್ದು ಮಾಡಿತ್ತು, ಅದೇ ರೀತಿ ಈ ಬಾರಿಯೂ ಸಹ ರವಿ ಬಸ್ರೂರು ಸಂಗೀತದ ಮೇಲೆ ನಿರೀಕ್ಷೆ ಹೆಚ್ಚಿದೆ.

  ಚಿತ್ರ ಸೆಟ್ಟೇರಿದಾಗಿನಿಂದಲೂ ಚಿತ್ರದ ಕುರಿತು ದೊಡ್ಡ ಮಟ್ಟದ ನಿರೀಕ್ಷೆಯಿದ್ದು, ಚಿತ್ರದ ಪೋಸ್ಟರ್‌ಗಳೂ ಸಹ ಚಿತ್ರದ ಕ್ವಾಲಿಟಿಯ ಮಟ್ಟವನ್ನು ತಿಳಿಸಿದ್ದವು. ಸದ್ಯ ಟೀಸರ್ ಬಿಡುಗಡೆ ದಿನಾಂಕಕ್ಕೆ ದಿನಗಣನೆ ಆರಂಭವಾಗಿದ್ದು, ಟೀಸರ್ ಮೇಲೆ ಸಿನಿ ರಸಿಕರಲ್ಲಿ ದೊಡ್ಡ ಮಟ್ಟದ ನಿರೀಕ್ಷೆಯಿದೆ.

  ಟೀಸರ್ ಬಿಡುಗಡೆಯ ಸಮಯ

  ಟೀಸರ್ ಬಿಡುಗಡೆಯ ಸಮಯ

  ಕಬ್ಜ ಚಿತ್ರದ ಟೀಸರ್ ಸೆಪ್ಟೆಂಬರ್ 17ರ ಸಂಜೆ 5.04ಕ್ಕೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ದೇಶಕ ಆರ್. ಚಂದ್ರು ಮಾಹಿತಿ ನೀಡಿದ್ದಾರೆ.

  ಟೀಸರ್ ಲೆಂತ್ ಎಷ್ಟು?

  ಟೀಸರ್ ಲೆಂತ್ ಎಷ್ಟು?

  ಇನ್ನು ಕಬ್ಜ ಚಿತ್ರದ ಟೀಸರ್ ಒಂದೂವರೆ ನಿಮಿಷಕ್ಕೂ ಹೆಚ್ಚಿನ ಲೆಂತ್ ಇರಲಿದೆ ಎಂಬ ಮಾಹಿತಿಯನ್ನು ನಿರ್ದೇಶಕ ಆರ್ ಚಂದ್ರು ತಿಳಿಸಿದ್ದಾರೆ. ಈ ಮೂಲಕ ಟೀಸರ್‌ನಲ್ಲಿ ಹೆಚ್ಚು ದೃಶ್ಯಾವಳಿಗಳು ಇರಲಿವೆ ಎಂಬುದು ಖಚಿತವಾಗಿದೆ.

  ಎಷ್ಟು ಭಾಷೆಯಲ್ಲಿ ಟೀಸರ್ ರಿಲೀಸ್?

  ಎಷ್ಟು ಭಾಷೆಯಲ್ಲಿ ಟೀಸರ್ ರಿಲೀಸ್?

  ಕಬ್ಜ ಪ್ಯಾನ್ ಇಂಡಿಯಾ ಚಿತ್ರವಾಗಿದ್ದರೂ ಸಹ ಎಲ್ಲಾ ಭಾಷೆಗೂ ಸೇರಿದಂತೆ ಕೇವಲ ಒಂದು ಟೀಸರ್ ಅನ್ನು ಕಟ್ ಮಾಡಲು ಚಿತ್ರತಂಡ ತೀರ್ಮಾನಿಸಿದೆ. ಈ ಮೂಲಕ ಕೆಜಿಎಫ್ ರೀತಿ ಕಬ್ಜ ಚಿತ್ರದ ಟೀಸರ್ ಕೂಡ ಎಲ್ಲಾ ಭಾಷೆಗೂ ಒಂದೇ ಇರಲಿದೆ.

  ದಾಖಲೆಯಾಗುವ ಸಾಧ್ಯತೆ

  ದಾಖಲೆಯಾಗುವ ಸಾಧ್ಯತೆ

  ಇನ್ನು ಈ ಟೀಸರ್ ಎಲ್ಲಾ ಭಾಷೆಗೂ ಸೇರಿದಂತೆ ಒಂದೇ ಇರಲಿರುವ ಕಾರಣ ದಾಖಲೆ ಬರೆಯುವ ಸಾಧ್ಯತೆ ಹೆಚ್ಚಿದೆ ಎಂದೇ ಹೇಳಬಹುದು. ವಿವಿಧ ಭಾಷೆಗಳಿಗೆ ವಿವಿಧ ಟೀಸರ್ ಬಿಡುವ ಬದಲು ಈ ರೀತಿ ಸಿಂಗಲ್ ಟೀಸರ್ ಬಿಡುವುದರಿಂದ ರೀಚ್ ಮತ್ತೊಂದು ಹಂತದಲ್ಲಿರುವುದು ಖಚಿತ.

  English summary
  Kabzaa teaser to release on 17th September: Time and teaser length details. Take a look.
  Tuesday, September 13, 2022, 9:30
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X