ಕಬ್ಜ ಟ್ರೈಲರ್ ಬಿಡುಗಡೆಗೆ ಮುಹೂರ್ತ ಫಿಕ್ಸ್; ನಂ.1 ಆಗಲು ಯಾವ ಚಿತ್ರದ ಟ್ರೈಲರ್ ಹಿಂದಿಕ್ಕಬೇಕು?

ಸದ್ಯ ಕನ್ನಡ ಚಿತ್ರಗಳ ಪೈಕಿ ಅತಿದೊಡ್ಡ ಮಟ್ಟದ ನಿರೀಕ್ಷೆ ಹಾಗೂ ಕುತೂಹಲವನ್ನು ಹುಟ್ಟುಹಾಕಿರುವ ಚಿತ್ರವೆಂದರೆ ಅದು ಆರ್ ಚಂದ್ರು ನಿರ್ದೇಶನದ ಕಬ್ಜ. ಈ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ನಾಯಕನಾಗಿ ನಟಿಸಿದ್ದು, ನಾಯಕಿಯಾಗಿ ಬಹುಭಾಷಾ ತಾರೆ ಶ್ರೀಯಾ ಶರಣ್ ಬಣ್ಣ ಹಚ್ಚಿದ್ದಾರೆ. ಈ ಹಿಂದೆ ಮುಕುಂದ ಮುರಾರಿ ಚಿತ್ರದಲ್ಲಿ ಉಪ್ಪಿ ಜತೆ ತೆರೆ ಹಂಚಿಕೊಂಡಿದ್ದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಈ ಚಿತ್ರದಲ್ಲೂ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ.

ಸೆಟ್ಟೇರಿದಾಗಿನಿಂದಲೂ ಭಾರೀ ನಿರೀಕ್ಷೆ ಹುಟ್ಟುಹಾಕಿರುವ ಕಬ್ಜ ಚಿತ್ರ ಕಳೆದ ವರ್ಷ ಬಿಡುಗೆಡೆಗೊಂಡ ಟೀಸರ್ ಮೂಲಕ ತನ್ನ ಮೇಲಿದ್ದ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿತ್ತು. ಉಪೇಂದ್ರ ಹಿಂದೆಂದೂ ಕಾಣಿಸಿಕೊಂಡಿರದಂತಹ ರಾಯಲ್ ಗ್ಯಾಂಗ್‌ಸ್ಟರ್ ಪಾತ್ರದಲ್ಲಿ ಅಬ್ಬರಿಸಿದ್ದರು, ಆರ್ ಚಂದ್ರು ಮೇಕಿಂಗ್‌ಗೆ ಸಿನಿ ರಸಿಕರು ಫಿದಾ ಆಗಿದ್ದರು ಹಾಗೂ ವಿ‍ಶೇಷವಾಗಿ ಟೀಸರ್ ಎಡಿಟ್ ಮಾಡಿದ್ದ ಪರಿಗೆ ಮತ್ತು ರವಿ ಬಸ್ರೂರು ಅವರ ಬ್ಯಾಕ್‌ಗ್ರೌಂಡ್ ಮ್ಯೂಸಿಕ್‌ಗೆ ಫುಲ್ ಮಾರ್ಕ್ಸ್ ಕೊಟ್ಟಿದ್ದರು.

Kabzaa trailer needs to cross 18 million views in 24 hours to beat KGF 2 and set most viewed record

ಇದಾದ ಬಳಿಕ ಹಾಡುಗಳು ಹಾಗೂ ಸಣ್ಣ ಪುಟ್ಟ ಮೇಕಿಂಗ್ ವಿಡಿಯೊಗಳ ಮೂಲಕ ಸಿನಿ ರಸಿಕರ ಗಮನ ಸೆಳೆಯುವಲ್ಲಿ ಯಶಸ್ವಿಯಾದ ಕಬ್ಜ ಚಿತ್ರದ ಟ್ರೈಲರ್ ಯಾವಾಗ ಬಿಡುಗಡೆಯಾಗಲಿದೆ ಎಂಬ ಪ್ರಶ್ನೆ ಉಪ್ಪಿ, ಸುದೀಪ್ ಅಭಿಮಾನಿಗಳು ಹಾಗೂ ಸಿನಿ ರಸಿಕರಲ್ಲಿ ಮೂಡಿತ್ತು. ಈ ಪ್ರಶ್ನೆಗೆ ನಿರ್ದೇಶಕ ಆರ್ ಚಂದ್ರು ಪೋಸ್ಟ್ ಒಂದನ್ನು ಹಂಚಿಕೊಳ್ಳುವುದರ ಮೂಲಕ ಉತ್ತರವನ್ನು ನೀಡಿದ್ದಾರೆ.

ಕಬ್ಜ ಚಿತ್ರದ ಟ್ರೈಲರ್ ಇದೇ ಮಾರ್ಚ್ ( ಶುಕ್ರವಾರ ) 4ರ ಸಂಜೆ 5.02 ಗಂಟೆಗೆ ಆನಂದ್ ಆಡಿಯೊ ಯುಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ಆರ್ ಚಂದ್ರು ತಿಳಿಸಿದ್ದಾರೆ. ಟೀಸರ್ ಮೂಲಕ ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಯ ಅಪಾರ ಸಿನಿ ರಸಿಕರನ್ನು ತನ್ನ ಸೆಳೆದಿದ್ದ ಪ್ಯಾನ್ ಇಂಡಿಯಾ ಚಿತ್ರ ಕಬ್ಜ ಇದೀಗ ಟ್ರೈಲರ್ ಮೂಲಕ ಯಾವ ರೀತಿಯ ಮೋಡಿ ಮಾಡಲಿದೆ ಕಾದು ನೋಡಬೇಕಿದೆ. ಇನ್ನು ಕಬ್ಜ ಚಿತ್ರದ ಟ್ರೈಲರ್ ಬಿಡುಗಡೆಯಾದ 24 ಗಂಟೆಗಳಲ್ಲಿ ಎಷ್ಟು ವ್ಯೂಸ್ ಪಡೆದುಕೊಳ್ಳಲಿದೆ ಎಂಬ ಕುತೂಹಲ ಹಾಗೂ ಚರ್ಚೆಗಳು ಹೆಚ್ಚಾಗಿದೆ.

Kabzaa trailer needs to cross 18 million views in 24 hours to beat KGF 2 and set most viewed record

ಹೌದು, ಕಬ್ಜ ಚಿತ್ರದ ಕನ್ನಡ ಟ್ರೈಲರ್ ಬಿಡುಗಡೆಯಾದ 24 ಗಂಟೆಗಳಲ್ಲಿ ಎಷ್ಟು ವೀಕ್ಷಣೆ ಪಡೆದುಕೊಂಡರೆ, ಒಂದು ದಿನದಲ್ಲಿ ಅತಿಹೆಚ್ಚು ವ್ಯೂಸ್ ಪಡೆದುಕೊಂಡ ಕನ್ನಡ ಟ್ರೈಲರ್ ಎಂಬ ದಾಖಲೆಯನ್ನು ಬರೆಯಲಿದೆ ಎಂಬ ಚರ್ಚೆಗಳು ಆರಂಭವಾಗಿವೆ. ಹಾಗಿದ್ದರೆ ಬಿಡುಗಡೆಗೊಂಡ 24 ಗಂಟೆಗಳಲ್ಲಿ ಕನ್ನಡದ ಯಾವ ಚಿತ್ರಗಳ ಟ್ರೈಲರ್‌ಗಳು ಅತಿಹೆಚ್ಚು ವ್ಯೂಸ್ ಪಡೆದುಕೊಂಡಿದ್ದವು ಎಂಬ ಮಾಹಿತಿ ಈ ಕೆಳಕಂಡಂತಿದೆ.

1. ಯಶ್ ನಟನೆಯ ಕೆಜಿಎಫ್ ಚಾಪ್ಟರ್ 2 ಚಿತ್ರದ ಕನ್ನಡ ಟ್ರೈಲರ್ ಬಿಡುಗಡೆಯಾದ 24 ಗಂಟೆಗಳಲ್ಲಿ 18 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಳ್ಳುವುದರ ಮೂಲಕ ಅಗ್ರಸ್ಥಾನದಲ್ಲಿದೆ. ಕಬ್ಜ ದಾಖಲೆ ಮಾಡಬೇಕೆಂದರೆ ಇದಕ್ಕಿಂತ ಹೆಚ್ಚು ವ್ಯೂಸ್ ಪಡೆಯಬೇಕಿದೆ.

2. ದರ್ಶನ್ ನಟನೆಯ ಯಜಮಾನ ಚಿತ್ರದ ಟ್ರೈಲರ್ ಬಿಡುಗಡೆಯಾದ 24 ಗಂಟೆಗಳಲ್ಲಿ 10 ಮಿಲಿಯನ್ ವ್ಯೂಸ್ ಪಡೆದುಕೊಂಡಿತ್ತು.

3. ಪುನೀತ್ ರಾಜ್‌ಕುಮಾರ್ ಗಂಧದ ಗುಡಿ ಚಿತ್ರದ ಟ್ರೈಲರ್ ಬಿಡುಗಡೆಯಾದ 24 ಗಂಟೆಗಳಲ್ಲಿ 8.1 ಮಿಲಿಯನ್ ವ್ಯೂಸ್ ಪಡೆದುಕೊಂಡಿತ್ತು.

4. ದರ್ಶನ್ ನಟನೆಯ ಕ್ರಾಂತಿ ಚಿತ್ರದ ಟ್ರೈಲರ್ ಬಿಡುಗಡೆಯಾದ 24 ಗಂಟೆಗಳಲ್ಲಿ 7.8 ಮಿಲಿಯನ್ ವ್ಯೂಸ್ ಪಡೆದುಕೊಂಡಿತ್ತು.

5. ಸುದೀಪ್ ನಟನೆಯ ವಿಕ್ರಾಂತ್ ರೋಣ ಚಿತ್ರದ ಟ್ರೈಲರ್ ಬಿಡುಗಡೆಯಾದ 24 ಗಂಟೆಗಳಲ್ಲಿ 7.1 ಮಿಲಿಯನ್ ವ್ಯೂಸ್ ಪಡೆದುಕೊಂಡಿತ್ತು.

ಇನ್ನು ಕಬ್ಜ ಚಿತ್ರದ ಮೂರು ಹಾಡುಗಳು ಈಗಾಗಲೇ ಬಿಡುಗಡೆಗೊಂಡು ಕೇಳುಗರಿಂದ ಒಳ್ಳೆಯ ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳುತ್ತಿದ್ದು, ಚಿತ್ರವನ್ನು ಇದೇ ಮಾರ್ಚ್ 17ರಂದು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಅಂಗವಾಗಿ ಬಿಡುಗಡೆ ಮಾಡಲಾಗುತ್ತಿದೆ. ಈ ಚಿತ್ರವನ್ನು ಅಪ್ಪು ಅವರ ಹುಟ್ಟುಹಬ್ಬದಂದು ಬಿಡುಗಡೆಗೊಳಿಸಿ ಅವರಿಗೆ ಅರ್ಪಿಸಲಿದ್ದೇವೆ ಎಂದು ಆರ್ ಚಂದ್ರು ಈಗಾಗಲೇ ಘೋಷಣೆಯನ್ನೂ ಸಹ ಮಾಡಿದ್ದಾರೆ.

More from Filmibeat

English summary
Kabzaa trailer needs to cross 18 million views in 24 hours to beat KGF 2 and set most viewed record. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X