ಪ್ರೀತಿ, ಕ್ರೌರ್ಯದ 'ಕಡಲ ತೀರದ ಭಾರ್ಗವ' ಟೀಸರ್ ಬಿಡುಗಡೆ

By ಫಿಲ್ಮಿಬೀಟ್ ಡೆಸ್ಕ್

ಪನ್ನಗ ಸೋಮಶೇಖರ್ ನಿರ್ದೇಶನದಲ್ಲಿ ವರುಣ್ ರಾಜು ಪಟೇಲ್ ಹಾಗೂ ಭರತ್ ಗೌಡ ನಾಯಕರಾಗಿ ನಟಿಸಿರುವ "ಕಡಲ ತೀರದ ಭಾರ್ಗವ" ಚಿತ್ರದ ಟೀಸರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನೆರವೇರಿತು. ಚಿತ್ರದ ಟೀಸರ್ ಸಾಕಷ್ಟು ಕುತೂಹಲ ಮೂಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.

''ನಮ್ಮ ಚಿತ್ರ ಹಿರಿಯ ಸಾಹಿತಿ ಶಿವರಾಮ ಕಾರಂತರ ಕುರಿತಾದುದ್ದಲ್ಲ . ಇದರಲ್ಲಿ ನಾಯಕನ ಹೆಸರು‌ ಭಾರ್ಗವ.. ಆತ ಕಡಲತೀರದವನು. ಇನ್ನೊಂದು ರೀತಿಯಲ್ಲಿ ವಿಷ್ಣುವಿನ ಆರನೇ ಅವತಾರ ಪರಶುರಾಮ. ಆತನನ್ನು ಭಾರ್ಗವ ರಾಮ‌ ಎಂತಲೂ ಕರೆಯುತ್ತಾರೆ. ಭಾರ್ಗವರಾಮ ಸಾವಿಲ್ಲದವ. ದುಷ್ಟ ಕ್ಷತ್ರಿಯರನ್ನು ಧ್ವಂಸ ಮಾಡಿದವ. ನಮ್ಮ ನಾಯಕನ‌ ಪಾತ್ರದಲ್ಲೂ ಈ ಗುಣಗಳಿವೆ.‌ ಹಾಗಾಗೂ ಈ ಶೀರ್ಷಿಕೆ ಸೂಕ್ತ ಎನಿಸಿತು. ಸದ್ಯ ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದೇವೆ‌. ನವೆಂಬರ್ ಮೊದಲವಾರದಲ್ಲಿ ಟ್ರೇಲರ್ ಬರಲಿದೆ.‌ ನವೆಂಬರ್ ಅಂತ್ಯ ಅಥವಾ ಡಿಸೆಂಬರ್ ಮದಲವಾರದಲ್ಲಿ ಚಿತ್ರವನ್ನು ತೆರೆಗೆ ತರುವ ತಯಾರಿ ನಡೆಯುತ್ತಿದೆ'' ಎಂದರು ನಿರ್ದೇಶಕ ಪನ್ನಗ ಸೋಮಶೇಖರ್.

''ನಾನು, ನಿರ್ದೇಶಕರು ಹಾಗೂ ಚಿತ್ರದ ಮತ್ತೊಬ್ಬ ನಾಯಕ ಭರತ್ ಗೌಡ ಹತ್ತುವರ್ಷಗಳ ಸ್ನೇಹಿತರು. ಹಿಂದೆ ಅಪಘಾತದಲ್ಲಿ ಕಾಲು ಮುರಿದುಕೊಂಡಿದ್ದೆ.‌ ಆ ಸಮಯದಲ್ಲಿ ಈ ಕಥೆ ಕೇಳಿದೆ. ಹಾಗೆ ಚಿತ್ರ ಆರಂಭವಾಯಿತು. ಭಾರ್ಗವನ ಪಾತ್ರದಲ್ಲಿ ‌ನಾನು ನಟಿಸುತ್ತಿದ್ದೇನೆ. ಒಬ್ಬ ವ್ಯಕ್ತಿಯಲ್ಲಿ ಹೀರೋ ಹಾಗೂ ವಿಲನ್‌ ಎರಡೂ ಗುಣಗಳಿರುತ್ತವೆ. ನನ್ನದು ಇದೇ ರೀತಿ ಪಾತ್ರ'' ಎಂದರು ನಾಯಕ ವರುಣ್ ರಾಜು ಪಟೇಲ್.

Kadala Theerada Bhargava Movie Teaser Released

''ನಾನು ಹಾಗೂ ಪನ್ನಗ ಸೋಮಶೇಖರ್ ಗೆಳೆಯರು. ಹಾಗೆ ನಿರ್ದೇಶಕರು ವರುಣ್ ಕೂಡ ಸ್ನೇಹಿತರು. ನಿರ್ದೇಶಕರು ಹೇಳಿದ ಕತೆ ಮನ ತಟ್ಟಿತು. ಆನಂತರ ನಿರ್ಮಾಪಕರ ಹುಡುಕಾಟ. ಕೊನೆಗೆ ವರುಣ್, ನಾನು ಸೇರಿ ನಿರ್ಮಾಣ ಆರಂಭಿಸಿದ್ದೆವು. ನನ್ನ ಸ್ನೇಹಿರೊಬ್ಬರು ಬಳಿ ನಿರ್ಮಾಣ ಮಾಡುತ್ತಿದ್ದೆನೆ ಎಂದು ಹೇಳಿದಾಗ, ಇದೊಂದು ತಪ್ಪಸ್ಸಿನ ತರಹ ಎಂದರು. ಆಮೇಲೆ ಆ ಮಾತಿನ ಅರ್ಥವಾಯಿತು. ಎರಡುವರ್ಷಗಳ ಹಿಂದೆ ಚಿತ್ರೀಕರಣ ಆರಂಭಿಸಿದಾಗ ಕಡಲತೀರದ ಕಡೆ ಎಂದು ಕೇಳರಿಯದ ಮಳೆ. ಡಿಸೆಂಬರ್ ತನಕ ಎಲ್ಲೋ ಅಲರ್ಟ್ ಘೋಷಣೆ. ‌ಆನಂತರ ಋಷಿಗಳ ತಪ್ಪಸ್ಸಿಗೆ ರಾಕ್ಷಸರು ಅಡಿಪಡಿಸಿದಂತೆ, ನಮಗೆ ತೊಂದರೆ ಕೊಡಲು ಕೊರೋನ‌ ಬಂತು. ಈಗ ನಮ್ಮ ಚಿತ್ರ ಎಲ್ಲಾ ಅಡ್ಡಿ ಆತಂಕಗಳನ್ನು ದಾಟಿ ಬಿಡುಗಡೆ ಹಂತ ತಲುಪಿದೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ'' ಎಂದರು ಮತ್ತೊಬ್ಬ ನಾಯಕ ಭರತ್ ಗೌಡ.

''ಈ ಚಿತ್ರದಲ್ಲಿ ನನ್ನ ಪಾತ್ರದ ಹೆಸರು ಇಂಪನ.‌ ಸದಾ ಕೆಲಸದ ಒತ್ತಡದಲ್ಲಿರುವ ಅಪ್ಪ. ಎಲ್ಲದಕ್ಕೂ ಕಂಟ್ರೋಲ್‌ ಮಾಡುವ ಅಮ್ಮ. ಅದರಿಂದ ಆಕೆಗೆ ಚಿಕ್ಕಂದಿನಿಂದಲೂ ಕುಟುಂಬದ ಪ್ರೀತಿ ಸಿಕ್ಕಿರುವುದಿಲ್ಲ. ಆದರೆ‌ ಅವಳ ಭಾವನೆ ಹೇಳಿಕೊಳ್ಳಲು ಒಬ್ಬರು ಆಂಟಿ ಇರುತ್ತಾರೆ. ನಂತರ ಅವರು ಅಸುನೀಗುತ್ತಾರೆ. ಆನಂತರ ಇಂಪನಾಗೆ ನಾಯಕ ಭರತ್ ಸಿಗುತ್ತಾನೆ. ಮುಂದಿನದು ಚಿತ್ರದಲ್ಲಿ ನೋಡಬೇಕು ಎಂದು ತಮ್ಮ ಪಾತ್ರ ಪರಿಚಯ ಮಾಡಿಕೊಂಡರು ನಾಯಕಿ, ಬಿಗ್‌ ಬಾಸ್ ಖ್ಯಾತಿಯ ಶೃತಿ ಪ್ರಕಾಶ್.

''ಕಳೆದ ಎರಡುವರ್ಷಗಳಿಂದ ಯಾರನ್ನು ಭೇಟಿಯಾಗಿರಲಿಲ್ಲ. ಎಲ್ಲರನ್ನೂ ನೋಡಿ ಸಂತೋಷವಾಗಿದೆ. ಇತ್ತೀಚಿನ ದಿನಗಳಲ್ಲಿ ನನಗೆ ತುಂಬಾ ಹಿಡಿಸಿರುವ ಪಾತ್ರ ಈ ಚಿತ್ರದಲ್ಲಿ ಸಿಕ್ಕಿದೆ. ಚಿತ್ರತಂಡಕ್ಕೆ ಶುಭಾವಾಗಲಿ'' ಎಂದರು ನಟ ಈಟಿವಿ ಶ್ರೀಧರ್.

Kadala Theerada Bhargava Movie Teaser Released

''ಚಿತ್ರದ ಶೀರ್ಷಿಕೆ ನನಗೆ ಬಹಳ ಹಿಡಿಸಿತು. ಮೂಲತಃ ನಿರ್ದೇಶಕರು ಗಿಟಾರ್ ಪ್ಲೇಯರ್. ಅವರಿಗೆ ಸಂಗೀತ ಜ್ಞಾನವಿರುವುದರಿಂದ ಉತ್ತಮ ಹಾಡುಗಳು ಮೂಡಿಬರಲು ಸಹಕಾರಿಯಾಯಿತು. ಒಂದು ಬಿಟ್ ಸಾಂಗ್ ಸೇರಿದಂತೆ ಒಂಭತ್ತು ಹಾಡುಗಳಿದೆ. ಖ್ಯಾತ ಗೀತರಚನೆಕಾರರು ಬರೆದಿರುವ ಈ ಚಿತ್ರದ ಹಾಡುಗಳನ್ನು ಪ್ರಸಿದ್ಧ ಗಾಯಕರು ಹಾಡಿದ್ದಾರೆ'' ಎಂದು ಚಿತ್ರದ ಸಂಗೀತದ ಬಗ್ಗೆ ಮಾಹಿತಿ ನೀಡಿದರು ಸಂಗೀತ ನಿರ್ದೇಶಕ ಅನಿಲ್ ಸಿ.ಜೆ.

ಚಿತ್ರದ ನಾಯಕರಾದ ವರುಣ್ ರಾಜು ಪಟೇಲ್ ಹಾಗೂ ಭರತ್ ಗೌಡ ಈ ಚಿತ್ರದ ನಿರ್ಮಾಪಕರು ಹೌದು. ಪನ್ನಗ ಸೋಮಶೇಖರ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಅನಿಲ್ ಸಿ ಜೆ ಸಂಗೀತ ನಿರ್ದೇಶನ, ಕೀರ್ತನ್ ಪೂಜಾರ್ ಛಾಯಾಗ್ರಹಣ ಹಾಗೂ ಆಶಿಕ್ ಕುಸುಗೊಳ್ಳಿ , ಉಮೇಶ್ ಭೋಸಗಿ ಅವರ ಸಂಕಲನವಿದೆ. ವರುಣ್ ರಾಜು ಪಟೇಲ್, ಭರತ್ ಗೌಡ, ಶೃತಿ ಪ್ರಕಾಶ್ , ಈಟಿವಿ ಶ್ರೀಧರ್, ರಾಘವ್ ನಾಗ್, ಅಶ್ವಿನ್ ಹಾಸನ್ ಮುಂತಾದವರ ತಾರಾಬಳಗ ಈ ಚಿತ್ರದಲ್ಲಿದೆ.

More from Filmibeat

English summary
Kadala Theerada Bhargava Kannada movie teaser released. Movie team said movie does not related to poet Shivaram Karanth.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X