12 Years Of Kaddipudi; ಶಿವಣ್ಣ-ಸೂರಿ 'ಕಡ್ಡಿಪುಡಿ' ಖದರ್ ಹೇಗಿತ್ತು? ಚಿತ್ರದ ಬಜೆಟ್, ಗಳಿಕೆ ಎಷ್ಟಾಗಿತ್ತು?

ದುನಿಯಾ ಸೂರಿ ನಿರ್ದೇಶನದಲ್ಲಿ ಶಿವಣ್ಣ ನಟನೆಯ ಸೂಪರ್ ಹಿಟ್ ಸಿನಿಮಾ 'ಕಡ್ಡಿಪುಡಿ'. ಪುನೀತ್ ರಾಜ್‌ಕುಮಾರ್ ಜೊತೆ 'ಜಾಕಿ' ಹಾಗೂ 'ಅಣ್ಣಾಬಾಂಡ್' ಸಿನಿಮಾಗಳ ಬಳಿಕ ಶಿವಣ್ಣನ ಜೊತೆ ಸೂರಿ ಮಾಡಿದ್ದ ಮೊದಲ ಸಿನಿಮಾ ಇದು.

ಶಿವಣ್ಣನ ಜೊತೆ ರಾಧಿಕಾ ಪಂಡಿತ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಅನಂತ್ ನಾಗ್ ನಿರೂಪಣೆಯಲ್ಲಿ ಸಿನಿಮಾ ಕಥೆ ಸಾಗುವಂತೆ ಕಟ್ಟಿಕೊಡಲಾಗಿತ್ತು. ರಾಜೇಶ್ ನಟರಂಗ, ಶರತ್ ಲೋಹಿತಾಶ್ವ, ರಂಗಾಯಣ ರಘು, ಅವಿನಾಶ್ ಹೀಗೆ ಅನುಭವಿ ಕಲಾವಿದರು ಚಿತ್ರದಲ್ಲಿದ್ದರು. ಕೃಷ್ಣ ಛಾಯಾಗ್ರಹಣ, ಹರಿಕೃಷ್ಣ ಸಂಗೀತ ಚಿತ್ರದ ಹೈಲೆಟ್ ಆಗಿತ್ತು.

Kaddipudi Completes 12 Years Producer Chandru Recalls Filmmaking Experience with Shivanna and Suri

ಒಮ್ಮೆ ಭೂಗತಲೋಕಕ್ಕೆ ಎಂಟ್ರಿ ಕೊಟ್ಟಮೇಲೆ ಮುಗೀತು. ಬಳಿಕ ಅದನ್ನು ಬಿಟ್ಟು ಬದುಕುವುದು ಅಷ್ಟು ಸುಲಭವಲ್ಲ. ಚಿತ್ರದಲ್ಲಿ ಆನಂದ್ ಅಲಿಯಾಸ್ ಕಡ್ಡಿಪುಡಿ ರೌಡಿಸಂ ಬಿಟ್ಟು ಬದುಕೋಕೆ ಆಗುತ್ತಾ? ಇಲ್ವಾ? ಎನ್ನುವುದರ ಸುತ್ತಾ ಒಂದಷ್ಟು ಮಾಸ್ ಎಲಿಮೆಂಟ್ಸ್ ಸೇರಿಸಿ ಸೂರಿ 'ಕಡ್ಡಿಪುಡಿ' ಸಿನಿಮಾ ತೆರೆಗೆ ತಂದಿದ್ದರು.

ಟೈಟಲ್‌ನಿಂದಲೇ 'ಕಡ್ಡಿಪುಡಿ' ಸಿನಿಮಾ ವೈಬ್ರೇಷನ್ ಕ್ರಿಯೇಟ್ ಮಾಡಿತ್ತು. ಎಂ. ಚಂದ್ರು ಚಿತ್ರಕ್ಕೆ ಬಂಡವಾಳ ಹಾಕಿದ್ದರು. ಜೂನ್ 7, 2013ರಂದು ಸಿನಿಮಾ ತೆರಗಪ್ಪಳಿಸಿತ್ತು. ಪ್ರೇಕ್ಷಕರಿಂದ ಮಿಶ್ರಪ್ರತಿಕ್ರಿಯೆ ಸಿಕ್ಕರೂ ಬಳಿಕ ಕಲ್ಟ್ ಸ್ಟೇಟಸ್ ಪಡೆದುಕೊಂಡಿತ್ತು. ಸೂರಿ ಪ್ರಯೋಗಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಸಿನಿಮಾ ಇಂದಿಗೆ 12 ವರ್ಷ ಪೂರೈಸಿದೆ. ಈ ಸಂದರ್ಭದಲ್ಲಿ ನಿರ್ಮಾಪಕ ಎಂ. ಚಂದ್ರು ಸಿನಿಮಾ ಬಗ್ಗೆ ಫಿಲ್ಮಿಬೀಟ್ ಕನ್ನಡ ಜೊತೆ ಮಾತನಾಡಿದ್ದಾರೆ.

'ಕಡ್ಡಿಪುಡಿ' ಚಿತ್ರ ಶುರುವಾಗಿದ್ದೇಗೆ?

'ದುನಿಯಾ' ಸಿನಿಮಾ ಸಮಯದಿಂದಲೂ ಸೂರಿ ಅವರೊಟ್ಟಿಗೆ ಪರಿಚಯ ಇತ್ತು. ಆಗಾಗ್ಗೆ ಒಟ್ಟಿಗೆ ಸೇರುತ್ತಿದ್ದೆವು. ಸಿನಿಮಾ ಬಗ್ಗೆ ಮಾತನಾಡುತ್ತಿದ್ದೆವು. ಒಮ್ಮೆ ನಾನೇ ಸೂರಿ ಅವರ ಬಳಿ ಶಿವಣ್ಣನ ಸಿನಿಮಾ ಮಾಡೋಣ ಎಂದೆ. ಸಿನಿಮಾ ಮಾಡುವ ಬಗ್ಗೆ ಮೊದಲು ಪ್ರಸ್ತಾಪ ಮಾಡಿದ್ದು ನಾನೇ. ಹೀಗೆ ಚರ್ಚಿಸುವ ವೇಳೆ 'ಕಡ್ಡಿಪುಡಿ' ಎಂಬ ಟೈಟಲ್ ಫಿಕ್ಸ್ ಆಯ್ತು. ನಾನೇ ಹೋಗಿ ಶಿವಣ್ಣ ಅವ್ರನ್ನು ಅಪ್ರೋಚ್ ಮಾಡ್ದೆ. ಅವ್ರು ಓಕೆ ಅಂದ್ರು. ಬಳಿಕ ಒಂದು ಲೈನ್ ಕಥೆ ಹೇಳಿದ್ವಿ. ಸರಿ ಎಂದು ಸಿನಿಮಾ ಶುರುವಾಯಿತು.

ಕ್ರೇಜಿ ಕಾಂಬೊ, ದೊಡ್ಡ ಬಜೆಟ್ ಸಿನಿಮಾ ನಿರ್ಮಾಣಕ್ಕೆ ತಯಾರಿ ಹೇಗಿತ್ತು?

ನಾನು ಚಿತ್ರರಂಗದಲ್ಲೇ ಇದ್ದಿದ್ದರಿಂದ ಸಿನಿಮಾ ವ್ಯಾಪಾರ ಗೊತ್ತಿದ್ದರಿಂದ ಕಷ್ಟವಾಗಲಿಲ್ಲ. ಮೋಹನ್, ಜಯಣ್ಣ ಎಲ್ಲರೂ ಜೊತೆಗಿದ್ದರು. ಹಾಗಾಗಿ ಧೈರ್ಯ ಮಾಡಿದ್ದೆ. ನನ್ನ ಬಳಿ ಸ್ವಲ್ಪ ಹಣ ಇತ್ತು, ಜೊತೆಗೆ ಫೈನಾನ್ಸ್ ತೆಗೆದುಕೊಂಡಿದ್ದೆ. ಎಲ್ಲಾ ಸೇರಿಸಿ ಸಿನಿಮಾ ನಿರ್ಮಾಣವಾಯಿತು. ಅವತ್ತಿನ ಕಾಲಕ್ಕೆ 6.50 ಕೋಟಿ ರೂ. ಬಜೆಟ್ ಆಗಿತ್ತು.

Kaddipudi Completes 12 Years Producer Chandru Recalls Filmmaking Experience with Shivanna and Suri

'ಕಡ್ಡಿಪುಡಿ' ಬ್ಯುಸಿನೆಸ್ ಎಷ್ಟಾಗಿತ್ತು?

ಹೆಚ್ಚು ಕಡಿಮೆ ಹಾಕಿದ್ದ ಬಜೆಟ್ ವಾಪಸ್ ಬಂದಿತ್ತು. ಇನ್ನುಳಿದಂತೆ ಸ್ಯಾಟಲೈಟ್ ರೈಟ್ಸ್, ಆಡಿಯೋ ರೈಟ್ಸ್‌ ಚೆನ್ನಾಗಿ ಆಗಿತ್ತು. ಶಿವಣ್ಣನ ಸಿನಿಮಾ ಸ್ಯಾಟಲೈಟ್ ರೈಟ್ಸ್ ಅಲ್ಲಿಯವರೆಗೆ ಆ ಬೆಲೆಗೆ ಮಾರಾಟವಾಗಿರಲಿಲ್ಲ. ಬರೋಬ್ಬರಿ 3 ಕೋಟಿ ರೂ.ಗೆ 'ಕಡ್ಡಿಪುಡಿ' ರೈಟ್ಸ್ ಸೇಲ್ ಮಾಡಿದ್ದೆ. ಇನ್ನು ಆಡಿಯೋ ರೈಟ್ಸ್ 30 ಲಕ್ಷ ರೂ.ಗೆ ಬಿಕರಿಯಾಗಿತ್ತು.

ಫಲಿತಾಂಶ ನಿರೀಕ್ಷಿತಮಟ್ಟದಲ್ಲಿ ಇರಲಿಲ್ಲ ಅಲ್ಲವೇ?

ನಿಜ ಹೇಳಬೇಕು ಅಂದ್ರೆ 'ಖಾಲಿ ಕ್ವಾಟ್ರು ಬಾಟ್ಲಿ' ಸಾಂಗ್ 'ಕಡ್ಡಿಪುಡಿ' ಚಿತ್ರಕ್ಕಾಗಿ ಯೋಗರಾಜ್ ಭಟ್ ಬರೆದಿದ್ದರು. ಆದರೆ ಆ ಹಾಡು ಯಾಕೋ ಸೂರಿ ಬೇಡ ಅಂದುಬಿಟ್ಟರು. ಅದು ಇದ್ದಿದ್ದರೆ ನಮ್ಮ ಚಿತ್ರಕ್ಕೆ ಇನ್ನು ಪ್ಲಸ್ ಆಗಿರುತ್ತಿತ್ತು. ಆದರೂ ಪ್ರೇಕ್ಷಕರು ಇವತ್ತಿಗೂ ಸಿನಿಮಾವನ್ನು ನೆನಪಿಸಿಕೊಳ್ಳುತ್ತಾರೆ. ಅದೇ ಖುಷಿ.

ಸಿನಿಮಾ ಮೇಕಿಂಗ್ ಅನುಭವ?

ಸಿಟಿ ಮಾರ್ಕೆಟ್‌ನಲ್ಲಿ ಒಮ್ಮೆ ಚಿತ್ರೀಕರಣ ಮಾಡಿದ್ದೆವು. ಅಷ್ಟು ಜನರ ನಡುವೆ ಶಿವಣ್ಣ ಲಾಂಗ್ ಹಿಡಿದು ನಡೆದು ಬರುವ ಸನ್ನಿವೇಶ ಸೆರೆಹಿಡಿಯುತ್ತಿದ್ದೆವು. ಕ್ಯಾಮರಾ ತೋರಿಸದೇ ಅದನ್ನು ಶೂಟ್ ಮಾಡೋಕೆ ಹೋಗಿದ್ದೆವು. ಹಾಗಾಗಿ ಜನ ಒಂದು ಕ್ಷಣ ಗಾಬರಿಯಾಗಿಬಿಟ್ಟಿದ್ದರು. 'ಮೆಜೆಸ್ಟಿಕ್' ಬಸ್‌ಸ್ಟ್ಯಾಂಡ್ ಬಳಿ ಕೂಡ ಇಂತದ್ದೇ ಸನ್ನಿವೇಶ ಶೂಟ್ ಮಾಡಿದ್ವಿ. ಅದನ್ನೆಲ್ಲಾ ಎಂದೂ ಮರೆಯೋಕೆ ಸಾಧ್ಯವಿಲ್ಲ.

'ಕಡ್ಡಿಪುಡಿ' ಇಂಟ್ರೆಸ್ಟಿಂಗ್ ಸಂಗತಿಗಳು?

ಚಿತ್ರದ ಓಪನಿಂಗ್‌ನಲ್ಲಿ ಒಂದು ಸನ್ನಿವೇಶ ಇದೆ. ಶಿವಣ್ಣನಿಗೆ ಇದು ನಿಮ್ಮ ಅಪ್ಪನ ರಸ್ತೆನಾ? ಎಂದು ಕೇಳುವ ಸೀನ್. ಅದನ್ನು ಸಂಭಾಷಣೆಕಾರ ಮಾಸ್ತಿ ಡಿಸೈನ್ ಮಾಡಿದ್ದು. ಈ ಚಿತ್ರದ ಮೂಲಕ ಸೂರಿಗೆ ಮಾಸ್ತಿ ಅವರನ್ನು ನಾನೇ ಪರಿಚಯಿಸಿದ್ದೆ. 'ಕಡ್ಡಿಪುಡಿ' ಚಿತ್ರದಿಂದ ಆತ ಸಂಭಾಷಣೆ ಬರೆಯುವಂತಾಯಿತು. ವಸಿಷ್ಠ ಸಿಂಹ ಕೂಡ 'ಕಡ್ಡಿಪುಡಿ' ಚಿತ್ರದಲ್ಲಿ ಮೊದಲಬಾರಿಗೆ ಸಣ್ಣ ಸನ್ನಿವೇಶದಲ್ಲಿ ನಟಿಸಿದ್ದರು. ಬಳಿಕೆ ಹೀರೊ ಆಗಿದ್ದು ಗೊತ್ತೇಯಿದೆ. ಇನ್ನು ನೆಗೆಟಿವ್(ರೀಲ್) ಬಳಸಿ ಚಿತ್ರೀಕರಣ ನಡೆಸಿದ ಕೊನೆಯ ಸಿನಿಮಾ 'ಕಡ್ಡಿಪುಡಿ'. ಬಳಿಕ ಕನ್ನಡದಲ್ಲಿ ಡಿಜಿಟಲ್ ತಂತ್ರಜ್ಞಾನ ಹೆಚ್ಚಾಯಿತು.

More from Filmibeat

English summary
12 years of 'Kaddipudi', producer M. Chandru Opens up on film budget, collection, result and more
Read more about: shivarajkumar suri sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X