»   » ಸೌತ್ ಸುಂದರಿ ಕಾಜಲ್ ಹುಟ್ಟುಹಬ್ಬಕ್ಕೆ ರಾಣಾ ಕೊಟ್ಟ ಸ್ಪೆಷಲ್ ಗಿಫ್ಟ್.!

ಸೌತ್ ಸುಂದರಿ ಕಾಜಲ್ ಹುಟ್ಟುಹಬ್ಬಕ್ಕೆ ರಾಣಾ ಕೊಟ್ಟ ಸ್ಪೆಷಲ್ ಗಿಫ್ಟ್.!

Posted By:
Subscribe to Filmibeat Kannada

ನಟಿ ಕಾಜಲ್ ಅಗರ್ವಾಲ್ ಇಂದು (ಜೂನ್ 19) ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. 31ನೇ ವರ್ಷಕ್ಕೆ ಕಾಲಿಟ್ಟಿರುವ 'ಮಗಧೀರನ ರಾಣಿ'ಗೆ ಶುಭಾಶಯಗಳ ಮಹಾಪೂರ ಹರಿದು ಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಾವಿರಾರೂ ಅಭಿಮಾನಿಗಳು ಕಾಜಲ್ ಗೆ ವಿಶ್ ಮಾಡುತ್ತಿದ್ದಾರೆ.

ಕಾಜಲ್ ಅಗರ್ವಾಲ್ ಹುಟ್ಟುಹಬ್ಬದ ವಿಶೇಷವಾಗಿ ಅವರ ಮುಂದಿನ ಸಿನಿಮಾ 'ನೇನೆ ರಾಜು ನೇನೆ ಮಂತ್ರಿ' ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಇನ್ನೊಂದು ವಿಶೇಷ ಅಂದರೆ ಇದು ಕಾಜಲ್ ಅಭಿನಯದ 50ನೇ ಸಿನಿಮಾವಾಗಿದೆ. ಈ ಚಿತ್ರದ ಟೀಸರ್ ಇದೀಗ ರಿಲೀಸ್ ಆಗಿ ದೊಡ್ಡ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ.

Kajal Agarwal 31th Birthday Special Gift

ಈ ಸಿನಿಮಾದಲ್ಲಿ ಕಾಜಲ್ ಗೆ ರಾಣಾ ದಗ್ಗುಬಾಟಿ ಜೋಡಿಯಾಗಿದ್ದಾರೆ. ಕಾಜಲ್ ಹುಟ್ಟುಹಬ್ಬಕ್ಕೆ ಟೀಸರ್ ಗಿಫ್ಟ್ ಕೊಡುವ ಪ್ಲಾನ್ ಮಾಡಿದ್ದ ರಾಣಾ ಅಂಡ್ ಟೀಂ ನಟಿಗೆ 'ಬಿಗ್' ಸರ್ಪೈಸ್ ನೀಡಿದೆ. ಈ ಸಿನಿಮಾದಲ್ಲಿ 'ರಾಧ' ಎಂಬ ಪಾತ್ರವನ್ನು ಕಾಜಲ್ ಅಗರ್ವಾಲ್ ನಿರ್ವಹಿಸುತ್ತಿದ್ದು ತಮ್ಮ ಹಾಫ್ ಸೆಂಚುರಿ ಚಿತ್ರವಾಗಿ ಈ ಚಿತ್ರವನ್ನು ಆಯ್ಕೆ ಮಾಡಿಕೊಂಡಿದ್ದರು.

English summary
Actress Kajal Agarwal Birthday Special, Naane Raja Naane Mandhiri Movie Teaser Released. it is Kajal Aggarwal's 50th movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada