»   » ಪ್ರಿನ್ಸ್ ಮಹೇಶ್ ಜೊತೆ ಕಾಜಲ್, ಸಮಂತಾ ಡ್ಯುಯೆಟ್

ಪ್ರಿನ್ಸ್ ಮಹೇಶ್ ಜೊತೆ ಕಾಜಲ್, ಸಮಂತಾ ಡ್ಯುಯೆಟ್

Posted By:
Subscribe to Filmibeat Kannada

ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಇದೀಗ ಮೂವರು ನಾಯಕಿಯರ ಜೊತೆ ಡ್ಯುಯೆಟ್ ಹಾಡಲಿದ್ದಾರೆ. 'ಬಿಜಿನೆಸ್ ಮ್ಯಾನ್" ಚಿತ್ರದಲ್ಲಿ ತೆರೆಯ ಮೇಲೆ ಒಟ್ಟಾಗಿ ಕಾಣಿಸಿಕೊಂಡಿದ್ದ ದಕ್ಷಿಣ ಭಾರತದ ನಟಿ ಕಾಜಲ್ ಅಗರ್ ವಾಲ್ ಹಾಗೂ ಪ್ರಿನ್ಸ್ ಮಹೇಶ್ ಬಾಬು "ಬ್ರಹ್ಮೋತ್ಸವಮ್" ಎಂಬ ಅಪ್ಪಟ ಕೌಟುಂಬಿಕ ಚಿತ್ರದಲ್ಲಿ ಮತ್ತೆ ಒಂದಾಗಲಿದ್ದಾರೆ.

ಇಬ್ಬರ ಮಧ್ಯೆ 'ದೂಕುಡು' ನಟಿ ಸಮಂತಾ ಹಾಗೂ ಕನ್ನಡದ ಹುಡುಗಿ ಪ್ರಣೀತಾ ಸುಭಾಶ್ ಕೂಡಾ ಈ ಚಿತ್ರದಲ್ಲಿ ಪ್ರಿನ್ಸ್ ಜೊತೆ ಹೆಜ್ಜೆ ಹಾಕುತ್ತಿರುವುದು ವಿಶೇಷ.

Kajal Aggarwal and Samantha to pair up with Mahesh babu in 'Brahmotsavam'.

'ಸೀತಮ್ಮ ವಾಕಿಟ್ಲ್ಲೋ ಸಿರಿಮಲ್ಲೆ ಚೆಟ್ಟು' ಹಾಗೂ 'ಮುಕುಂದ' ನಂತಹ ಕೌಟುಂಬಿಕ ಚಿತ್ರಗಳನ್ನು ನಿರ್ದೇಶನ ಮಾಡಿದ್ದ ಶ್ರೀಕಾಂತ್ ಅಡ್ಡಾಲ 'ಬ್ರಹ್ಮೋತ್ಸವಮ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.

ಈಗಾಗಲೇ ಸಮಂತಾ ಮತ್ತು ಕಾಜಲ್ ಅಗರ್ ವಾಲ್ ಜೊತೆ ಪ್ರಿನ್ಸ್ ಮಹೇಶ್ ಬಾಬು ಕೆಮಿಸ್ಟ್ರಿ ಸಖತ್ತಾಗಿ ವರ್ಕೌಟ್ ಆಗಿದೆ. ಈ ಬಾರಿ 'ಬ್ರಹ್ಮೋತ್ಸವಮ್' ಚಿತ್ರದಲ್ಲಿ ಮೂರ್ಮೂರು ನಾಯಕಿಯರು ಇರೋದ್ರಿಂದ ಹರೆಯದ ಹುಡುಗರಿಗೆ ಹಬ್ಬವಾಗುವುದರಲ್ಲಿ ಡೌಟ್ ಇಲ್ಲ.

English summary
Kajal Aggarwal and Samantha are roped into pair up with Mahesh babu in his upcoming 'Brahmotsavam'. The movie is directed by Srikanth Addala of 'Seethamma Vakitlo Sirimalle Chettu' fame.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada