For Quick Alerts
  ALLOW NOTIFICATIONS  
  For Daily Alerts

  4 ಗಂಟೆಗಳಲ್ಲಿ 5 ಸಾವಿರ ಲೈಕ್ಸ್! ಪಡೆದ ಕಾಜಲ್ ವಿಡಿಯೋದಲ್ಲೇನಿದೆ?

  By Harshitha
  |

  ಬ್ಲಾಕ್ ಬಸ್ಟರ್ 'ಆರ್ಯ 2', 'ಮಗಧೀರ' ಚಿತ್ರಗಳ ಖ್ಯಾತಿಯ ಟಾಲಿವುಡ್ ನಟಿ ಕಾಜರ್ ಅಗರ್ವಾಲ್ ಗೊತ್ತಲ್ವಾ. ಸದಾ ಸಿನಿಮಾ, ಮೇಕಪ್ ಅಂತ ಬಿಜಿಯಾಗಿರುವ ಕಾಜಲ್ ಅಗರ್ವಾಲ್ ಇವತ್ತು ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ ಒಂದು ವಿಡಿಯೋ ಅಪ್ ಲೋಡ್ ಮಾಡಿದ್ದಾರೆ.

  ಅದು ಅವರ ತಂದೆ ಜೊತೆ ಕಾಜಲ್ ಅಗರ್ವಾಲ್ ಮಾಡಿರುವ Dubsmash ವಿಡಿಯೋ. Dubsmash ಅಂದಕೂಡಲೇ ಯಾವುದೋ ಸಿನಿಮಾದ ಡೈಲಾಗ್ ನ ಕಾಜಲ್ ಅಗರ್ವಾಲ್ ಮತ್ತವರ ತಂದೆ ಹೇಳಿದ್ದಾರೆ ಅಂದುಕೊಳ್ಳಬೇಡಿ. [ನಟಿ ಕಾಜಲ್ ಅಗರವಾಲ್ ಬೆವರಿಳಿಸುವ ವಿಡಿಯೋ!]

  ಸ್ವತಃ ಕಾಜಲ್ ಅಗರ್ವಾಲ್ ಕಾಣಿಸಿಕೊಂಡಿರುವ Colgate ಆಡ್ ನ Dubsmash ಮಾಡಿ ಅಪ್ ಲೋಡ್ ಮಾಡಿದ್ದಾರೆ. ನಾಲ್ಕು ಗಂಟೆಗಳ ಹಿಂದೆಯಷ್ಟೆ ಅಪ್ ಲೋಡ್ ಆಗಿರುವ ಈ ವಿಡಿಯೋನ 41 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. 5,451 ಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ರೆ, 121 ಮಂದಿ ಶೇರ್ ಮಾಡಿದ್ದಾರೆ.

  Hey my lovelies, Check this out.. made a Dubsmash video with my adorable Dad! Tell me what you'll think.. HahaMake your...

  Posted by Kajal Aggarwal on Thursday, September 24, 2015

  ಫೇಸ್ ಬುಕ್ ನಲ್ಲಿ ಕಾಜಲ್ ಅಗರ್ವಾಲ್ Colgate Dubsmash ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅಷ್ಟಕ್ಕೂ ಕಾಜಲ್ ಈ Dubsmash ಮಾಡಿರುವುದು ಪ್ರಚಾರಕ್ಕಾಗಿ.

  ಕಾಜಲ್ ಅಗರ್ವಾಲ್ Colgate ಕಂಪನಿಯ ಪ್ರಚಾರ ರಾಯಭಾರಿ. Colgate ಕಂಪನಿ ಆನ್ ಲೈನ್ ನಲ್ಲಿ #ColgateSaltSmash ಚಾಲೆಂಜ್ ನಡೆಸುತ್ತಿದೆ. ಅದನ್ನ ಪ್ರಮೋಟ್ ಮಾಡುವುದಕ್ಕೆ ಕಾಜಲ್ ಅಗರ್ವಾಲ್ Colgate ಆಡ್ ನ Dubsmash ಮಾಡಿದ್ದಾರೆ.

  ಭಾರತದಲ್ಲಿ ನೆಲೆಸಿರುವ ಯಾರು ಬೇಕಾದರೂ Colgate ಆಡ್ ನ Dubsmash ಮಾಡಿ ವಿಡಿಯೋನ ಫೇಸ್ ಬುಕ್ ನಲ್ಲಿ ಅಪ್ ಲೋಡ್ ಮಾಡಬಹುದು. ಉತ್ತಮ ವಿಡಿಯೋಗೆ ಆಕರ್ಷಕ ಬಹುಮಾನ ಸಿಗಲಿದೆ. ತಮ್ಮ ಕೆಲಸವನ್ನ ಕಾಜಲ್ ಅಗರ್ವಾಲ್ ಅಚ್ಚುಕಟ್ಟಾಗಿ ಮುಗಿಸಿದ್ದಾರೆ. ಈಗ ನಿಮ್ಮ ಸರದಿ.

  English summary
  Tollywood Actress Kajal Aggarwal has made a Dubsmash video with her dad on Colgate Salt Add. This Dubsmash video has gone viral in Social Networking sites. Watch the video.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X