twitter
    For Quick Alerts
    ALLOW NOTIFICATIONS  
    For Daily Alerts

    ನಾನು 'ಆ' ಕುಟುಂಬದಲ್ಲಿ ಹುಟ್ಟಿದ್ದೇ ತಪ್ಪಾಯಿತು: ಕಾಜಲ್ ಅಗರ್ವಾಲ್

    By Bharath Kumar
    |

    ಕಾಜಲ್ ಅಗರ್ವಾಲ್ ದಕ್ಷಿಣ ಸಿನಿಲೋಕದ ಬಹುಬೇಡಿಕೆಯ ನಟಿ. ತಮಿಳು, ತೆಲುಗು ಹಾಗೂ ಹಿಂದಿಯಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಸ್ಟಾರ್ ನಟಿ. ಯಾವುದೇ ವಿವಾದ, ಆರೋಪಗಳಿಗೆ ಸಿಲುಕದ ಕಲಾವಿದೆ. ಆದ್ರೆ, ಇತ್ತೀಚೆಗೆ ತನ್ನ ಕುಟುಂಬದ ಬಗ್ಗೆ ಒಂದು ಹೇಳಿಕೆ ನೀಡಿದ್ದು, ಈ ಹೇಳಿಕೆ ಈಗ ವಿವಾದವನ್ನ ಹುಟ್ಟುಹಾಕುತ್ತಿದೆ.

    ಮೂಲತಃ ಪಂಜಾಬಿ ಕುಟುಂಬದಲ್ಲಿ ಜನಿಸಿದ್ದ ಕಾಜಲ್ ಬಾಲ್ಯ, ಶಿಕ್ಷಣ ಎಲ್ಲವನ್ನ ಮುಂಬೈನಲ್ಲೇ ಮುಗಿಸಿದರು. ನಂತರ ನಟಿಯಾಗಿ ಬಾಲಿವುಡ್ ಲೋಕಕ್ಕೆ ಕಾಲಿಟ್ಟರು. ಅಲ್ಲಿಂದ ದಕ್ಷಿಣ ಭಾರತಕ್ಕೆ ಬಂದ ಕಾಜಲ್ ಮತ್ತೆ ಹಿಂತಿರುಗಲೇ ಇಲ್ಲ. ಹೀಗೆ, ಉತ್ತರದಿಂದ ದಕ್ಷಿಣಕ್ಕೆ ಬಂದ ಕಾಜಲ್ ಈಗ ಉತ್ತರ ಭಾರತವನ್ನ ಅವಮಾನಿಸಿದ್ದಾರೆ ಎಂಬ ಟೀಕೆಗಳು ಶುರುವಾಗಿದೆ. ಅದು ಯಾಕೆ ಎಂದು ಮುಂದೆ ಓದಿ.....

    ಕಾಜಲ್ ಹೇಳಿದ್ದು ಹೀಗೆ....

    ಕಾಜಲ್ ಹೇಳಿದ್ದು ಹೀಗೆ....

    ''ನನ್ನ ಜೀವನದಲ್ಲಿ ಒಂದು ತಪ್ಪಾಗಿದೆ. ಅದೇನಪ್ಪಾ ಅಂದ್ರೆ ನನ್ನ ಜನನಕ್ಕೆ ಸಂಬಂಧಿಸಿರುವುದು. ನಾನು ಉತ್ತರ ಭಾರತದ ಕುಟುಂಬದಲ್ಲಿ ತಪ್ಪಾಗಿ ಹುಟ್ಟಿದ್ದೀನಿ. ಇದನ್ನು ಯಾವಾಗಲೂ ಮನೆಯವರಲ್ಲಿ, ಸ್ನೇಹಿತರಲ್ಲಿ ಹೇಳಿಕೊಳ್ಳುತ್ತಲೇ ಇರುತ್ತೀನಿ. ನಾನು ಪಕ್ಕಾ ದಕ್ಷಿಣ ಭಾರತದ ಹುಡುಗಿ. ನನಗೆ ದಕ್ಷಿಣ ಭಾರತದ ಹುಡುಗಿ ಅಂತ ಕರೆಸಿಕೊಳ್ಳುವುದಕ್ಕೇ ಖುಷಿ'' ಎಂದಿದ್ದರು.

    ಹಿಂದಿಯಲ್ಲಿ ಅಭಿನಯಸಲು ಇಷ್ಟವಿಲ್ಲ!

    ಹಿಂದಿಯಲ್ಲಿ ಅಭಿನಯಸಲು ಇಷ್ಟವಿಲ್ಲ!

    ''ಹಿಂದಿ ಚಿತ್ರಗಳಲ್ಲಿಯೂ ಆಫರ್ಸ್ ಬರ್ತಿದೆ. ಆದ್ರೆ ನನಗೆ ತೆಲುಗು, ತಮಿಳು ಚಿತ್ರಗಳಲ್ಲಿ ಅಭಿನಯಿಸುವುದಕ್ಕೇ ಇಷ್ಟ. ಬಾಲಿವುಡ್ ಸಿನಿಮಾದಿಂದಾಗಿ, ದಕ್ಷಿಣ ಭಾರತದಲ್ಲಿ ಒಳ್ಳೆಯ ಅವಕಾಶಗಳನ್ನು ಕಳೆದುಕೊಳ್ಳಲು ಇಷ್ಟ ಇಲ್ಲವೆಂದು'' ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಅದ್ಯಾಕೇ ಹೀಗೆ ಹೇಳಿದರೋ...

    ಅದ್ಯಾಕೇ ಹೀಗೆ ಹೇಳಿದರೋ...

    ಅಂದ್ಹಾಗೆ, ನಟಿ ಕಾಜಲ್ ಅಗರ್ವಾಲ್ ಈ ರೀತಿ ಹೇಳಿಕೆಯಲ್ಲಿ ಹಾಸ್ಯಾಸ್ಪದವಾಗಿ ಹೇಳಿದ್ದಾರೆ. ಯಾಕಂದ್ರೆ, ಕಾಜಲ್ ಸೌತ್ ನಲ್ಲಿ ಹೆಚ್ಚು ಯಶಸ್ಸು ಕಂಡಿದ್ದಾರೆ. ಹೀಗಾಗಿ, ಈ ರೀತಿಯಾಗಿ ಹೇಳಿದ್ದಾರೆ. ಆದ್ರೆ, ಇದನ್ನ ಕೆಲವು ಮಂದಿ ವಿವಾದಕ್ಕೆ ಸಿಲುಕಿಸಿದ್ದಾರೆ. ಉತ್ತರ ಭಾರತವನ್ನ ಕಾಜಲ್ ಅವಮಾನಿಸಿದ್ದಾರೆ ಎಂದು ಟೀಕಿಸುತ್ತಿದ್ದಾರೆ. ಅಷ್ಟಕ್ಕೂ, ಕಾಜಲ್ ಜರ್ನಿ ಹೇಗೆ ಶುರುವಾಯಿತು ಅಂತ ಮುಂದೆ ಓದಿ....

    ಸಿನಿಮಾಗೆ ಕಾಲಿಟ್ಟಿದ್ದೇ ಬಾಲಿವುಡ್ ನಿಂದ

    ಸಿನಿಮಾಗೆ ಕಾಲಿಟ್ಟಿದ್ದೇ ಬಾಲಿವುಡ್ ನಿಂದ

    2004 ರಲ್ಲಿ ಕಾಜಲ್ ಅಗರ್ವಾಲ್ 'ಕ್ಯೂ ಹೋ ಗಯಾ ನಾ' ಚಿತ್ರದ ಮೂಲಕ ಸಿನಿಪ್ರಪಂಚಕ್ಕೆ ಕಾಲಿಟ್ಟಿದ್ದರು. ಐಶ್ವರ್ಯ ರೈ, ಸಮೀರ್ ಕಾರ್ನಿಕ್ ಮತ್ತು ವಿವೇಕ್ ಒಬೆರಾಯ್ ಅಭಿನಯಿಸಿದ್ದ ಈ ಚಿತ್ರದಲ್ಲಿ ನಾಯಕಿಯ ಸ್ನೇಹಿತೆ ಆಗಿ ಬಣ್ಣ ಹಚ್ಚಿದ್ದರು.

    ಉತ್ತರದಿಂದ ದಕ್ಷಿಣಕ್ಕೆ ಬಂದ ನಟಿ

    ಉತ್ತರದಿಂದ ದಕ್ಷಿಣಕ್ಕೆ ಬಂದ ನಟಿ

    ಅದಾದ ನಂತರ 2007ರಲ್ಲಿ 'ಲಕ್ಷ್ಮಿ ಕಲ್ಯಾಣಂ' ಚಿತ್ರದ ಮೂಲಕ ತೆಲುಗು ಚಿತ್ರರಂಗದಲ್ಲಿ ನಾಯಕಿ ಆದ ಕಾಜಲ್, ಬ್ಯಾಕ್ ಟು ಬ್ಯಾಕ್ ತಮಿಳು ಮತ್ತು ತೆಲುಗು ಸಿನಿಮಾರಂಗದಲ್ಲಿ ತೊಡಗಿಕೊಂಡರು.

    'ಮಗಧೀರ' ಚಿತ್ರದಿಂದ ಮರುಜೀವ

    'ಮಗಧೀರ' ಚಿತ್ರದಿಂದ ಮರುಜೀವ

    ರಾಜಮೌಳಿ ನಿರ್ದೇಶನದಲ್ಲಿ ಬಂದ 'ಮಗಧೀರ' ಚಿತ್ರ ಬಿಡುಗಡೆಯಾಗುವ ಆಗುವರೆಗೂ ಕಾಜಲ್ ಯಾರು ಎಂಬುದು ಭಾರತೀಯ ಚಿತ್ರರಂಗಕ್ಕೆ ಅ‍ಷ್ಟಾಗಿ ಗೊತ್ತಿರಲಿಲ್ಲ. ಆದ್ರೆ, 'ಮಗಧೀರ' ಸೂಪರ್ ಹಿಟ್ ಆದ ನಂತರ ಕಾಜಲ್ ಬದುಕೇ ಬದಲಾಯಿತು.

    ಸ್ಟಾರ್ ನಟರ 'ಡಾರ್ಲಿಂಗ್'

    ಸ್ಟಾರ್ ನಟರ 'ಡಾರ್ಲಿಂಗ್'

    'ಮಗಧೀರ' ಚಿತ್ರದ ನಂತರ ಕಾಜಲ್ ಲಕ್ ಖುಲಾಯಿಸಿತು. 'ಆರ್ಯ-2', 'ಡಾರ್ಲಿಂಗ್', 'ಬೃಂದಾವನಂ', 'ಮಿಸ್ಟರ್ ಫರ್ಫೆಕ್ಟ್', 'ಸಿಂಗಂ', 'ಬಿಸ್ ನೆಸ್ ಮ್ಯಾನ್', 'ಯವಡು', 'ನಾಯಕ್', 'ಸರ್ದಾರ್ ಗಬ್ಬರ್ ಸಿಂಗ್' ಅಂತಹ ಸಿನಿಮಾಗಳಲ್ಲಿ ನಾಯಕಿ ಆಗುವ ಮೂಲಕ ಸೌತ್ ಸೂಪರ್ ಸ್ಟಾರ್ ಗಳ ಜೊತೆಯಲ್ಲಿ ಬಣ್ಣ ಹಚ್ಚಿದ್ದರು.

    ಹಿಂದಿಯಲ್ಲಿ ಅದೃಷ್ಟ ಕೈಹಿಡಿಯಲಿಲ್ಲ!

    ಹಿಂದಿಯಲ್ಲಿ ಅದೃಷ್ಟ ಕೈಹಿಡಿಯಲಿಲ್ಲ!

    'ಕ್ಯೂ ಹೋ ಗಯಾ ನ' ಚಿತ್ರದ ನಂತರ 'ಸ್ಪೆಷಲ್ 26', 'ಸಿಂಗಂ', ಅಂತಹ ಹಿಂದಿ ಸಿನಿಮಾಗಳಲ್ಲಿ ಕಾಜಲ್ ಕಾಣಿಸಿಕೊಂಡ್ರು ಹೇಳಿಕೊಳ್ಳುವಷ್ಟು ಯಶಸ್ಸು ಸಿಗಲೇ ಇಲ್ಲ. ಹೀಗಾಗಿ, ಹಿಂದಿ ಚಿತ್ರರಂಗದಲ್ಲಿ ಕಾಜಲ್ ಬೆರಳಿಕೆಯಷ್ಟೇ ಸಿನಿಮಾ ಮಾಡುತ್ತಿದ್ದಾರೆ.

    'ಸೌತ್ ನಾಯಕಿ' ಎಂಬ ಪಟ್ಟ!

    'ಸೌತ್ ನಾಯಕಿ' ಎಂಬ ಪಟ್ಟ!

    ಹೀಗೆ, ಕಾಜಲ್ ಜರ್ನಿಯನ್ನ ನೋಡಿದ್ರೆ, ಯಾರು ಬೇಕಾದರೂ ಹೇಳುತ್ತಾರೆ. ಈಕೆ ದಕ್ಷಿಣ ಭಾರತದ ನಟಿ ಎಂದು. ಇದನ್ನೇ ಕಾಜಲ್ ಕೂಡ ಹೇಳಿದ್ದು.

    English summary
    Kajal Agarwal Has Recently Made Some Comments About His Family That Are Turning Controversial. ''I was wrongly taken birth in a North Indian family'' says Kajal Agarwal in interview.
    Tuesday, June 6, 2017, 17:34
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X