ರಿಯಲ್ ಸ್ಟಾರ್ ಗೆ ಕಾಜಲ್ ನಾಯಕಿ: ಕನ್ನಡಕ್ಕೆ ಬರ್ತಾರಾ ಸೌತ್ ಸುಂದರಿ?
ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಬಹುನಿರೀಕ್ಷೆಯ 'ಕಬ್ಜ' ಸಿನಿಮಾದ ಒಂದಿಷ್ಟು ಪೋಸ್ಟರ್ ಗಳು ವೈರಲ್ ಆಗಿವೆ. ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ಉಪ್ಪಿಯ ವಿಭಿನ್ನ ಲುಕ್ ಚಿತ್ರಾಭಿಮಾನಿಗಳ ಕುತೂಹಲ ಹೆಚ್ಚಿಸಿದೆ. ರಿಯಲ್ ಸ್ಟಾರ್ ಇಲ್ಲಿ 80 ರ ದಶಕದ ಡಾನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಸದ್ಯ 'ಕಬ್ಜ' ಚಿತ್ರದ ಅಡ್ಡಾದಿಂದ ಮತ್ತೊಂದು ಸುದ್ದಿ ಕೇಳಿ ಬರುತ್ತಿದೆ. ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರಗೆ ಜೋಡಿಯಾಗಿ ಸೌತ್ ಸುಂದರಿ ಕಾಜಲ್ ಅಗರ್ ವಾಲ್ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಈಗಾಗಲೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡುತ್ತಿದೆ. ಮೂಲಗಳ ಪ್ರಕಾರ ಚಿತ್ರತಂಡ ಈಗಾಗಲೆ ಕಾಜಲ್ ಜೊತೆ ಒಂದು ಸುತ್ತಿನ ಮಾತುಕಥೆ ಕೂಡ ನಡೆಸಿದೆಯಂತೆ.
ಚಿತ್ರದ ಕಥೆ ಕೇಳಿ ಕಾಜಲ್ ಗೆ ಇಷ್ಟವಾಗಿದೆಯಂತೆ. ಆದರೆ ಕಾಜಲ್ ಕಡೆಯಿಂದ ಇನ್ನು ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ಡೇಟ್ ಹೊಂದಾಣಿಕೆಯಾದರೆ ಕಾಜಲ್ ಕನ್ನಡಕ್ಕೆ ಬರುವುದು ಪಕ್ಕ ಎನ್ನುತ್ತಿವೆ ಮೂಲಗಳು. ಒಂದು ವೇಳೆ ಕನ್ನಡಕ್ಕೆ ಬಂದರೆ ಕಾಜಲ್ ಪಾತ್ರ ಹೇಗಿರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ. 80ರ ದಶಕದ ಬ್ಯಾಕ್ ಡ್ರಾಪ್ ನಲ್ಲಿ ಸಿನಿಮಾ ಇರುವುದರಿಂದ ಕಾಜಲ್ ಲುಕ್ ಮೇಲೆ ಕುತೂಹಲ ಹೆಚ್ಚಾಗಿದೆ. ಕನ್ನಡಕ್ಕೆ ಎಂಟ್ರಿ ಕೊಡುವ ಬಗ್ಗೆ ಚಿತ್ರತಂಡ ಮಾತ್ರ ಇನ್ನು ಅಧಿಕೃತಗೊಳಿಸಿಲ್ಲ.

ಅಂದ್ಹಾಗೆ ಕಬ್ಜ ಆರ್ ಚಂದ್ರು ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಐ ಲವ್ ಯೂ ಸಿನಿಮಾದ ನಂತರ ಮತ್ತೆ ಈ ಜೋಡಿ ಒಂದಾಗಿದೆ. ಚಿತ್ರದಲ್ಲಿ ಉಪೇಂದ್ರ ಲಾಂಗ್ ಹಿಡಿದು ಅಬ್ಬರಿಸಲಿದ್ದಾರೆ. ವಿಶೇಷ ಅಂದರೆ ಇದುವರೆಗೂ ಕನ್ನಡ ಮತ್ತು ತೆಲುಗಿನಲ್ಲಿ ಮಿಂಚಿದ್ದ ಉಪೇಂದ್ರ ಮೊದಲ ಬಾರಿಗೆ ಏಳು ಭಾಷೆಯಲ್ಲಿ ಮಿಂಚಲು ಸಜ್ಜಾಗಿದ್ದಾರೆ.


Click it and Unblock the Notifications











