For Quick Alerts
  ALLOW NOTIFICATIONS  
  For Daily Alerts

  ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿಗಳಲ್ಲಿ ಬೇಸರ

  By Bharath Kumar
  |

  ಸೂಪರ್ ಸ್ಟಾರ್ ರಜನಿಕಾಂತ್ ತಮಿಳುನಾಡು ರಾಜಕೀಯಕ್ಕೆ ಅಧಿಕೃತವಾಗಿ ಪ್ರವೇಶ ಮಾಡಿದ್ದಾರೆ. ಡಿಸೆಂಬರ್ 31 ರಂದು ಈ ವಿಷ್ಯವನ್ನ ಅಭಿಮಾನಿಗಳ ಸಮ್ಮುಖದಲ್ಲಿ ಬಹಿರಂಗವಾಗಿ ಘೋಷಿಸಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಜನಿಕಾಂತ್ ಅವರು ಪಕ್ಷ ಸ್ಥಾಪಿಸಿಲಿದ್ದು, ಎಲ್ಲ ಕ್ಷೇತ್ರಗಳಲ್ಲೂ ಪ್ರತಿನಿಧಿಗಳು ಸ್ಪರ್ಧಿಸಲಿದ್ದಾರೆ ಎಂದು ತಲೈವಾ ತಿಳಿಸಿದ್ದಾರೆ.

  ಇದು ಸೂಪರ್ ಸ್ಟಾರ್ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಈ ಸುದ್ದಿ ಎಷ್ಟು ಅಭಿಮಾನಿಗಳಿಗೆ ಖುಷಿ ಕೊಟ್ಟಿದಿಯೋ ಅಷ್ಟೇ ಅಭಿಮಾನಿಗಳಿಗೆ ಬೇಸರ ಕೂಡ ತರಿಸಿದೆ ಎನ್ನುವುರದಲ್ಲಿ ಸಂಶಯವಿಲ್ಲ. ಯಾಕಂದ್ರೆ, ರಜನಿಕಾಂತ್ ರಾಜಕೀಯಕ್ಕೆ ಬರುವುದು ಬೇಡ ಎನ್ನುತ್ತಿದ್ದರು ಕೂಡ ಸಾಕಷ್ಟು ಅಭಿಮಾನಿಗಳಿದ್ದರು. ಇದರ ಮಧ್ಯೆ ಫ್ಯಾನ್ಸ್ ಬೇಜಾರು ಮಾಡಿಕೊಳ್ಳುವುದಕ್ಕೆ ಮತ್ತೊಂದು ಕಾರಣವೂ ಇದೆ.

  ಪ್ರಜೆಗಳ ಪ್ರತಿನಿಧಿಯಾಗುವೆ: ರಜನಿಕಾಂತ್ ಘೋಷಣೆ

  ಹೌದು, ಕನ್ನಡ, ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಸ್ಟಾರ್ ಆಗಿ ಮೆರೆದ ರಜನಿಕಾಂತ್ ಈಗ ತೆರೆಯಿಂದ ಮರೆಯಾಗಲಿದ್ದಾರೆ. ತಮ್ಮ ಕೊನೆಯ ಚಿತ್ರಕ್ಕೆ ಸಿದ್ದತೆ ಮಾಡಿಕೊಂಡಿದ್ದಾರೆ. ಮುಂದೆ ಓದಿ.....

  ಚಿತ್ರರಂಗಕ್ಕೆ ಗುಡ್ ಬೈ

  ಚಿತ್ರರಂಗಕ್ಕೆ ಗುಡ್ ಬೈ

  ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಕ್ಷ ಕಟ್ಟುವ ಬಗ್ಗೆ ಹೇಳಿರುವ ರಜನಿಕಾಂತ್, ಚುನಾವಣೆಗೆ ಸಿದ್ದವಾಗಬೇಕಿದೆ. ಜನರ ಮುಂದೆ ಹೋಗಬೇಕಿದೆ. ಪಕ್ಷ ಸಂಘಟನೆ ಮಾಡಬೇಕಿದೆ. ಪಕ್ಷದ ಕಾರ್ಯತಂತ್ರ ರೂಪಿಸಬೇಕಿದೆ. ತಮಿಳುನಾಡಿನ ರಾಜಕೀಯ ಪರಿಸ್ಥಿತಿಯ ಬಗ್ಗೆ ಅಧ್ಯಯನ ಮಾಡಬೇಕಿದೆ. ರಜನಿಯ ಹಾದಿಯಲ್ಲಿ ಇದನ್ನೆಲ್ಲಾ ಗಮನಿಸುವುದಾರೇ ಸೂಪರ್ ಸ್ಟಾರ್ ಚಿತ್ರರಂಗಕ್ಕೆ ಗುಡ್ ಬೈ ಹೇಳೋದು ಖಚಿತ ಎನ್ನಲಾಗಿದೆ.

  ದೇವರ ಮೇಲೆ ನಂಬಿಕೆ

  ದೇವರ ಮೇಲೆ ನಂಬಿಕೆ

  ಎಲ್ಲವನ್ನು ದೇವರ ಮೇಲೆ ನಂಬಿಕೆ ಇಟ್ಟು ಮಾಡುವ ರಜನಿಕಾಂತ್ ಚಿತ್ರರಂಗದಲ್ಲಿ ಮುಂದುವರೆಯುವುದರ ಬಗ್ಗೆ ಯಾವುದೇ ಮಾಹಿತಿಯೂ ಬಿಟ್ಟುಕೊಟ್ಟಿಲ್ಲ. ಆದ್ರೆ, 'ದೇವರ ನಿರ್ಣಯದಂತೆ ಮಾಡುತ್ತೇನೆ' ಎಂಬ ವಾಕ್ಯ ಬಹುಶಃ ತಲೈವಾ ಸಿನಿವೃತ್ತಿಯನ್ನ ಅಂತ್ಯವಾಗಿಸಬಹುದು ಎನ್ನಿಸುತ್ತಿದೆ.

  ರಜನಿ ಇನ್ನು ಮುಂದೆ ಸಿನಿಮಾದಲ್ಲಿ ಅಭಿನಯಿಸುವುದಿಲ್ವಂತೆರಜನಿ ಇನ್ನು ಮುಂದೆ ಸಿನಿಮಾದಲ್ಲಿ ಅಭಿನಯಿಸುವುದಿಲ್ವಂತೆ

  ಎರಡು ಸಿನಿಮಾ ಬಿಡುಗಡೆಯಾಗಬೇಕಿದೆ

  ಎರಡು ಸಿನಿಮಾ ಬಿಡುಗಡೆಯಾಗಬೇಕಿದೆ

  ಸದ್ಯ ಶಂಕರ್ ಹಾಗೂ ರಜನಿಕಾಂತ್ ಕಾಂಬಿನೇಷನ್ ನಲ್ಲಿ ತಯಾರಾಗಿರುವ 2.0 ಸಿನಿಮಾ ತೆರೆಕಾಣಲು ಸಿದ್ದವಾಗುತ್ತಿದೆ. ಏಪ್ರಿಲ್ ತಿಂಗಳಿನಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ. ಅದಾದ ಎರಡು ತಿಂಗಳ ನಂತರ 'ಕಾಲ ಕರಿಕಾಳನ್' ಸಿನಿಮಾ ಬಿಡುಗಡೆಯಾಗಲಿದೆ. ಬಹುಶಃ 'ಕಾಲ' ಚಿತ್ರವೇ ರಜನಿ ಕರಿಯರ್ ನಲ್ಲಿ ಕೊನೆ ಚಿತ್ರವಾಗಬಹುದು ಎಂಬ ಆತಂಕ ಅಭಿಮಾನಿಗಳಲ್ಲಿದೆ.

  ಯಾರಿಗೂ ಕಾಲ್ ಶೀಟ್ ಕೊಟ್ಟಿಲ್ಲ

  ಯಾರಿಗೂ ಕಾಲ್ ಶೀಟ್ ಕೊಟ್ಟಿಲ್ಲ

  67ರ ವಯಸ್ಸಿನಲ್ಲೂ ತೆರೆಮೇಲೆ ನಾಯಕನಾಗಿ ಮಿಂಚುತ್ತಿರುವ ರಜನಿಕಾಂತ್, ಸದ್ಯಕ್ಕೆ ಬೇರೆ ಯಾವ ಚಿತ್ರಕ್ಕೂ ಕಾಲ್ ಶೀಟ್ ಕೊಟ್ಟಿಲ್ಲ. ಇದಕ್ಕೆ ರಾಜಕೀಯವೇ ಕಾರಣವಂತೆ. ಮೂಲಗಳ ಪ್ರಕಾರ '2.0' ಮತ್ತು 'ಕಾಲ ಕರಿಕಾಳನ್' ಸಿನಿಮಾಗಳ ಶೂಟಿಂಗ್ ಮುಗಿಸಿರುವ ತಲೈವಾ, ತಮ್ಮ ಬಣ್ಣದ ಲೋಕದ ನಂಟನ್ನ ಅಂತ್ಯಗೊಳಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

  English summary
  According to sources, Pa Ranjith Directional 'Kala Karikalan' movie will be last of Super star Rajinikanth.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X