ಫಿಲ್ಮ್ ಫೇರ್ ಗೆ ಆಯ್ಕೆಯಾದ 'ಕಲಾಕರ್' ಚಿನ್ನಪ್ಪನ ಕಿರುಚಿತ್ರ
2018ನೇ ಸಾಲಿನ ಫಿಲ್ಮ್ ಫೇರ್ ಪ್ರಶಸ್ತಿಯ ಕಿರುಚಿತ್ರ ವಿಭಾಗದಲ್ಲಿ ಬೆಂಗಳೂರಿನ 'ಕಲಾಕರ್ ಕೀ ಕಥಾ' ಕಿರುಚಿತ್ರ ನಾಮನಿರ್ದೇಶನಗೊಂಡಿದೆ. 1900ಕ್ಕೂ ಅಧಿಕ ಕಿರುಚಿತ್ರಗಳು ರೇಸ್ ನಲ್ಲಿದ್ದವು. ಅಂತಿಮವಾಗಿ 57 ಕಿರುಚಿತ್ರಗಳು ಆಯ್ಕೆಯಾಗಿದೆ. ಇವುಗಳಲ್ಲಿ 'ಕಲಾಕರ್ ಕೀ ಕಥಾ ಚಿತ್ರವೂ' ಒಂದಾಗಿದೆ.
ಫಿಲ್ಮ್ ಫೇರ್ ನಲ್ಲಿ 'Popular Choice Award'ಗೆ ಈ ಕಿರುಚಿತ್ರ ನಾಮಿನೇಟ್ ಆಗಿದೆ. ಈ ಕಿರುಚಿತ್ರವನ್ನ ಒಮ್ಮೆ ನೋಡಿ ನಿಮಗೆ ಇಷ್ಟವಾದರೇ ವೋಟ್ ಮಾಡಿ ಗೆಲ್ಲಿಸಬಹುದು.

ಅಂದ್ಹಾಗೆ, ಈ ಕಿರುಚಿತ್ರ ಸಿನಿಮಾ ನಟರ ಕಟೌಟ್ ಗಳನ್ನ ತಯಾರಿಸುವ ಚಿನ್ನಪ್ಪ ಅವರ ಕುರಿತಾಗಿದೆ. 100 ವರ್ಷಗಳ ಭಾರತೀಯ ಸಿನಿಮಾ ಇಂಡಸ್ಟ್ರಿಯಲ್ಲಿ ಸುಮಾರು 72 ವರ್ಷಗಳ ಕಾಲ ಚಿನ್ನಪ್ಪ ಅವರು ಈ ವೃತ್ತಿಯನ್ನ ಮಾಡುತ್ತಾ ಬಂದಿದ್ದಾರೆ. ಈಗ ಅವರ ವಯಸ್ಸು 82 ವರ್ಷ. ಡಾ ರಾಜ್ ಕುಮಾರ್, ಅಮಿತಾಬ್ ಬಚ್ಚನ್, ಚಿರಂಜೀವಿ, ರಜನಿಕಾಂತ್ ಸೇರಿದಂತೆ ಇಂದಿನ ರಾಜಕಾರಣಿಗಳು, ಯಾವುದೇ ಕಾರ್ಯಕ್ರಮವಿರಲಿ ಅವುಗಳಿಗೆಲ್ಲಾ ಚಿನ್ನಪ್ಪ ಅವರು ಕಟೌಟ್ ಮಾಡಿಕೊಡಬೇಕು. ಅವರ ಕಲಾಬದುಕಿನ ಬಗ್ಗೆ ಈ ಕಿರುಚಿತ್ರ ಒಳಗೊಂಡಿದೆ.

9ನೇ ವಯಸ್ಸಿಗೆ ಈ ವೃತ್ತಿ ಆರಂಭಿಸಿದ ಚಿನ್ನಪ್ಪ ಅವರು ಸುಮಾರು 70 ಸಾವಿರಕ್ಕೂ ಅಧಿಕ ಕಟೌಟ್ ಗಳನ್ನ ಸಿದ್ದ ಮಾಡಿದ್ದಾರೆ. 6 ಭಾಷೆಯಲ್ಲಿ ಸುಮಾರು 5000 ಕ್ಕು ಹೆಚ್ಚು ಸಿನಿಮಾಗಳ ಕಟೌಟ್ ತಯಾರಿಸಿದ್ದಾರೆ.
ವಿಶೇಷ ಅಂದ್ರೆ, ಈ ಕಿರುಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಚಿನ್ನಪ್ಪ ಅವರ ಬಗ್ಗೆ ಮಾತನಾಡಿದ್ದಾರೆ. ಡಾ ರಾಜ್ ಕಾಲದಿಂದಲೂ ಇಂದಿನ ಯುವ ನಟರ ಸಿನಿಮಾಗಳಿಗೂ ದೊಡ್ಡ ದೊಡ್ಡ ಕಟೌಟ್ ನಿಲ್ಲಿಸುವಲ್ಲಿ ಚಿನ್ನಪ್ಪ ಅವರ ಸಾಧನೆ ಬಗ್ಗೆ ಅಪ್ಪು ಮೆಚ್ಚುಗೆಯ ಮಾತನಾಡಿದ್ದಾರೆ.

ಈ ಕಿರುಚಿತ್ರವನ್ನ ಸೀರಿಶಾ ಅಕ್ಷಿಂತಲಾ ಅವರು ನಿರ್ದೇಶನ ಮಾಡಿದ್ದಾರೆ. ಶೋಭನ್ ಗಲ್ ಮತ್ತು ಸೀರಿಶಾ ಅಕ್ಷಿಂತಲಾ ಅವರ ಛಾಯಾಗ್ರಹಣವಿದೆ. ಶ್ರೀನಾಥ್ ಭಾರಾದ್ವಜ್ ಮತ್ತು ಮನೋಜ್ ಕಶ್ಯಪ್ ಅವರ ಸಂಗೀತ ಒಳಗೊಂಡಿದೆ.
ಈ ಕಿರುಚಿತ್ರವನ್ನ ನೋಡಲು ಈ ಲಿಂಕ್ ಕ್ಲಿಕ್ ಮಾಡಿ
ಈ ಕಿರುಚಿತ್ರಕ್ಕೆ ವೋಟ್ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


Click it and Unblock the Notifications











