ಸೆಟ್ಟೇರಿತು 19 ವರ್ಷದ ಹುಡುಗನ 'ಕಾಲವನ್ನು ತಡೆಯೋರು ಯಾರು ಇಲ್ಲ' ಚಿತ್ರ

By Naveen

ಕನ್ನಡ ಚಿತ್ರರಂಗಕ್ಕೆ ಈಗ ಮತ್ತೊಬ್ಬ ಕಿರಿಯ ವಯಸ್ಸಿನ ನಿರ್ದೇಶಕ ಕಾಲಿಟ್ಟಿದ್ದಾನೆ. 19ರ ಪ್ರಾಯದ ಸಲ್ಮಾನ್ ಎಂಬ ಹುಡುಗ ಈಗ ತನ್ನ ಕನಸಿನ ಬೆನ್ನು ಹತ್ತಿದ್ದಾನೆ. ಕಿರುಚಿತ್ರ, ಜಾಹಿರಾತು, ಆಲ್ಬಮ್ ಸಾಂಗ್ ಹಾಗೂ ನಾಟಕರಂಗದ ಬಳಿಕ ಸಲ್ಮಾನ್ ಸಿನಿಮಾ ಪ್ರಯಾಣ ಶುರು ಮಾಡಿದ್ದಾರೆ.

'ಕಾಲವನ್ನು ತಡೆಯೋರು ಯಾರು ಇಲ್ಲ' ಎಂಬ ಚಿತ್ರವನ್ನು ಸಲ್ಮಾನ್ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಕೆಲ ದಿನಗಳ ಹಿಂದೆ ಸೆಟ್ಟೇರಿದೆ. ಚಿತ್ರ ಒಂದು ಫ್ಯಾಮಿಲಿ ಎಂಟಟೈನರ್ ಕಥೆ ಹೊಂದಿದೆಯಂತೆ. ಫಸ್ಟ್ ಹಾಫ್ ನಲ್ಲಿ ಕಾಮಿಡಿ ಹಾಗೂ ಸೆಕೆಂಡ್ ಹಾಫ್ ನಲ್ಲಿ ಕಾಲ ಹೇಗೆ ನೋವು, ಖುಷಿ ನೀಡುತ್ತದೆ ಎನ್ನುವುದನ್ನು ಹೇಳಲಾಗಿದೆಯಂತೆ.

kalavannu thadeyoru ella kannada movie launched

ಅಲ್ತಾಫ್ ಎಂಬ ಹೊಸ ಹುಡುಗ ಚಿತ್ರದ ಲೀಡ್ ರೋಲ್ ನಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಸುದ್ದಿ ಮಾಧ್ಯಮದಲ್ಲಿ ನಿರೂಪಕನಾಗಿ ಗುರುತಿಸಿಕೊಂಡಿರುವ ಮಂಜುನಾಥ್ ದಾವಣಗೆರೆ ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರದಲ್ಲಿ ಎಂಜಿನಿಯರ್ ಹುಡುಗನಾಗಿ ಲವರ್ ಬಾಯ್ ಲುಕ್ ನಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ.

kalavannu thadeyoru ella kannada movie launched

ಕುರಿ ಪ್ರತಾಪ್ ಹಾಗೂ ಶಿವಕುಮಾರ್ ಆರಾಧ್ಯ ಚಿತ್ರದಲ್ಲಿ ಇರಲಿದ್ದಾರೆ. ಸಿನಿಮಾದಲ್ಲಿ ನಾಲ್ಕು ಹಾಡುಗಳು ಇರಲಿದ್ದು, ಕಾರ್ತಿಕ್ ವೆಂಕಟೇಶ್ ಸಂಗೀತ ನೀಡಲಿದ್ದಾರೆ. ಚಿತ್ರದ ಚಿತ್ರೀಕರಣ ಬೆಂಗಳೂರು, ಗಂಗಾವತಿ ಹಾಗೂ ಕೊಡಗಿನಲ್ಲಿ ನಡೆಯಲಿದೆ.

More from Filmibeat

English summary
19 years old boy Salman directing is 'Kalavannu Thadeyoru Ella' kannada movie launched.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X