'ಕಾಲ'ಕ್ಕೆ ಸೆಡ್ಡು ಹೊಡೆಯಲು ಸಜ್ಜಾದ 'ಮೋಸಗಾರ'
ಕುರುಕ್ಷೇತ್ರ, ಪೈಲ್ವಾನ್ ಅಂತಹ ಸ್ಟಾರ್ ನಟರ ಚಿತ್ರಗಳ ಪ್ರಚಾರದ ಮುಂಚೆ ಕೆಲವು ಹೊಸ ಸಿನಿಮಾಗಳು ಸೈಲೆಂಟ್ ಆಗಿದೆ. ಇಂಡಸ್ಟ್ರಿಯಲ್ಲಿ ಬೇರೆ ಏನು ಇಲ್ವಾ ಎನ್ನುವಷ್ಟು ಕೂಲ್ ಆಗಿದೆ. ಹೀಗಿರುವಾಗ 'ಕಾಲವೇ ಮೋಸಗಾರ' ಎಂಬ ಚಿತ್ರವೊಂದು ಸದ್ದು ಮಾಡ್ತಿದೆ.
ನಿನ್ನೆ ಸಂಜೆ 'ಕಾಲವೇ ಮೋಸಗಾರ' ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಅಬ್ಬರಿಸುವ ಸೂಚನೆ ನೀಡಿದೆ. ಮೊದಲ ಪೋಸ್ಟರ್ ನಲ್ಲೇ ಭಾರಿ ನಿರೀಕ್ಷೆ ಹುಟ್ಟಿಸಿದೆ.
ಭರತ್ ಸಾಗರ್ ಎಂಬ ಯುವ ನಟ ಈ ಚಿತ್ರದಲ್ಲಿ ನಾಯಕನಾಗಿ ಪಾದಾರ್ಪಣೆ ಮಾಡಲಿದ್ದಾರೆ. ಕೆಲವು ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರ ಮಾಡಿದ್ದ ಭರತ್, ಕಾಲವೇ ಮೋಸಗಾರ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಎಂಟ್ರಿ ಕೊಡ್ತಿದ್ದಾರೆ.

ಪಕ್ಕಾ ಆಕ್ಷನ್ ರೋಮ್ಯಾಂಟಿಕ್ ಸಿನಿಮಾ ಆಗಿರುವ ಈ ಚಿತ್ರಕ್ಕಾಗಿ ಭರತ್ ತಮ್ಮ ಲುಕ್ ಬದಲಾಯಿಸಿಕೊಂಡಿದ್ದಾರೆ. ಗ್ರ್ಯಾಂಡ್ ಎಂಟ್ರಿ ಕೊಡಬೇಕು ಎಂಬ ಉದ್ದೇಶದಿಂದ ರೆಡಿಯಾಗಿ ಬರ್ತಿದ್ದಾರೆ. ಮೋಷನ್ ಪೋಸ್ಟರ್ ನೋಡಿದ ವೀಕ್ಷಕರು ಕೂಡ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಅಂದ್ಹಾಗೆ, ಕಾಲವೇ ಮೋಸಗಾರ ಚಿತ್ರವನ್ನ ಸಂಜಯ್ ವದತ್ ನಿರ್ದೇಶನ ಮಾಡಿದ್ದಾರೆ. ರಜತ್ ದುರ್ಗೊಜಿ ಕೊಂಡೇಲಾ ಬಂಡವಾಳ ಹಾಕಿದ್ದು, ಕೆ ಲೋಕೇಶ್ ಸಂಗೀತ ನೀಡಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿಸಿರುವ ಕಾಲವೇ ಮೋಸಗಾರ ಸಿನಿಮಾ ಸದ್ಯದಲ್ಲೇ ಟ್ರೈಲರ್ ಮತ್ತು ಹಾಡುಗಳನ್ನ ಬಿಡುಗಡೆ ಮಾಡಲು ಚಿಂತನೆ ಮಾಡಿದೆ.
ಭರತ್ ಸಾಗರ್ ಜೊತೆಯಲ್ಲಿ ಯಶಸ್ವಿನಿ ರವೀಂದ್ರ, ಶಂಕರ್ ಮೂರ್ತಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ಕುರಿ ಪ್ರತಾಪ್, ವಿಜಯ್ ಚೆಂಡೂರ್, ಬ್ಯಾಂಕ್ ಜನಾರ್ಧನ್, ಆಶಾ ಸುಜಯ್, ಮುರಳಿ ಹಾಸನ್ ಕೂಡ ನಟಿಸಿದ್ದಾರೆ.


Click it and Unblock the Notifications











