ಹೊಸಬರ ಹೊಸ ಪ್ರಯತ್ನ 'ಕಾಲವೇ ಮೋಸಗಾರ' ನಾಲ್ಕು ಭಾಷೆಯಲ್ಲಿ ತೆರೆಕಾಣಲಿದೆ

ಹೊಸಬರ ತಂಡ ಸೇರಿ ನಿರ್ಮಿಸಿರುವ ಕನ್ನಡ ಚಿತ್ರ 'ಕಾಲವೇ ಮೋಸಗಾರ' ಸಿನಿಮಾ ಏಕಕಾಲದಲ್ಲಿ ನಾಲ್ಕು ಭಾಷೆಯಲ್ಲಿ ಬಿಡುಗಡೆ ಆಗಲಿದೆ.

Recommended Video

ಅಂಬಿ ಹುಟ್ಟು ಹಬ್ಬದ ಆಚರಣೆಗೆ ಅಂಬಿ ಸ್ಮಾರಕದ ಬಳಿ ಯಾರೆಲ್ಲಾ ಬಂದಿದ್ದಾರೆ ನೋಡಿ| Ambareesh

ಭರತ್ ಸಾಗರ್, ಯಶಸ್ವಿನಿ, ಕಿರಿಕ್ ಪಾರ್ಟಿಯ ಶಂಕರ್ ಮೂರ್ತಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರವನ್ನು ಸಂಜಯ್ ವದತ್ ನಿರ್ದೇಶಿಸುತ್ತಿದ್ದಾರೆ. ಇದು ಇವರ ಮೊದಲ ನಿರ್ದೇಶನದ ಚಿತ್ರ.

ಚಿತ್ರವನ್ನು ರಜತ್ ಸಲಂಕೆ ನಿರ್ಮಿಸಿದ್ದು, ಸಿನಿಮಾವನ್ನು ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು, ಮಲೆಯಾಳಂ, ಹಿಂದಿ ಭಾಷೆಗಳಲ್ಲೂ ಬಿಡುಗಡೆ ಮಾಡಲು ಯೋಜಿಸಿದ್ದಾರೆ. ಕನ್ನಡದಲ್ಲಿ 'ಕಾಲವೇ ಮೋಸಗಾರ' ಸಿನಿಮಾ ಬೇರೆ ಭಾಷೆಗಳಲ್ಲಿ 'ಲಾಸ್ಟ್ ಪೆಗ್' ಹೆಸರಿನಲ್ಲಿ ಬಿಡುಗಡೆ ಆಗಲಿದೆ.

'ಕಾಲವೇ ಮೋಸಗಾರ' ಸಿನಿಮಾ ಟೀಸರ್

'ಕಾಲವೇ ಮೋಸಗಾರ' ಸಿನಿಮಾ ಟೀಸರ್

'ಕಾಲವೇ ಮೋಸಗಾರ' ಸಿನಿಮಾದ ಟೀಸರ್, ಟ್ರೇಲರ್‌ಗಳು ಬಿಡುಗಡೆ ಆಗಿದ್ದು, ಸಿನಿಮಾ ಬಗ್ಗೆ ಕುತೂಹಲ ಹೆಚ್ಚಿಸಿದೆ. ಅಂಥೋಣಿ ದಾಸ್ ಹಾಡಿರುವ 'ಬಾಟ್ಲು ಬೇಕಾ, ಹುಡ್ಗಿ ಬೇಕಾ' ಹಾಡು ಸಹ ಟಿಕ್‌ ಟಾಕ್‌ನಲ್ಲಿ ಪ್ರಸಿದ್ಧವಾಗಿದೆ.

ಕುತೂಹಲಭರಿತ ಪ್ರೇಮಕತೆ

ಕುತೂಹಲಭರಿತ ಪ್ರೇಮಕತೆ

ಒಬ್ಬ ಹುಡುಗಿಗಾಗಿ ಇಬ್ಬರು ಹುಡುಗರ ನಡುವೆ ಪೈಪೋಟಿಯ ಕತೆ ಎಳೆ ಇದರಲ್ಲಿದೆ. ನಾಯಕಿಯು ರಗಡ್‌ ವ್ಯಕ್ತಿತ್ವದ ಪ್ರೀತಿಸಿದವನನ್ನು ಮದುವೆ ಆಗುತ್ತಾಳಾ ಅಥವಾ ಮನೆಯವರು ನೋಡಿದ ಹುಡುಗನನ್ನು ಮದುವೆ ಆಗುತ್ತಾಳಾ ಎಂಬುದು ಕುತೂಹಲ.

ಕುರಿ ಪ್ರತಾಪ್ ಅಭಿನಯ

ಕುರಿ ಪ್ರತಾಪ್ ಅಭಿನಯ

ಕುರಿಪ್ರತಾಪ್ ಅಭಿನಯಿಸಿರುವ ಈ ಸಿನಿಮಾದಲ್ಲಿ ಆಕ್ಷನ್, ಪ್ರೇಮಕತೆ, ಹಾಸ್ಯ ಸಮ ಪ್ರಮಾಣದಲ್ಲಿದೆ ಎಂದು ನಾಯಕ ಪಾತ್ರಧಾರಿ ಭರತ್ ಸಾಗರ್ ಹೇಳಿದ್ದಾರೆ. ಸಿನಿಮಾ ಒಂದು ಪರಿಪೂರ್ಣ ಪ್ಯಾಕೆಜ್ ಆಗಿರುತ್ತದೆ ಎಂಬ ಭರವಸೆಯನ್ನು ನೀಡಿದ್ದಾರೆ.

ಸಂಗೀತ ನೀಡಿರುವವರು ಲೊಕೇಶ್

ಸಂಗೀತ ನೀಡಿರುವವರು ಲೊಕೇಶ್

ಸಿನಿಮಾಕ್ಕೆ ಸಂಗೀತವನ್ನು ಲೊಕೇಶ್ ನೀಡಿದ್ದಾರೆ. ಬಿಜಿಎಂ ನೀಡಿರುವವರು ಸಂಜೀವ್ ಥೋಮಸ್, ಭಾವಸ್ಪಂದನ ಪ್ರೊಡಕ್ಷನ್ ಮತ್ತು ಬಿಎಂಡಬ್ಲು ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಿದೆ. ಥ್ರಿಲ್ಲರ್ ಮಂಜು ಸಾಹಸ, ನಾಗೇಂದ್ರ ಪ್ರಸಾದ್, ಪ್ರಮೋದ್ ಮರವಂತೆ ಸಾಹಿತ್ಯ ಹೊಸೆದಿದ್ದಾರೆ.

More from Filmibeat

English summary
New artists and technicians movie Kalave Mosagara is going to release in five languages.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X