For Quick Alerts
  ALLOW NOTIFICATIONS  
  For Daily Alerts

  ಬುಕ್ ಮೈ ಶೋ ವಿರುದ್ಧ ಆಕ್ರೋಶಗೊಂಡ 'ಕಳ್ಬೆಟ್ಟದ ದರೋಡೆಕೋರರು' ತಂಡ

  |

  ಒಂದು ಸಿನಿಮಾಗೆ ಟಿಕೆಟ್ ಬುಕ್ ಮಾಡಬೇಕು ಎಂದ ತಕ್ಷಣ ನೆನಪಾಗುವುದು ಬುಕ್ ಮೈ ಶೋ. ಸಿನಿಮಾಗಳ ಪ್ರದರ್ಶನಕ್ಕೆ ಅನುಕೂಲ ಆಗಬೇಕಾಗಿದ್ದ ಈ ಆಪ್ ಕನ್ನಡ ಚಿತ್ರಗಳ ಪಾಲಿಗೆ ಮಾತ್ರ ಕಂಟಕವಾಗಿದೆ.

  ಇದೀಗ ಕನ್ನಡದ ಮತ್ತೊಂದು ಚಿತ್ರತಂಡ ಬುಕ್ ಮೈ ಶೋ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದೆ. 'ಕಳ್ಬೆಟ್ಟದ ದರೋಡೆಕೋರರು' ಸಿನಿಮಾಗೆ ಬುಕ್ ಮೈ ಶೋದಲ್ಲಿ ರೇಟಿಂಗ್ ಅನ್ನು ಬಹಳ ಕಡಿಮೆ ನೀಡಿದ್ದಾರೆ. ಇದು ಚಿತ್ರತಂಡದ ಬೇಸರಕ್ಕೆ ಕಾರಣವಾಗಿದೆ.

  ಗಾಂಧಿನಗರದ ಸುತ್ತ : 'ಮಜಾ ಟಾಕೀಸ್'ನಲ್ಲಿ ದರೋಡೆಕೋರರು.. 'ಯಜಮಾನ'ದ ಮತ್ತೊಂದು ಹಾಡು..

  ಈ ಬಗ್ಗೆ ಟ್ವೀಟ್ ಮಾಡಿರುವ ಚಿತ್ರದ ನಾಯಕ ನಟರಾಜ್ ''ಈ ಬುಕ್ ಮೈ ಶೋ ಮತ್ತು ಕೆಲವು ಹಣಕ್ಕಾಗಿಯೇ ಕೆಲಸ ಮಾಡುವ ಸಂಸ್ಥೆಗಳು ಹೀಗೆ ಇದ್ದಕ್ಕಿದ್ದ ಹಾಗೆ ನಂಬರ್ ಇಳಿಸುವ ತಂತ್ರ ಕಂಡುಕೊಂಡಿದ್ದಾರೆ. ನಮ್ಮ ಓಟಿಂಗ್ ಹೆಚ್ವಿಗೆ ಇದ್ದರೂ ನಂಬರ್ ಕಮ್ಮಿ ತೋರಿಸುತ್ತದೆ. ಹಣ ಕೊಟ್ಟರೆ ಸರಿ ಮಾಡಿಸುವುದಾಗಿ ಹೇಳುತ್ತಾರೆ. ಇಂದು ಅರ್ಗ್ಯಾನಿಕ್ ಅನ್ನುವ ಪದ, "ಅರ್ಥ"(money) ದಿಂದ "ಅರ್ಥ" ಕಳೆದುಕೊಂಡಿದೆ.'' ಎಂದು ಬರೆದುಕೊಂಡಿದ್ದಾರೆ.

  ಬುಕ್ ಮೈ ಶೋ ನಲ್ಲಿ ನೋಡಿದರೆ 'ಕಳ್ಬೆಟ್ಟದ ದರೋಡೆಕೋರರು' ಚಿತ್ರಕ್ಕೆ ಜನ ಒಳ್ಳೆಯ ರೇಟಿಂಗ್ ನೀಡಿದ್ದಾರೆ. ಎಲ್ಲ ರೇಟಿಂಗ್ ಗಳು 4 - 5 ಹೀಗೇ ಇವೆ. ಹೀಗಿದ್ದರೂ, ಒಟ್ಟು ರೇಟಿಂಗ್ ಮಾತ್ರ 38% ಇದೆ. ಈ ಕಾರಣ ಚಿತ್ರತಂಡ ಬುಕ್ ಮೈ ಶೋ ವಿರುದ್ಧ ಕೋಪಗೊಂಡಿದೆ. ಪದೇ ಪದೇ ಕನ್ನಡ ಸಿನಿಮಾಗಳಿಗೆ ಬುಕ್ ಮೈ ಶೋ ರೇಟಿಂಗ್ ಸಮಸ್ಯೆ ಬರುತ್ತಿದ್ದು, ಯಾವಾಗ ಅದು ಬಗೆ ಹರಿಯುತ್ತದೆಯೋ ಏನೋ.

  English summary
  'Kalbettada Darodekoraru' kannada movie team unhappy with book my show rating. Actor Nataraj says that book my show not gave a proper rating for there movie. 'Kalbettada Darodekoraru' movie released last friday and getting possitive responce. The movie is directed by Deepak maduvanahalli.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X