ದರೋಡೆಕೋರರು ಬರಲು ಡೇಟ್ ಫಿಕ್ಸ್ ಆಯ್ತು
'ಕಳ್ಬೆಟ್ಟದ ದರೋಡೆಕೋರರು' ಸಿನಿಮಾದ 'ಕಮಲಿ..' ಹಾಡನ್ನು ನೋಡಿ ಅದೇ ಗುಂಗಿನಲ್ಲಿರುವ ಪ್ರೇಕ್ಷಕರಿಗೆ ಸಿನಿಮಾದ ಬಗ್ಗೆ ಸಿಹಿ ಸುದ್ದಿ ಬಂದಿದೆ. 'ಕಳ್ಬೆಟ್ಟದ ದರೋಡೆಕೋರರು' ಚಿತ್ರದ ಬಿಡುಗಡೆಯ ದಿನಾಂಕ ಇದೀಗ ನಿಗದಿಯಾಗಿದೆ.
ಸಿನಿಮಾದ ಬಿಡುಗಡೆಯ ದಿನದ ವಿಷಯವನ್ನು ಚಿತ್ರದ ನಟ ನಟರಾಜ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಂದಹಾಗೆ, ಸಿನಿಮಾ ಫೆಬ್ರವರಿ 22 ರಂದು ಚಿತ್ರ ಬಿಡುಗಡೆಯಾಗಲಿದೆ. ಇನ್ನು ಎರಡೇ ವಾರಗಳಲ್ಲಿ ಈ ಸಿನಿಮಾವನ್ನು ತೆರೆ ಮೇಲೆ ನೋಡಬಹುದುದಾಗಿದೆ.
ಈ ಸಿನಿಮಾ ದೀಪಕ್ ಮದುವನಹಳ್ಳಿ ಅವರ ಕನಸಿನ ಸಿನಿಮಾವಾಗಿದೆ. ಸಿನಿಮಾದ ಬಗ್ಗೆ ಪ್ಯಾಶನ್ ಇರುವ ಈ ನಿರ್ದೇಶಕ ಮತ್ತೊಂದು ಒಳ್ಳೆಯ ಪ್ರಯತ್ನದ ಮೂಲಕ ಬಂದಿದ್ದಾರೆ. ಬ್ರಿಡ್ಜ್ ಫಿಲ್ಮ್ಸ್ ಇದನ್ನು ನಿರ್ಮಾಣ ಮಾಡಿದೆ.

ನಟರಾಜ್ ಹಾಗೂ ಶ್ವೇತ ಪ್ರಸಾದ್ ಚಿತ್ರದ ನಾಯಕ ನಾಯಕಿಯಾಗಿದ್ದಾರೆ. ಸೀರಿಯಲ್ ಮೂಲಕ ಜನಪ್ರಿಯತೆ ಪಡೆದ ಶ್ವೇತ ಈಗ ಸಿನಿಮಾ ಮಾಡುತ್ತಿದ್ದಾರೆ. ಇಬ್ಬರ ಜೋಡಿ ಮುದ್ದಾಗಿ ಕಾಣುತ್ತಿದೆ.
ಅನೂಪ್ ಸಿಳೀನ್ ಸಂಗೀತದ ಹಾಡುಗಳು ಈಗಾಗಲೇ ಹಿಟ್ ಆಗಿದೆ. ಈ ಸಿನಿಮಾದಲ್ಲಿಯೂ ಅವರು ಹೊಸ ರೀತಿಯ ಮ್ಯೂಸಿಕ್ ನೀಡಿದ್ದಾರೆ. ನೀನು ಸಿದ್ದರಾಗಿ 'ಕಳ್ಬೆಟ್ಟದ ದರೋಡೆಕೋರರು' ಚಿತ್ರಮಂದಿರಕ್ಕೆ ಬರಲು ಕೆಲವೇ ದಿನಗಳು ಬಾಕಿ ಇದೆ.


Click it and Unblock the Notifications











