ನಟ ಜಗ್ಗೇಶ್ ಇನ್ಮುಂದೆ 'ಕನ್ನಡದ ಮೇಷ್ಟ್ರು' ಕಾಳಿದಾಸ

Recommended Video

ನಟ ಜಗ್ಗೇಶ್ ಇನ್ಮುಂದೆ 'ಕನ್ನಡದ ಮೇಷ್ಟ್ರು' ಕಾಳಿದಾಸ | FILMIBEAT KANNADA

ಭಾಷೆ, ನೆಲ, ಜಲ ವಿಚಾರಕ್ಕೆ ಬಂದ್ರೆ ನವರಸ ನಾಯಕ ಜಗ್ಗೇಶ್ ಸದಾ ಮುಂದೆ ಬರ್ತಾರೆ. ಕನ್ನಡಕ್ಕೆ, ಕನ್ನಡಿಗರಿಗೆ ಅನ್ಯಾಯ ಮಾಡೋರಿಗೆ ಸರಿಯಾಗಿ ಕ್ಲಾಸ್ ತಗೊಳ್ತಾರೆ. ಕೆಟ್ಟದನ್ನ ಕಂಡ್ರೆ ಅದು ತಪ್ಪು ಎಂದು ತಿದ್ದಿ ಹೇಳುವ ಪ್ರಯತ್ನ ಪಡ್ತಾರೆ. ಇದು ಜಗ್ಗೇಶ್ ಅವರ ಸಹಜ ಗುಣ.

ಆದ್ರೀಗ ಜಗ್ಗೇಶ್ ಅವರು ಕಾಳಿದಾಸ ಆಗಲು ಹೊರಟಿದ್ದಾರೆ. ಬರಿ ಕಾಳಿದಾಸ ಅಲ್ಲ, 'ಕಾಳಿದಾಸ ಕನ್ನಡ ಮೇಷ್ಟ್ರು' ಆಗಿದ್ದಾರೆ. ಹೌದು, 'ಪ್ರೀಮಿಯರ್ ಪದ್ಮಿನಿ', 'ತೋತಾಪುರಿ' ಚಿತ್ರಗಳಲ್ಲಿ ನಟಿಸುತ್ತಿರುವ ಜಗ್ಗೇಶ್ ಈಗ 'ಕಾಳಿದಾಸ ಕನ್ನಡ ಮೇಷ್ಟ್ರು' ಎಂಬ ಸಿನಿಮಾವನ್ನ ಒಪ್ಪಿಕೊಂಡಿದ್ದಾರೆ.

ಸಾಹಿತಿ ಕವಿರಾಜ್ ಅವರು ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದು, ಜಗ್ಗೇಶ್ ಅವರಿಗೆ ಜೋಡಿಯಾಗಿ ನಟಿ ಮೇಘನಾ ಗಾಂವ್ಕರ್ ನಟಿಸುತ್ತಿದ್ದಾರೆ. ಅಂದ್ಹಾಗೆ, ಮೇಘನಾ ಎರಡು ವರ್ಷದ ನಂತರ ಅಭಿನಯಿಸುತ್ತಿರುವ ಸಿನಿಮಾ ಇದಾಗಿದೆ. ಕೊನೆಯದಾಗಿ 'ಸಿಂಪಲಾಗ್ ಇನ್ನೊಂದು ಲವ್ ಸ್ಟೋರಿ' ಮಾಡಿದ್ದರು.

kalidasa kannada meshtru poster release

ಕವಿರಾಜ್ ಅವರು ಈ ಹಿಂದೆ 'ಮದುವೆಯ ಮಮತೆಯ ಕರೆಯೋಲೆ' ಚಿತ್ರವನ್ನ ನಿರ್ದೇಶನ ಮಾಡಿದ್ದರು. ಅದಾದ ಬಳಿಕ ಈಗ ಇನ್ನೊಂದು ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ.

kalidasa kannada meshtru poster release

ಸದ್ಯ, 'ಕಾಳಿದಾಸ ಕನ್ನಡ ಮೇಷ್ಟ್ರು' ಚಿತ್ರದ ಪೋಸ್ಟರ್ ಈಗ ಬಿಡುಗಡೆಯಾಗಿದ್ದು, ಎಲ್ಲರನ್ನ ಆಕರ್ಷಿಸುತ್ತಿದೆ. ನಾಳೆಯಿಂದ ಕಂಠೀರವ ಸ್ಟುಡಿಯೋದಲ್ಲಿ ಸಿನಿಮಾ ಶೂಟಿಂಗ್ ಆರಂಭವಾಗ್ತಿದೆ.

More from Filmibeat

English summary
Lyricist kaviraj directional 'kalidasa kannada meshtru' movie starts from december 10th. meghana gaonkar stars opposite Jaggesh in this film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X