For Quick Alerts
  ALLOW NOTIFICATIONS  
  For Daily Alerts

  'ಕಾಳಿದಾಸ ಕನ್ನಡ ಮೇಷ್ಟ್ರು' ಚಿತ್ರಕ್ಕೆ ಎಲ್ಲೆಲ್ಲೂ ಹೌಸ್ ಫುಲ್ ಬೋರ್ಡ್.!

  |

  'ಕಾಳಿದಾಸ ಕನ್ನಡ ಮೇಷ್ಟ್ರು' ಚಿತ್ರಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ನವರಸ ನಾಯಕ ಜಗ್ಗೇಶ್ ನಿನ್ನೆಯಷ್ಟೇ ಆಕ್ರೋಶ ವ್ಯಕ್ತಪಡಿಸಿದ್ದರು. ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿರುವ 'ಕಾಳಿದಾಸ ಕನ್ನಡ ಮೇಷ್ಟ್ರು' ಚಿತ್ರವನ್ನ ಎಷ್ಟೋ ಚಿತ್ರಮಂದಿರಗಳಲ್ಲಿ ಎತ್ತಂಗಡಿ ಮಾಡಲಾಗಿತ್ತು. ಇದನ್ನ ಕಂಡ ಜಗ್ಗೇಶ್ ''ದಕ್ಷಿಣೆ ಪಡೆದು ಕಳಿಸುವ ಚಾಂಡಾಳ ವೃತ್ತಿಯಾಗಿದೆ ಚಿತ್ರರಂಗ'' ಎನ್ನುತ್ತಾ ಟ್ವಿಟ್ಟರ್ ನಲ್ಲಿ ಗುಡುಗಿದ್ದರು.

  ಇಷ್ಟೆಲ್ಲಾ ಆದ ಮೇಲೆ ಒಂದು ಪವಾಡ ನಡೆದೇ ಹೋಯ್ತು ನೋಡಿ. ನಿನ್ನೆ ಶನಿವಾರ.. ವೀಕೆಂಡ್ ಮಸ್ತಿ ಮೂಡ್ ನಲ್ಲಿದ್ದ ಕನ್ನಡ ಸಿನಿ ಪ್ರಿಯರು 'ಕಾಳಿದಾಸ ಕನ್ನಡ ಮೇಷ್ಟ್ರು' ಚಿತ್ರ ವೀಕ್ಷಿಸಲು ಮುಗಿಬಿದ್ದರು. ಪರಿಣಾಮ ನಿನ್ನೆ ಎಲ್ಲೆಲ್ಲೂ 'ಕಾಳಿದಾಸ ಕನ್ನಡ ಮೇಷ್ಟ್ರು' ಚಿತ್ರ ಹೌಸ್ ಫುಲ್ ಪ್ರದರ್ಶನ ಕಂಡಿದೆ. ಇದರಿಂದ ಸಹಜವಾಗಿಯೇ 'ಕಾಳಿದಾಸ ಕನ್ನಡ ಮೇಷ್ಟ್ರು' ಶೋಗಳ ಸಂಖ್ಯೆ ದುಪ್ಪಟ್ಟಾಗಿದೆ.

  ಬೆಂಗಳೂರಿನ ಮುಖ್ಯ ಚಿತ್ರಮಂದಿರ ನರ್ತಕಿಯಲ್ಲೂ 'ಕಾಳಿದಾಸ ಕನ್ನಡ ಮೇಷ್ಟ್ರು' ಮತ್ತೆ ಪ್ರದರ್ಶನ ಆಗುತ್ತಿದೆ. ಮೈಸೂರಿನ ಪದ್ಮ ಥಿಯೇಟರ್ ನಲ್ಲೂ ಪ್ರೇಕ್ಷಕರ ಒತ್ತಾಯದ ಮೇರೆಗೆ 'ಕಾಳಿದಾಸ ಕನ್ನಡ ಮೇಷ್ಟ್ರು' ಪುನಃ ಪಾಠ ಶುರು ಮಾಡಲಿದ್ದಾರೆ. ಮುಂದೆ ಓದಿರಿ...

  ಪ್ರತಿಭಟನೆ ಸಜ್ಜಾದ ಚಿತ್ರತಂಡ

  ಪ್ರತಿಭಟನೆ ಸಜ್ಜಾದ ಚಿತ್ರತಂಡ

  ಈ ಎಲ್ಲದರ ನಡುವೆ 'ಕಾಳಿದಾಸ ಕನ್ನಡ ಮೇಷ್ಟ್ರು' ಚಿತ್ರಕ್ಕೆ ಕೆಲ ಪ್ರದರ್ಶಕರು ತೊಂದರೆ ಕೊಡುತ್ತಿದ್ದಾರಂತೆ. ಅವರುಗಳ ವಿರುದ್ಧ ಪ್ರತಿಭಟನೆ ಮಾಡಲು ಚಿತ್ರತಂಡ ಸಜ್ಜಾಗಿದೆ.

  'ದಕ್ಷಿಣೆ ಪಡೆದು ಕಳಿಸುವ ಚಾಂಡಾಳ ವೃತ್ತಿಯಾಗಿದೆ ಚಿತ್ರರಂಗ': ನಟ ಜಗ್ಗೇಶ್ ಆಕ್ರೋಶ'ದಕ್ಷಿಣೆ ಪಡೆದು ಕಳಿಸುವ ಚಾಂಡಾಳ ವೃತ್ತಿಯಾಗಿದೆ ಚಿತ್ರರಂಗ': ನಟ ಜಗ್ಗೇಶ್ ಆಕ್ರೋಶ

  ಗಣ್ಯರು ಮೆಚ್ಚಿದ ಸಿನಿಮಾ

  ಗಣ್ಯರು ಮೆಚ್ಚಿದ ಸಿನಿಮಾ

  ಕಾನ್ವೆಂಟ್ ಶಾಲೆಗಳ ಅಬ್ಬರ, ಮುಚ್ಚುತ್ತಿರುವ ಸರ್ಕಾರಿ ಶಾಲೆಗಳು, ಶಿಕ್ಷಣ ದಂಧೆ, ಮುಗ್ಧ ಮನಸ್ಸಿನ ಮಕ್ಕಳು ಪಡುವ ಮಾನಸಿಕ ವೇದನೆಯಂತಹ ಗಂಭೀರ ಸಮಸ್ಯೆಗಳ ಸುತ್ತ ಸುತ್ತುವ ಸಿನಿಮಾ 'ಕಾಳಿದಾಸ ಕನ್ನಡ ಮೇಷ್ಟ್ರು'. ಈ ಚಿತ್ರ ವೀಕ್ಷಿಸಿ ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್, ಕವಿತಾ ಲಂಕೇಶ್, ಪರಿಮಳ ಜಗ್ಗೇಶ್ ಸೇರಿದಂತೆ ಹಲ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  'ಕಾಳಿದಾಸ ಕನ್ನಡ ಮೇಷ್ಟ್ರು' ಚಿತ್ರವನ್ನು ನೋಡಿ ಜಗ್ಗೇಶ್ ಪತ್ನಿ ಪರಿಮಳ ಹೇಳಿದ್ದು ಹೀಗೆ.!'ಕಾಳಿದಾಸ ಕನ್ನಡ ಮೇಷ್ಟ್ರು' ಚಿತ್ರವನ್ನು ನೋಡಿ ಜಗ್ಗೇಶ್ ಪತ್ನಿ ಪರಿಮಳ ಹೇಳಿದ್ದು ಹೀಗೆ.!

  ಕರುಣೆ ತೋರದ ಥಿಯೇಟರ್ ಮಾಲೀಕರು

  ಕರುಣೆ ತೋರದ ಥಿಯೇಟರ್ ಮಾಲೀಕರು

  ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಇದ್ದರೂ, ಕೆಲ ಥಿಯೇಟರ್ ಗಳಿಂದ 'ಕಾಳಿದಾಸ ಕನ್ನಡ ಮೇಷ್ಟ್ರು' ಚಿತ್ರವನ್ನು ಕಿತ್ತು ಹಾಕಲಾಗಿತ್ತು. ಅಸಲಿಗೆ, ಮೊನ್ನೆ ಶುಕ್ರವಾರ ಕನ್ನಡದ 9 ಸಿನಿಮಾಗಳು ತೆರೆಗೆ ಬಂದಿತ್ತು. ಇದರೊಂದಿಗೆ ಪರಭಾಷೆಯ 30 ಕ್ಕೂ ಹೆಚ್ಚು ಚಿತ್ರಗಳು ಬೆಂಗಳೂರಿನಲ್ಲಿ ಬಿಡುಗಡೆ ಆಗಿತ್ತು. ಹೀಗಾಗಿ, 'ಕಾಳಿದಾಸ ಕನ್ನಡ ಮೇಷ್ಟ್ರು'ಗೆ ಥಿಯೇಟರ್ ಮಾಲೀಕರು ಕರುಣೆ ತೋರಲಿಲ್ಲ.

  'ಕಾಳಿದಾಸ ಕನ್ನಡ ಮೇಷ್ಟ್ರು'ಗೆ ಜೈಕಾರ ಹಾಕಿದ ಯೋಗರಾಜ್ ಭಟ್'ಕಾಳಿದಾಸ ಕನ್ನಡ ಮೇಷ್ಟ್ರು'ಗೆ ಜೈಕಾರ ಹಾಕಿದ ಯೋಗರಾಜ್ ಭಟ್

  ಪ್ರೇಕ್ಷಕರೇ ಪೋಷಕರಾಗಬೇಕು.!

  ಪ್ರೇಕ್ಷಕರೇ ಪೋಷಕರಾಗಬೇಕು.!

  ಕನ್ನಡ ಸಿನಿ ಪ್ರಿಯರು ನಿನ್ನೆ 'ಕಾಳಿದಾಸ ಕನ್ನಡ ಮೇಷ್ಟ್ರು' ಕೈಹಿಡಿದ ಕಾರಣ ಚಿತ್ರತಂಡಕ್ಕೆ ಮತ್ತೆ ಜೀವ ಬಂದಿದೆ. ಕರ್ನಾಟಕದ ಹಲವೆಡೆ ಮತ್ತೆ ಮೇಷ್ಟ್ರ ಪಾಠ ಜೋರಾಗಿ ಕೇಳಿ ಬರುವ ಸಾಧ್ಯತೆ ಇದೆ. ಕಾಳಿದಾಸನಿಗೆ ಪ್ರೇಕ್ಷಕರೇ ಪೋಷಕರಾದರೆ, ಚಿತ್ರತಂಡಕ್ಕೆ ಅದಕ್ಕಿಂತ ಇನ್ನೇನು ಬೇಕು.?

  English summary
  Kalidasa Kannada Meshtru show numbers have been increased.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X