'ಕಲ್ಕಿ' ಪ್ರಭಾಸ್ ಫೋಟೋ ಲೀಕ್: ಕಂಪನಿ ವಿರುದ್ಧ ಪ್ರಕರಣ ದಾಖಲಿಸಿದ ಚಿತ್ರತಂಡ

ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅವರ ಮುಂಬರುವ ದೊಡ್ಡ ಚಿತ್ರ, ಪ್ರಾಜೆಕ್ಟ್ ಕೆ ಅಂದರೆ 'ಕಲ್ಕಿ 2898 ಎಡಿ' ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಬಹು ನಿರೀಕ್ಷಿತ ಸಿನಿಮಾವನ್ನು ಪ್ರಸಿದ್ಧ ನಿರ್ಮಾಣ ಸಂಸ್ಥೆಯಾದ ವೈಜಯಂತಿ ಮೂವೀಸ್ ಜಾಗತಿಕ ಮಟ್ಟದಲ್ಲಿ ಪ್ರತಿಷ್ಠಿತವಾಗಿ ನಿರ್ಮಿಸುತ್ತಿದೆ. ಆದರೆ, ಸಿನಿಮಾಗೆ ಮೊಬೈಲ್‌ಗಳಿಂದ ಹೆಚ್ಚು ತೊಂದರೆಗಳು ಶುರುವಾಗಿವೆ.

ಸಿನಿಮಾ ನಿರ್ಮಾಣ ಮಾಡಲು ನಿರ್ಮಾಪಕರು ಕೋಟ್ಯಾಂತರ ರೂಪಾಯಿ ಹಣ ವ್ಯಯಿಸಿರುತ್ತಾರೆ. ತಮ್ಮ ಸಿನಿಮಾ ಇದೇ ರೀತಿ ಬರಬೇಕು. ಅದರ ಪೋಸ್ಟರ್‌ಗಳನ್ನು ಹೀಗೇಯೆ ಬಿಡುಗಡೆ ಮಾಡಬೇಕು. ದೊಡ್ಡ ದೊಡ್ಡ ವೇದಿಕೆಗಳಲ್ಲಿ ಸಿನಿಮಾ ಪೋಸ್ಟರ್, ನಟ ನಟಿಯರ ಫಸ್ಟ್ ಲುಕ್, ಟೀಸರ್‌ಗಳನ್ನು ರಿಲೀಸ್ ಮಾಡುವ ಪ್ಲ್ಯಾನ್ ಮಾಡಿರುತ್ತಾರೆ. ಇದಕ್ಕೆ ಕೆಲವರು ಎಳ್ಳು ನೀರು ಬಿಟ್ಟುಬಿಡುತ್ತಾರೆ!.

Kalki 2898 AD: Kalki makers file case against VFX company for Prabhas photo leakage

'ಕಲ್ಕಿ' ಪ್ರಭಾಸ್ ಫೋಟೋ ಲೀಕ್!

ಇದೇ ರೀತಿ 'ಕಲ್ಕಿ 2898 ಎಡಿ' ತಂಡವು ಸಾಮಾಜಿಕ ಮಾಧ್ಯಮಗಳಲ್ಲಿ ಸಿನಿಮಾದ ಅಪ್‌ಡೇಟ್‌ಗಳ ಸೋರಿಕೆಯನ್ನು ತಡೆಯುವಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದೆ. ಸುಮಾರು 10 ದಿನಗಳ ಹಿಂದೆ ಇಂಟರ್‌ನೆಟ್‌ನಲ್ಲಿ ಪ್ರಭಾಸ್ ಚಿತ್ರ ಸೋರಿಕೆಯಾಗಿತ್ತು. ಈಗ ಸಿನಿಮಾ ತಂಡವು ಈ ಸೋರಿಕೆಯ ಮೂಲವನ್ನು ಪತ್ತೆಹಚ್ಚಿದೆ ಎಂದು ಅನ್ನಿಸುತ್ತಿದೆ.

ಸಿನಿಮಾ ತಂಡದ ಭಾಗವಾಗಿರುವ VFX ಕಂಪನಿ ಕಡೆಯಿಂದ ಫೋಟೋ ಸೋರಿಕೆಯಾಗಿದೆ. ಮೂಲದ ಪ್ರಕಾರ, ನಿರ್ಮಾಪಕರು ಚಿತ್ರಕ್ಕೆ ಸಂಬಂಧಿಸಿದ ವಿಎಫ್‌ಎಕ್ಸ್ ಕಂಪನಿಯ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಕಂಪನಿಯ ವಿರುದ್ಧ ದೊಡ್ಡ ಮೊತ್ತಕ್ಕೆ ಕಾನೂನು ಮೊಕದ್ದಮೆ ಹೂಡಿದ್ದಾರೆ.

Kalki 2898 AD: Kalki makers file case against VFX company for Prabhas photo leakage

ವಿಎಫ್‌ಎಕ್ಸ್ ಸಂಸ್ಥೆಯು ಕೂಡ ಫೋಟೋ ಲೀಕ್ ಮಾಡಿದವರನ್ನು ಕೆಲಸದಿಂದ ವಜಾಗೊಳಿಸಿದೆ. ಆದರೂ ಕೂಡ ಇಂತಹ ದೊಡ್ಡ ತಪ್ಪು ಮಾಡಿದ ಕಾರಣ ಕಾನೂನು ಪ್ರಕರಣವನ್ನು ಎದುರಿಸುತ್ತಿದ್ದಾರೆ. ಪ್ರಭಾಸ್ ಲುಕ್ ಲೀಕ್ ಆಗಿರುವ ಸುದ್ದಿ ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿದ್ದರೆ, ನೆಟಿಜನ್‌ಗಳು ಇದಕ್ಕೆ ಬೇರೆ ಆಂಗಲ್ ಕೊಡಲು ನೋಡುತ್ತಿದ್ದಾರೆ. ಇದೆಲ್ಲಾ ಸಿನಿಮಾ ಪ್ರಚಾರ ಮಾಡಲು ವೈಜಯಂತಿ ಮೂವೀಸ್‌ನ ನಾಟಕ ಎಂದು ಟೀಕಿಸುತ್ತಿದ್ದಾರೆ.

ಇನ್ನು, ಹೀಗೆ ಸಿನಿಮಾಗಳ ಅಪ್‌ಡೇಟ್‌ಗಳು ಸೋರಿಕೆಯಾಗುವುದು ಹೆಚ್ಚಾಗುತ್ತಿದೆ. ಇತ್ತೀಚೆಗಷ್ಟೇ ನಟ ಮಹೇಶ್ ಬಾಬು ಅವರ ಬಹುನಿರೀಕ್ಷಿತ ಸಿನಿಮಾ 'ಗುಂಟೂರು ಕಾರಂ' ಚಿತ್ರೀಕರಣದ ಚಿತ್ರಗಳು ಸೋರಿಕೆಯಾಗಿದ್ದವು. ನಟ ರಾಮ್ ಚರಣ್ ಅವರ 'ಗೇಮ್ ಚೇಂಜರ್' ಸಿನಿಮಾದ ಸಂಪೂರ್ಣ ಆಡಿಯೊ ಹಾಡು ಸೋರಿಕೆಯಾಗಿದೆ. ಈಗ ಈ ಪಟ್ಟಿಗೆ ಕಲ್ಕಿ 2898 ಎಡಿ ಸಿನಿಮಾ ಕೂಡ ಸೇರಿಕೊಂಡಿದೆ.

ಕಲ್ಕಿ 2898 ಎಡಿ

ಬಹುನಿರೀಕ್ಷಿತ ಕಲ್ಕಿ 2898 ಎಡಿ ಪ್ರಭಾಸ್‌ಗೆ ನಾಯಕಿಯಾಗಿ ನಟಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದಾರೆ. ಜೊತೆಗೆ ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದಿಶಾ ಪಟಾನಿ, ಪಶುಪತಿ ಮತ್ತು ಇತರ ದೊಡ್ಡ ದೊಡ್ಡ ನಟರ ತಾರಾ ಬಳಗವೇ ಸಿನಿಮಾದಲ್ಲಿದೆ. ಈ ಮಹತ್ವಾಕಾಂಕ್ಷೆಯ ಪೌರಾಣಿಕ ವೈಜ್ಞಾನಿಕ ಆಕ್ಷನ್ ಫಿಲಂ ಅನ್ನು ವೈಜಯಂತಿ ಮೂವೀಸ್ ಬೃಹತ್ ಪ್ರಮಾಣದಲ್ಲಿ ನಿರ್ಮಿಸುತ್ತಿದ್ದು, ಸಂತೋಷ್ ನಾರಾಯಣನ್ ಚಿತ್ರದ ಸಂಗೀತವನ್ನು ಸಂಯೋಜಿಸಿದ್ದಾರೆ.

ಕಲ್ಕಿ 2898 ಎಡಿಯ ಫಸ್ಟ್ ಲುಕ್ ಅನ್ನು ಸ್ಯಾನ್ ಡಿಯಾಗೋ ಕಾಮಿಕ್ ಕಾನ್ (SDCC) ನಲ್ಲಿ ಅನಾವರಣ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪ್ರಭಾಸ್, ಕಮಲ್ ಹಾಸನ್ ಮತ್ತು ರಾಣಾ ದಗ್ಗುಬಾಟಿ ಭಾಗವಹಿಸಿದ್ದರು.

More from Filmibeat

English summary
Kalki makers filed Legal case against VFX company Prabhas' photo leakage
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X