twitter
    For Quick Alerts
    ALLOW NOTIFICATIONS  
    For Daily Alerts

    ‘ಕಳ್ಳ ಪೊಲೀಸ್‌’ನಲ್ಲಿ 11 ಮಂದಿ ನಾಯಕರು

    By Super
    |

    ಹಲವು ವರ್ಷಗಳ ಹಿಂದೆ ಬಿಡುಗಡೆಯಾದ ಕಳ್ಳ - ಮಳ್ಳ ಚಿತ್ರದಲ್ಲಿ ಶಶಿಕುಮಾರ್‌, ಶ್ರೀಧರ್‌ ನಾಯಕರಾಗಿದ್ದರಾದರೂ ದೊಡ್ಡಣ್ಣ ಹಾಗೂ ಜಗ್ಗೇಶ್‌ ಚಿತ್ರದ ಟೈಟಲ್‌ನಲ್ಲೇ ಹೀರೋಗಳಾಗಿ ಮಿಂಚಿದರು. ಈ ಇಬ್ಬರಿಗೂ ಬ್ರೇಕ್‌ ಕೊಟ್ಟ ಚಿತ್ರವೂ ಅದೇ. ಕಳ್ಳ ಮಳ್ಳ ಬಳಿಕ ಮತ್ತೆ ದೊಡ್ಡ ದೇಹದ ದೊಡ್ಡಣ್ಣ ನಾಯಕರಾಗುತ್ತಿದ್ದಾರೆ.

    ತೆಲುಗಿನಲ್ಲಿ ತಯಾರಾದ ಅಲಿಬಾಬ - ಅರೆ ಡಜನ್‌ ದೊಂಗಾಲು ಚಿತ್ರದ ಕಥಾವಸ್ತುವನ್ನೇ ಇಟ್ಟುಕೊಂಡು ತಯಾರಿಸುತ್ತಿರುವ ಅರ್ಥಾತ್‌ ರೀಮೇಕ್‌ ಮಾಡುತ್ತಿರುವ ಕನ್ನಡ ಚಿತ್ರದಲ್ಲಿ ಹತ್ತಿರ ಹತ್ತಿರ ಹನ್ನೊಂದು ಮಂದಿ ನಾಯಕರಿದ್ದಾರೆ. ಈ ಚಿತ್ರಕ್ಕೆ ಕಳ್ಳ ಪೊಲೀಸ್‌ ಎಂದೂ ಹೆಸರಿಡಲಾಗಿದೆ.

    ತೆಲುಗಿನ ನಿರ್ದೇಶಕ ಇ.ವಿ. ಸತ್ಯನಾರಾಯಣ ಅವರ ಕಥೆಯುಳ್ಳ ಕನ್ನಡ ಚಿತ್ರದಲ್ಲೂ 6 ಜನ ಕಳ್ಳರಿದ್ದಾರೆ. ಈ ಆರು ಮಂದಿ ಯಾರು ಯಾರಿಗೆ ಹೇಗೆ ವಂಚಿಸುತ್ತಾರೆ ಎಂಬ ಹಾಸ್ಯ ಸನ್ನಿವೇಶಗಳೇ ಕಥೆಯ ಮುಖ್ಯ ಕಥಾವಸ್ತು. ಅಂದರೆ ಇದೊಂದು ಹಾಸ್ಯಮಯ ಚಿತ್ರ.

    ಹೀಗಾಗಿ ಈ ಚಿತ್ರದಲ್ಲಿ ಕನ್ನಡದ ಎಲ್ಲ ಹಾಸ್ಯ ನಟರನ್ನೂ ಒಂದು ಕಡೆ ಸೇರಿಸಲಾಗಿದೆ. ದೊಡ್ಡಣ್ಣ, ಹೊನ್ನವಳ್ಳಿ ಕೃಷ್ಣ, ಟೆನ್ನಿಸ್‌ ಕೃಷ್ಣ, ಉಮೇಶ್‌, ಬಿರಾದಾರ್‌, ಕರಿಬಸವಯ್ಯ... ಹೀಗೆ ನಾಯಕರ ಪಟ್ಟಿ ಹನುಮಂತನ ಬಾಲದಂತೆ ಬೆಳೆಯುತ್ತದೆ. ಚಿತ್ರಕ್ಕೆ ರಿಯಲ್‌ ನಾಯಕ ರಾಜೇಂದ್ರ. ತೆಲುಗು ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರ ಮಾಡಿ ಅನುಭವ ಹೊಂದಿರುವ ರಾಜೇಂದ್ರ ಚಿತ್ರ ವಿತರಣೆಯಲ್ಲಿ ಅಪಾರ ಅನುಭವ ಪಡೆದಿದ್ದಾರೆ. ಈ ಚಿತ್ರದ ನಿರ್ಮಾಪಕರಲ್ಲಿ ಇವರೂ ಒಬ್ಬರು.

    ರಾಜೇಂದ್ರ ಪ್ರಕಾರ ಈ ಚಿತ್ರಕ್ಕೆ ಅವರೊಬ್ಬರೇ ನಾಯಕರಲ್ಲ. ಹೊನ್ನವಳ್ಳಿ, ದೊಡ್ಡಣ್ಣ ಇತ್ಯಾದಿ ಹತ್ತು ಜನರೂ ಯಾವುದೇ ನಾಯಕರಿಗೆ ಕಡಿಮೆ ಇಲ್ಲವಂತೆ. ಈ ಎಲ್ಲರೂ ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತಾರಂತೆ. ಅಂದಹಾಗೆ ಚಿತ್ರದಲ್ಲಿ ಇಬ್ಬರು ಹೀರೋಯಿನ್‌ಗಳೂ ಇದ್ದಾರೆ. ಈ ಇಬ್ಬರ ನಡುವೆ ನಾಯಕ ರಾಜೇಂದ್ರ ವಿಲಿವಿಲಿ ಒದ್ದಾಡುತ್ತಾನೆ. ನರಳುತ್ತಾನೆ.

    ರಾಜೇಂದ್ರನ ಕಾಡುವ ನಾಯಕಿಯರು ಯಾರು ಗೊತ್ತೆ. 1. ರುಚಿತಾ ಪ್ರಸಾದ್‌ 2. ಸ್ವರ್ಣ. ಚಿತ್ರದ ನಿರ್ದೇಶಕ ದಾಸ್‌. ಈಗಾಗಲೇ ಚಿತ್ರದ ಚಿತ್ರೀಕರಣ ಬಹುಪಾಲು ಮುಕ್ತಾಯವಾಗಿದೆ. ಒಂದು ತಿಂಗಳ ಅವಧಿಯಲ್ಲೇ ಚಿತ್ರವನ್ನು ರಜತ ಪರದೆಯ ಮೇಲೆ ಪರೀಕ್ಷೆಗೆ ಒಡ್ಡುವ ಪ್ರಯತ್ನಗಳು ಸಾಗಿವೆ. ಚಿತ್ರ ನಗಿಸುತ್ತದೋ, ನಗೆಪಾಟಲಿಗೆ ಈಡಾಗುತ್ತದೋ ಕಾದು ನೋಡೋಣ.

    English summary
    11 Heroes in one kannada film
    Sunday, July 7, 2013, 15:16
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X