twitter
    For Quick Alerts
    ALLOW NOTIFICATIONS  
    For Daily Alerts

    ಸಿನಿಮಾ ಮತ್ತು ಧರ್ಮ-ಸಂಸ್ಕೃತಿ ಬಗ್ಗೆ ಕಲ್ಲಡ್ಕ ಪ್ರಭಾಕರ್ ಭಟ್ಟ ಮಾತು

    |

    ಧರ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳುವಲ್ಲಿ ಸಿನಿಮಾಗಳ ಪಾತ್ರ ಮಹತ್ತರವಾದದ್ದು, ಅದಲ್ಲದೇ ಚಲನಚಿತ್ರಗಳು ಧರ್ಮ ಸತ್ವವನ್ನು ಉಳಿಸಿಕೊಳ್ಳುವಂತ ಕಾರ್ಯವನ್ನು ಬೆಳೆಸಿಕೊಳ್ಳಬೇಕಾಗಿದೆ ಎಂದು ಪುತ್ತೂರು ಶ್ರೀ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.

    ಉಪ್ಪಿನಂಗಡಿಯ ಮಹಾಕಾಳಿ ಮೆಚ್ಚಿ ಜಾತ್ರೆಯ ಸಂದರ್ಭದಲ್ಲಿ ದೇವಸ್ಥಾನದ ಸಭಾಂಗಣದಲ್ಲಿ ನಡೆದ ವಿಕ್ರಾಂತ್ ತುಳು ಸಿನಿಮಾದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಆಡಿಯೋ ಬಿಡುಗಡೆ ಮಾಡಿ ಮಾತನಾಡಿದ ಅವರು, ಧರ್ಮದ ಪ್ರತಿಷ್ಠಾಪನೆಗಾಗಿ ವಿಕ್ರಾಂತ್ ಸಿನಿಮಾವು ಮಾದರಿಯಾಗಲೀ ಎಂದರು.

    ಮಣ್ಣನ ಸತ್ವ, ತತ್ವ ಏನು ಎಂದು ಬಿಂಬಿಸುವ ತುಳು ಚಲನಚಿತ್ರ, ಇಂದಿನ ವಿಕಾರ ಪರಿಸ್ಥಿತಿಯಲ್ಲಿ ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತ ಈ ತುಳು ಚಲನಚಿತ್ರವನ್ನು ರಚಿಸಿದ ತಂಡವನ್ನು ಅಭಿನಂದಿಸುವುದಾಗಿ ಹೇಳಿದ ಅವರು, ಇಂದಿನ ಆಧುನಿಕ ಯುಗದಲ್ಲಿ ಕುಟುಂಬ ಸಮೇತ ನೋಡುವಂತಹ ಸಿನಿಮಾ ಇದಾಗಲಿ, ಯಶಸ್ಸು ಕಾಣಲಿ ಎಂದು ಅವರು ಶುಭಹಾರೈಸಿದರು.

     Kalladka Prabhakar Bhat About Movie, Religion And Hindu Culture

    ಈ ಸಂದರ್ಭದಲ್ಲಿ ಚಲಚಿತ್ರ ನಿರ್ಮಾಪಕರಾದ ರಾಜೇಂದ್ರ ಯಶು ಬೆದ್ರೋಡಿ, ಚಲನಚಿತ್ರ ನಿರ್ದೇಶಕಾದ ನವೀನ್ ಮಾರ್ಲ ಕೊಡಂಗೆ, ಸಾಹಿತ್ಯ , ಸಂಗೀತ ನಿರ್ದೇಶಕ ಭಾಸ್ಕರ್ ರಾವ್ ಬಿಸಿ ರೋಡ್, ಉದ್ಯಮಿಗಳಾದ ರವಿ ಕಕ್ಕೆಪದವು ಹಾಗೂ ಸಹಸ್ರಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಸಹಕಾರದೊಂದಿಗೆ ಆಡಿಯೋ ಕಾರ್ಯಕ್ರಮ ನೆರವೇರಿತು.

    Recommended Video

    Ganesh first time playing a blind person character in Suni Directional Sakath Movie.

    ಏಪ್ರಿಲ್ 23ಕ್ಕೆ ಚಲನಚಿತ್ರ ಬಿಡುಗಡೆಯಾಗಲಿದ್ದು, ಸಿನಿಮಾವನ್ನು ಚಿತ್ರಮಂದಿರಗಳಲ್ಲಿಯೇ ವೀಕ್ಷಿಸುವಂತೆ ಚಿತ್ರ ತಂಡವು ಮನವಿ ಮಾಡಿಕೊಂಡಿತು.

    English summary
    Kalladka Prabhakar Bhat said Movie's should represent Hindu culture and they should protect our Religion.
    Tuesday, March 23, 2021, 11:16
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X