For Quick Alerts
  ALLOW NOTIFICATIONS  
  For Daily Alerts

  ತೆರೆಮೇಲೆ ಬರುತ್ತಿದೆ ಮಿನುಗುತಾರೆ ಕಲ್ಪನಾ ಭೂತ

  |

  ಕನ್ನಡ ಚಿತ್ರರಂಗ ಕಂಡ ಅದ್ಭುತ ನಟಿ ಮಿನುಗುತಾರೆ ಕಲ್ಪನಾ. ಚಿತ್ರರಂಗದಲ್ಲಿ ಪ್ರಕಾಶಮಾನವಾಗಿ ಮಿನುಗಿ ಮರೆಯಾದರು ಕಲ್ಪನಾ ನೆನಪು ಸದಾ ಹಸಿರಾಗೆ ಇದೆ. ಆತ್ಮಹತ್ಯೆ ಮಾಡಿಕೊಂಡು ದುರಂತ ಅಂತ್ಯ ಕಂಡ ಕಲ್ಪನಾ ಅವರ ಆತ್ಮಕ್ಕೆ ಇನ್ನು ಮುಕ್ತಿ ಸಿಕ್ಕಂತೆ ಕಾಣುತ್ತಿಲ್ಲ.

  ಕಲ್ಪನಾ ಇಹಲೋಕ ತ್ಯಜಿಸಿ 40 ವರ್ಷಗಳೆ ಆಗಿವೆ. ಆದ್ರೆ ಅವರು ಸಾವನ್ನಪ್ಪಿದ ಗೋಟೂರು ಐಬಿಯಲ್ಲಿ ಇಂದಿಗೂ ಅಮಾವಾಸ್ಯೆ-ಹುಣ್ಣಿಮೆ ಬಂತೆಂದ್ರೆ ನಟಿ ಪ್ರೇತಾತ್ಮ ಸುಳಿದಾಡುತ್ತಂತೆ. ಕಲ್ಪನಾ ಧ್ವನಿಯನ್ನ ಅಲ್ಲಿನ ಸ್ಥಳೀಯರು ಕೇಳಿ ಬೆಚ್ಚಿಬಿದ್ದಿದ್ದಾರಂತೆ. ಗೆಜ್ಜೆ ಸಪ್ಪಳ ಕೇಳಿ ಸ್ಥಳೀಯ ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರಂತೆ.

  ಮಿನುಗುತಾರೆ ಕಲ್ಪನಾ ಪ್ರೇತಾತ್ಮ! ವದಂತಿಯೋ..ವಾಸ್ತವವೋ? ಮಿನುಗುತಾರೆ ಕಲ್ಪನಾ ಪ್ರೇತಾತ್ಮ! ವದಂತಿಯೋ..ವಾಸ್ತವವೋ?

  ಹೀಗಂತ ಸುದ್ದಿಗಳು ಅನೇಕ ವರ್ಷಗಳಿಂದ ಹರಿದಾಡುತ್ತಲೆ ಇದೆ. ಕಲ್ಪನಾ ಭೂತದ ವಿಚಾರವಾಗಿ ಸ್ಯಾಂಡಲ್ ವುಡ್ ನಲ್ಲಿ ಸಿನಿಮಾವೊಂದು ತಯಾರಾಗುತ್ತಿದೆ. ಕಲ್ಪನಾ ಸಾವಿನ ನಂತರ ಆ ಊರಿನ ಸುತ್ತಮುತ್ತಿಲನ ಜನಕ್ಕೆ ಆದ ಅನುಭವವನ್ನು ಇಟ್ಟುಕೊಂಡೆ ಸಿನಿಮಾ ಮಾಡುತ್ತಿದ್ದಾರೆ ಐಟಿ ಉದ್ಯೋಗಿಗಳು.

  ಈ ಚಿತ್ರಕ್ಕೆ 'ಕಲ್ಪನಾ ನಿವಾಸ' ಎಂದು ಟೈಟಲ್ ಇಡಲಾಗಿದೆ. ವಿಶೇಷ ಅಂದ್ರೆ ಈ ಚಿತ್ರದಲ್ಲಿ ಕಲ್ಪನ ಅವರ ಬಗ್ಗೆ ಯಾವುದೆ ವಿಚಾರವನ್ನು ತೋರಿಸುವುದಿಲ್ಲವಂತೆ. ಅವರ ಸಾವಿನ ನಂತರ ಆ ಊರಿನಲ್ಲಿ ಹರಿದಾಡುತ್ತಿರುವ ಕಲ್ಪನ ಭೂತದ ಬಗ್ಗೆ ಸಿನಿಮಾ ಇರಲಿದೆಯಂತೆ.

  ಅಂದ್ಹಾಗೆ ಚಿತ್ರಕ್ಕೆ ವಿಜಯ್ ರಾಮ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅಶೋಕ್ ಭಾರದ್ವಜ್ ನಿರ್ಮಾಣ ಮಾಡುತ್ತಿದ್ದಾರೆ. ವೇದಾ ಮತ್ತು ಆಶಿಶ್ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸಾಕಷ್ಟು ಕುತೂಹಲ ಮೂಡಿಸಿರುವ ಕಲ್ಪನಾ ನಿವಾಸ ಹೇಗಿರಲಿದೆ ಎನ್ನುವುದು ಸಧ್ಯದಲ್ಲೇ ಗೊತ್ತಾಗಲಿದೆ.

  English summary
  Kalpana Nivasa movie is starting in sandalwood. based on the ghost of the Late actress Kalpana. Group of IT professionals have decided to do a movie which is titled as Kalpana Nivasa.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X