For Quick Alerts
  ALLOW NOTIFICATIONS  
  For Daily Alerts

  'ಕುಸ್ತಿ' ಆಡಿಸಲು ಬಂದ ಕಲ್ಯಾಣಿ ಜಯಮ್ಮ

  By Pavithra
  |
  ಕುಸ್ತಿ ಆಡಿಸಲು ಬಂದ ಜಯಮ್ಮ ಕಲ್ಯಾಣಿ..! | Filmibeat Kannada

  'ಜಯಮ್ಮನ ಮಗ' ಸಿನಿಮಾ ಮೂಲಕ ಮನೆ ಮಾತಾಗಿದ್ದ ನಟಿ ಕಲ್ಯಾಣಿ ಮತ್ತೆ ಬೆಳ್ಳಿ ಪರದೆ ಮೇಲೆ ಕಾಣಿಸಿಕೊಳ್ಳಲು ಸಿದ್ದರಾಗಿದ್ದಾರೆ. ವಿಶೇಷ ಎಂದರೆ ಕಲ್ಯಾಣಿ ಮತ್ತೆ ದುನಿಯಾ ವಿಜಿ ಅವರ ಸಿನಿಮಾ ಮೂಲಕವೇ ಸ್ಯಾಂಡಲ್ ವುಡ್ ನಲ್ಲಿ ಬ್ಯುಸಿ ಆಗಲಿದ್ದಾರೆ.

  ಅತ್ಯುತ್ತಮ ಅಭಿನಯದ ಮೂಲಕ ರಾಜ್ಯಪ್ರಶಸ್ತಿ ಪಡೆದುಕೊಂಡಿದ್ದ ಕಲ್ಯಾಣಿ 'ಜಯಮ್ಮನ ಮಗ' ಚಿತ್ರದ ನಂತರ ಯಾವುದೇ ಸಿನಿಮಾಗಳನ್ನು ಒಪ್ಪಿಕೊಂಡಿರಲಿಲ್ಲ. ಫ್ಯಾಮಿಲಿ ಕಡೆ ಹೆಚ್ಚು ಗಮನ ಕೊಡಬೇಕು ಎನ್ನುವ ಕಾರಣದಿಂದ ಕಲ್ಯಾಣಿ ಯಾವುದೇ ಸಿನಿಮಾದಲ್ಲಿಯೂ ಕಾಣಿಸಿಕೊಂಡಿರಲಿಲ್ಲ.

  ಚಿನ್ನದ ಪದಕ ಗೆದ್ದ ಹಿಮಾದಾಸ್ ಗೆ ಶುಭಕೋರಿದ ಶ್ರೀಮುರಳಿ-ದುನಿಯಾ ವಿಜಿಚಿನ್ನದ ಪದಕ ಗೆದ್ದ ಹಿಮಾದಾಸ್ ಗೆ ಶುಭಕೋರಿದ ಶ್ರೀಮುರಳಿ-ದುನಿಯಾ ವಿಜಿ

  ಸದ್ಯ ದುನಿಯಾ ವಿಜಯ್‌ ನಿರ್ಮಾಣದ ಜೊತೆಯಲ್ಲಿ ಅಭಿನಯವನ್ನೂ ಮಾಡುತ್ತಿರುವ 'ಕುಸ್ತಿ' ಚಿತ್ರದಲ್ಲಿಯೂ ತಾಯಿ ಪಾತ್ರದಲ್ಲಿ ಅಭಿನಯಿಸಲು ಕಲ್ಯಾಣಿ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಸಿನಿಮಾದಲ್ಲಿ ದುನಿಯಾ ವಿಜಯ್ ಹಾಗೂ ವಿಜಿ ಅವರ ಪುತ್ರ ಸಾಮ್ರಾಟ್ ಅವರಿಗೂ ಕಲ್ಯಾಣಿ ಅವರೇ ತಾಯಿ.

   Kalyani will be seen as a mother in Kannada Kusthi film

  ರಘು ಶಿವಮೊಗ್ಗ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು ಈ ಚಿತ್ರದ ಮೂಲಕ ದುನಿಯಾ ವಿಜಯ್ ಅವರ ಪುತ್ರ ಕನ್ನಡ ಸಿನಿಮಾರಂಗಕ್ಕೆ ಕಾಲಿಡುತ್ತಿದ್ದಾರೆ. ಈಗಾಗಲೇ ಇದಕ್ಕೆ ಬೇಕಿರುವ ತಯಾರಿಗಳನ್ನು ಮಾಡಿಕೊಂಡಿದ್ದು 'ಟಗರು' ಚಿತ್ರ ಖ್ಯಾತಿಯ ಮಾಸ್ತಿ ಸಿನಿಮಾಗೆ ಸಂಭಾಷಣೆ ಬರೆಯುತ್ತಿದ್ದಾರೆ.

  English summary
  Actress Kalyani will be seen as a mother in Kannada 'Kusthi' film, Duniya viji is a acting and producing 'Kusthi' film, Raghu Shimoga is directing the film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X