ಸ್ಯಾಂಡಲ್‌ವುಡ್‌ಗೆ ಜಕ್ಕನಕ ಜಕ್ಕಣ್ಣ ಬಂದ ನೋಡಣ್ಣ
ಸ್ಯಾಂಡಲ್‌ವುಡ್‌ಗೆ ಮತ್ತೊಬ್ಬ ಯುವ ತಾರೆಯ ಆಗಮನವಾಗಿದೆ. 'ಜಕ್ಕಣ್ಣ'ನಾಗಿ ಜಕ್ಕನಕ ನಕ್ಕನಕ ಎಂದು ಕಲ್ಯಾಣ್ ಕುಮಾರ್ ಅವರ ಮೊಮ್ಮಗ ಯುವರಾಜ್ ಕಲ್ಯಾಣ್ ಕುಮಾರ್ ಪದಾರ್ಪಣೆ ಮಾಡಿದ್ದಾರೆ.
ವಿಶೇಷ ಎಂದರೆ ಕನ್ನಡದ ಮೊದಲ ವರ್ಣಚಿತ್ರ 'ಅಮರಶಿಲ್ಪಿ ಜಕಣಾಚಾರಿ' ಚಿತ್ರದಲ್ಲಿ ಜಕ್ಕಣ್ಣನಾಗಿ ಕಲ್ಯಾಣ್ ಕುಮಾರ್ ಅಮೋಘ ಅಭಿನಯ ನೀಡಿದ್ದರು. ಈಗ ಅವರು ಪೋಷಿಸಿದ್ದ ಪಾತ್ರದ ಹೆಸರನ್ನೇ ಯುವರಾಜ್ ಚಿತ್ರಕ್ಕಿಡಲಾಗಿದೆ. ಆದರೆ ಈ ಚಿತ್ರ ಐತಿಹಾಸಿಕ ಚಿತ್ರವಲ್ಲ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್.
ಕರ್ನಾಟಕದ ಸಂಸ್ಕೃತಿ ಹಾಗೂ ಕಲೆಗಳ ಬಗೆಗೂ ಕೊಂಚ ಬೆಳಕು ಚೆಲ್ಲಲಿದೆಯಂತೆ. ಅಜ್ಜನ ಹಾದಿಯಲ್ಲೇ ಹೆಜ್ಜೆ ಹಾಕಬೇಕೆಂಬ ಬಯಕೆ ಯುವರಾಜ್‍ಗೆ ಇದೆಯಂತೆ. ಅವರಷ್ಟು ಎತ್ತರಕ್ಕೆ ಬೆಳೆಯಬೇಕು ಎಂಬುದು ಅವರ ಮತ್ತೊಂದು ಆಸೆ. (ಒನ್‌ಇಂಡಿಯಾ ಕನ್ನಡ)
More from Filmibeat
English summary
Legendary Kannada actor Kalyankumar's grandsonYuvraj Kalyankumar is all set to make his Kannada debut with suspense thriller Jakkana. Interestingly Jakkana is character played by Kalyankumar in his movie Amarashilpi Jakanachari


Click it and Unblock the Notifications











