For Quick Alerts
  ALLOW NOTIFICATIONS  
  For Daily Alerts

  ಸಿನಿಮಾಟೊಗ್ರಫಿ ಕಾಯ್ದೆ ತಿದ್ದುಪಡಿಗೆ ಸಿನಿಮಾ ಮಂದಿ ಒಕ್ಕೂರಲ ವಿರೋಧ

  |

  ಕಾನೂನು ಮತ್ತು ನ್ಯಾಯ ಸಚಿವಾಲಯ ಇತ್ತೀಚೆಗಷ್ಟೆ 'ಫಿಲಂ ಸರ್ಟಿಫಿಕೇಷನ್ ಅಪಿಯಲೇಟ್ ಟ್ರಿಬ್ಯುನಲ್' (FCAT) ಅನ್ನು ಯಾವುದೇ ಚರ್ಚೆ ಇಲ್ಲದೆ ರದ್ದು ಮಾಡಿದೆ. ಇದಕ್ಕೆ ಭಾರತೀಯ ಚಿತ್ರರಂಗದ ಮಂದಿ ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೆ ಅದಕ್ಕಿಂತಲೂ ದೊಡ್ಡ ಆಘಾತವೊಂದು ಸಿನಿಮಾ ಮಂದಿಯ ಮೇಲೆ ಬಂದೆರಗಿದೆ.

  ಸಿನಿಮಾಟೊಗ್ರಫಿ ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದ್ದು, ಹೊಸ ಕಾಯ್ದೆಯನ್ವಯ ಸರ್ಕಾರವೇ ಪರೋಕ್ಷವಾಗಿ ಸಿನಿಮಾಗಳ ಸೆನ್ಸಾರ್ ನಿರ್ಣಯ ಮಾಡಬಹುದಾದ ಹಕ್ಕು ಪಡೆದುಕೊಳ್ಳಲಿದೆ. ಸಿನಿಮಾಟೊಗ್ರಫಿ ಕಾಯ್ದೆಗೆ ತಿದ್ದುಪಡಿಯು ನಿರ್ದೇಶಕನ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರಲಿದೆ ಎಂದು ಆರೋಪಿಸಿ ಭಾರತೀಯ ಸಿನಿರಂಗದ ಹಲವು ಪ್ರಮುಖರು ಒಕ್ಕೂರಲಾಗಿ ಕಾಯ್ದೆಯ ವಿರುದ್ಧ ದನಿ ಎತ್ತಿದ್ದಾರೆ.

  ಹಿಂದಿ ಸಿನಿಮಾರಂಗದ ನಿರ್ದೇಶಕರಾದ ಫರ್ಹಾನ್ ಅಖ್ತರ್, ಅನುರಾಗ್ ಕಶ್ಯಪ್, ಶಬಾನಾ ಅಜ್ಮಿ, ಹನ್ಸಲ್ ಮೆಹ್ತಾ, ದಿಬಾಕರ್ ಬ್ಯಾನರ್ಜಿ, ಜೋಯಾ ಅಖ್ತರ್ ಇನ್ನೂ ಹಲವರು ಸಿನಿಮಾಟೊಗ್ರಫಿ ಕಾಯ್ದೆ 2021 ತಿದ್ದುಪಡಿ ವಿರುದ್ಧ ಬಹಿರಂಗ ಪತ್ರ ಬರೆದಿದ್ದಾರೆ.

  ದಕ್ಷಿಣ ಭಾರತ ಚಿತ್ರರಂಗದಲ್ಲಿಯೂ ಈ ಕಾಯ್ದೆಗೆ ವಿರೋಧ ವ್ಯಕ್ತವಾಗಿದ್ದು, ಟ್ವೀಟ್ ಮಾಡಿರುವ ನಟ ಕಮಲ್ ಹಾಸನ್, ''ಸಿನಿಮಾ, ಮಾಧ್ಯಮ, ಸಾಹಿತ್ಯ ಭಾರತದ ಮಾತನಾಡದ, ಕೇಳಿಸಿಕೊಳ್ಳದ, ನೋಡದ 'ಮೂರು ಕೋತಿ'ಗಳಾಗುವುದು ಬೇಡ. ಪ್ರಜಾಪ್ರಭುತ್ವವನ್ನು ಧಮನ ಮಾಡುವ ನಿರ್ಣಯಗಳ ವಿರುದ್ಧ ನಾವು ಒಗ್ಗೂಡಬೇಕಿದೆ. ಸ್ವಾತಂತ್ರ್ಯಕ್ಕಾಗಿ ನಿಮ್ಮ ದನಿ ಎತ್ತಿ'' ಎಂದಿದ್ದಾರೆ ಕಮಲ್ ಹಾಸನ್.

  ತಿದ್ದುಪಡಿಯು ಅಂಗೀಕೃತಗೊಂಡರೆ ಸಿಬಿಎಫ್‌ಸಿ ನೀಡಿದ ಪ್ರಮಾಣಪತ್ರವನ್ನು ಪ್ರಶ್ನಿಸುವ, ಪುನರ್‌ ಪರಿಶೀಲಿಸುವಂತೆ ಸೂಚಿಸುವ, ಬದಲಾಯಿಸುವಂತೆ ಸೂಚಿಸುವ ಅಧಿಕಾರವನ್ನು ಕೇಂದ್ರ ಸರ್ಕಾರ ಪಡೆದುಕೊಳ್ಳಲಿದೆ.

  ಸಂಚಾರಿ ವಿಜಯ್ ಗೆ ದೊಡ್ಡ ಗೌರವ ಸಲ್ಲಿಸಿದ ಅಮೇರಿಕ ಚಿತ್ರಮಂದಿರ | Filmibeat Kannada

  ಇದು ಮಾತ್ರವೇ ಅಲ್ಲದೆ ಇನ್ನೂ ಹಲವಾರು ಹೊಸ ನಿಯಮಗಳನ್ನು ಸೇರಿಸಲಾಗಿದ್ದು, 'ಯು', 'ಎ', 'ಯು/ಎ' ಪ್ರಮಾಣ ಪತ್ರದ ಜೊತೆಗೆ ಇನ್ನೂ ಹಲವು ಮಾದರಿಯ ಪ್ರಮಾಣ ಪತ್ರ ವಿತರಣೆ. ಸಿನಿಮಾ ಮರು ಬಿಡುಗಡೆಗೆ ಮರು ಸೆನ್ಸಾರ್ ಹೀಗೆ ಹಲವು ನಿಯಮಗಳನ್ನು ತಿದ್ದುಪಡಿಯಲ್ಲಿ ಸೂಚಿಸಲಾಗಿದೆ.

  English summary
  Actor Kamal Haasan, Anurag Kashyap, Farhan Akhtar and many others oppose Cinematography Act amendment 2021.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X