ವಿವಾದದ ನಡುವೆ ಶಿವರಾಜ್ ಕುಮಾರ್ ಮಗಳ ಚಿತ್ರಕ್ಕೆ ಶುಭ ಹಾರೈಸಿದ ಕಮಲ್ ಹಾಸನ್..!

ಒಂದು ಕಡೆ ಕಮಲ್ ಹಾಸನ್ ಕ್ಷಮೆ ಕೇಳುವ ಮಾತೇ ಇಲ್ಲ ಎಂದು ಹೇಳಿದ್ದಾರೆ. ಮತ್ತೊಂದೆಡೆ ಕಮಲ್ ಹಾಸನ್ ಕ್ಷಮೆ ಕೇಳುವವರೆಗೆ ಚಿತ್ರ ಬಿಡುಗಡೆ ಅವಕಾಶ ನೀಡುವುದಿಲ್ಲ ಎಂದು ಕನ್ನಡಿಗರು ಗುಡುಗಿದ್ದಾರೆ. ಇದರ ನಡುವೆ ಚಿತ್ರ ಬಿಡುಗಡೆಯಾಗಿಯೇ ಆಗುತ್ತೆ ಎನ್ನುವ ವಿಶ್ವಾಸದಲ್ಲಿ ಕೆಲ ಚಿತ್ರಮಂದಿರದ ಮಾಲೀಕರು ಹಣ ದೋಚಲು ಪ್ಲ್ಯಾನ್ ಮಾಡಿಕೊಂಡು ಕುಳಿತುಕೊಂಡಿದ್ದಾರೆ. ಇನ್ನು ಕಮಲ್ ಹಾಸನ್

ಅವರ ಹೇಳಿಕೆಯಿಂದ ಅಡ್ಡಕತ್ತರಿಯಲ್ಲಿ ಶಿವಣ್ಣ ಸಿಲುಕಿದ್ದಾರೆ. ಅತ್ತ ಕಮಲ್ ಹಾಸನ್ ಅವರ ವಿರುದ್ಧ ಆಕ್ರೋಶ ಹೊರಹಾಕಲಾಗದೇ, ಇತ್ತ ತಮ್ಮ ಕನ್ನಡಾಭಿಮಾನ ಪ್ರಶ್ನೆ ಮಾಡುತ್ತಿರುವವರಿಗೆ ಉತ್ತರವನ್ನು ಕೊಡಲು ಸಾಧ್ಯವಾಗದೇ ಸಂದಿಗ್ದ ಪರಿಸ್ಥಿತಿಯಲ್ಲಿದ್ದಾರೆ. ಹೀಗಿರುವಾಗ ಕಮಲ್ ಹಾಸನ್ ಇದೀಗ ಶಿವರಾಜ್ ಕುಮಾರ್ ಅವರ ಮಗಳು ನಿವೇದಿತಾಗೆ ಆಲ್ ದಿ ಬೆಸ್ಟ್ ಹೇಳಿದ್ದಾರೆ.

Kamal Haasan Backs Niveditha Shivarajkumar s Firefly Amid Kannada Tamil Language Row

ಹೌದು, ಕಳೆದ ತಿಂಗಳು ಶಿವಣ್ಣ ಮಗಳು ನಿವೇದಿತಾ ನಿರ್ಮಾಣದ ಚೊಚ್ಚಲ ಚಿತ್ರ ಫೈರ್ ಫ್ಲೈ ಕಳೆದ ತಿಂಗಳು ಬಿಡುಗಡೆಯಾಗಿತ್ತು. ವಂಶಿ ನಾಯಕನಾಗಿ ಅಭಿನಯಿಸುವುದಲ್ಲದೇ ಈ ಚಿತ್ರದ ನಿರ್ದೇಶನವನ್ನು ಮಾಡಿದ್ದರು.

ಅಚ್ಯುತ್ ಕುಮಾರ್, ಸುಧಾರಾಣಿ, ರಚನಾ ಇಂದರ್, ಮೂಗು ಸುರೇಶ್, ಆನಂದ್ ನೀನಾಸಂ ಹೀಗೆ ಹಲವರು ಈ ಚಿತ್ರದಲ್ಲಿದ್ದರು. ಇಷ್ಟೇ ಯಾಕೆ.. ಮಗಳ ಮೊದಲ ಪ್ರಯತ್ನಕ್ಕೆ ಶಿವರಾಜ್ ಕುಮಾರ್ ಕೂಡ ಜೊತೆಯಾಗಿದ್ದರು. ಚಿತ್ರದಲ್ಲಿ ಅತಿಥಿ ಪಾತ್ರವನ್ನು ನಿರ್ವಹಿಸಿದ್ದರು.

ಇಂತಹ ಫೈರ್ ಫ್ಲೈ ಚಿತ್ರ ಸದ್ಯ ಅಮೆಜಾನ್ ಪ್ರೈಂನಲ್ಲಿ ಪ್ರಸಾರವಾಗುತ್ತಿದೆ. ಹಲವರ ಗಮನ ಸೆಳೆಯುತ್ತಿದೆ. ಈ ಚಿತ್ರದ ಪೋಸ್ಟರ್ ನ ಈಗ ಕಮಲ್ ಹಾಸನ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. 'ಫೈರ್ ಫ್ಲೈ ಸಿನಿಮಾಕ್ಕೆ ಆಲ್ ದ ವೆರಿ ಬೆಸ್ಟ್' ಎಂದು ಶುಭಾಶಯ ಕೋರಿದ್ದಾರೆ. ಈ ಮೂಲಕ ತಮ್ಮಿಂದ ಸಂಕಷ್ಟಕ್ಕೀಡಾದ ಶಿವರಾಜ್ ಕುಮಾರ್ ಅವರ ಮೇಲೆ ತಮಗೆ ಇರುವ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

ಕಮಲ್ ಹಾಸನ್ ಅವರ ಈ ನಡೆಗೆ ನಿವೇದಿತಾ ಶಿವರಾಜ್ ಕುಮಾರ್ ಸಹಜವಾಗಿಯೇ ಖುಷಿಯಾಗಿದ್ದಾರೆ. ತಮ್ಮ ಖುಷಿಯನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಪ್ರೋತ್ಸಾಹಿಸಿದ ಕಮಲ್ ಹಾಸನ್ ಅವರಿಗೆ ಧನ್ಯವಾದವನ್ನು ಹೇಳಿದ್ದಾರೆ.

ಇನ್ನುಳಿದಂತೆ ವಂಶಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದ ಈ ಚಿತ್ರಕ್ಕೆ ಚರಣ್ ರಾಜ್ ಸಂಗೀತ ಇದೆ. ಅಭಿಲಾಷ್ ಕಳತ್ತಿ ಛಾಯಾಗ್ರಹಣ ಇದೆ. ಶ್ರೀ ಮುತ್ತು ಸಿನಿ ಸರ್ವಿಸಸ್‌ ಬ್ಯಾನರ್ ಅಡಿ ನಿವೇದಿತಾ ಶಿವರಾಜ್ ಕುಮಾರ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಇನ್ನು ಕಮಲ್ ಹಾಸನ್ ವಿಚಾರಕ್ಕೆ ಬರುವುದಾದರೆ, ಸದ್ಯ ಕಮಲ್ ಹಾಸನ್ ಕನ್ನಡಿಗರ ಬಳಿ ಕ್ಷಮೆ ಕೇಳುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಕನ್ನಡದ ಅನೇಕ ಕಲಾವಿದರು ಕೂಡ ಕ್ಷಮೆ ಕೇಳಿ ಕಮಲ್ ಎಂದರು ಕೂಡ ಕಮಲ್ ಮಾತ್ರ ಕ್ಯಾರೇ ಎನ್ನುತ್ತಿಲ್ಲ. ಬದಲಿಗೆ ನಾನು ತಪ್ಪು ಮಾಡಿಲ್ಲ, ನಾನು ಹೆದರಲ್ಲ, ಬೆದರಲ್ಲ, ಕ್ಷಮೆ ಯಾವುದೇ ಕಾರಣಕ್ಕೂ ಕೇಳುವುದಿಲ್ಲ ಎಂದು ಮೊಂಡ ವಾದವನ್ನು ಮಾಡುತ್ತಿದ್ದಾರೆ.

More from Filmibeat

English summary
Amid a Kannada–Tamil language row, Kamal Haasan shows support for Firefly, starring Niveditha Shivarajkumar, via Instagram.
Read more about: kamal hasan filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X