twitter
    For Quick Alerts
    ALLOW NOTIFICATIONS  
    For Daily Alerts

    22 ವರ್ಷದ ಹಿಂದೆ ವಿಷ್ಣು ಜೊತೆ ಕಮಲ್ ಮಾಡಬೇಕಿದ್ದ ಚಿತ್ರಕ್ಕೆ ಮತ್ತೆ ಮರುಜೀವ.!

    |

    ಎಲ್ಲ ಅಂದುಕೊಂಡಂತೆ ಆಗಿದ್ದರೆ, ಕಮಲ್ ಹಾಸನ್ ಅಭಿನಯದಲ್ಲಿ ಐತಿಹಾಸಿಕ ಚಿತ್ರವೊಂದು ಸುಮಾರು 22 ವರ್ಷಗಳ ಹಿಂದೆಯೇ ಸಿದ್ಧವಾಗಿ ಬಿಡುಗಡೆಯಾಗಬೇಕಿತ್ತು. ಆದರೆ, ಸಿನಿಮಾ ಶುರುವಾಗಿ, ಕೆಲವು ದಿನ ಚಿತ್ರೀಕರಣ ಮಾಡಿ ನಿಂತು ಹೋಗಿದೆ.

    ಈ ಚಿತ್ರ ಮತ್ತೆ ಆರಂಭವಾಗಬಹುದು ಎಂಬ ಆಸೆ, ನಿರೀಕ್ಷೆ ಕಮಲ್ ಹಾಸನ್ ಅವರ ಅಭಿಮಾನಿಗಳಲ್ಲಿ ದೃಡವಾಗಿ ಕಾಡುತ್ತಿದೆ. ದಯವಿಟ್ಟು ಆ ಚಿತ್ರವನ್ನ ಮತ್ತೆ ಆರಂಭಿಸಿ ಎಂದು ಅಭಿಮಾನಿಗಳು ಬೇಡಿಕೆಯಿಟ್ಟಿದ್ದಾರೆ. ಈ ಚಿತ್ರದಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್ ಕೂಡ ನಟಿಸಬೇಕಿತ್ತು ಎಂಬುದು ಗಮನಾರ್ಹ.

    ಕಮಲ್-ಶಂಕರ್ ಜೋಡಿಯ 'ಇಂಡಿಯನ್-2' ನಿಂತು ಹೋಯ್ತಂತೆ.!ಕಮಲ್-ಶಂಕರ್ ಜೋಡಿಯ 'ಇಂಡಿಯನ್-2' ನಿಂತು ಹೋಯ್ತಂತೆ.!

    ಇದೀಗ, 22 ವರ್ಷದಿಂದ ನಿಂತುಹೋಗಿರುವ ಚಿತ್ರಕ್ಕೆ ಮರುಜೀವ ಸಿಗುವ ಸೂಚನೆ ಸಿಕ್ಕಿದೆ. ಅಷ್ಟಕ್ಕೂ, ಆ ಚಿತ್ರ ಯಾವುದು? ಈಗ ಆರಂಭವಾದರೇ ಅದರಲ್ಲಿ ಉಂಟಾಗಿರುವ ಬದಲಾವಣೆಗಳು ಏನು? ಮುಂದೆ ಓದಿ...

    ಐತಿಹಾಸಿಕ ಚಿತ್ರ 'ಮರುಧನಾಯಗಂ'

    ಐತಿಹಾಸಿಕ ಚಿತ್ರ 'ಮರುಧನಾಯಗಂ'

    18ನೇ ಶತಮಾನದಲ್ಲಿ ವಾರಿಯರ್ ಮೊಹಮ್ಮದ್ ಯೂಸೂಫ್ ಖಾನ್ ಅವರ ಜೀವನ ಆಧಾರಿತ ಕಥೆ ಹೊಂದಿದ್ದ 'ಮರುಧನಾಯಗಂ' ಚಿತ್ರ 1997ರಲ್ಲಿ ಸೆಟ್ಟೇರಿತ್ತು. 20ಕ್ಕೂ ಹೆಚ್ಚು ದಿನಗಳ ಕಾಲ ಶೂಟಿಂಗ್ ಕೂಡ ನಡೆದಿತ್ತು. ಆದರೆ, ಕಾರಣಾಂತರಗಳಿಂದ ಈ ಸಿನಿಮಾ ಅರ್ಧದಲ್ಲೆ ನಿಂತು ಹೋಯಿತು.

    ವಿಷ್ಣುವರ್ಧನ್ ನಟಿಸಬೇಕಿತ್ತು

    ವಿಷ್ಣುವರ್ಧನ್ ನಟಿಸಬೇಕಿತ್ತು

    'ಮರುಧನಾಯಗಂ' ಚಿತ್ರಕ್ಕೆ ಸಂಬಂಧಿಸಿದಂತೆ ಸಿಕ್ಕ ದಾಖಲೆಗಳ ಪ್ರಕಾರ, ಈ ಚಿತ್ರದಲ್ಲಿ ಕನ್ನಡದ ಸಾಹಸ ಸಿಂಹ ವಿಷ್ಣುವರ್ಧನ್ ಅವರು ಕೂಡ ಪ್ರಮುಖ ಪಾತ್ರದಲ್ಲಿ ನಟಿಸಬೇಕಿತ್ತು. ವಾಜೀದ್ ಖಾನ್ ಎಂಬ ಪಾತ್ರದಲ್ಲಿ ವಿಷ್ಣುದಾದಾ ಬಣ್ಣ ಹಚ್ಚಬೇಕಿತ್ತು. ಈ ಪ್ರಾಜೆಕ್ಟ್ ನಿಂತು ಹೋದ ಕಾರಣ, ಕಮಲ್ ಮತ್ತು ವಿಷ್ಣು ಕಾಂಬಿನೇಷನ್ ನೋಡುವಲ್ಲಿ ಪ್ರೇಕ್ಷಕರಿಗೆ ನಿರಾಸೆಯಾಯಿತು.

    19 ವರ್ಷದ ಬಳಿಕ ಒಂದಾದ ಕಮಲ್ ಹಾಸನ್-ಎಆರ್ ರೆಹಮಾನ್19 ವರ್ಷದ ಬಳಿಕ ಒಂದಾದ ಕಮಲ್ ಹಾಸನ್-ಎಆರ್ ರೆಹಮಾನ್

    ಮತ್ತೆ ಜೀವ ನೀಡಲು ಚಿಂತನೆ

    ಮತ್ತೆ ಜೀವ ನೀಡಲು ಚಿಂತನೆ

    ಈ ಸಿನಿಮಾ ನಿಂತು ಹೋಗಿ ಸುಮಾರು 22 ವರ್ಷ ಕಳೆದಿದೆ. ಆದರೂ ಈ ಪ್ರಾಜೆಕ್ಟ್ ಬಗೆಗಿನ ಕಾತುರ ಮಾತ್ರ ಕಮ್ಮಿಯಾಗಿಲ್ಲ. ಈಗಲೂ ಕಮಲ್ ಹಾಸನ್ ಈ ಸಿನಿಮಾ ಮಾಡಿದ್ರೆ, ಭಾರತೀಯ ಚಿತ್ರರಂಗದಲ್ಲಿ ಇತಿಹಾಸ ನಿರ್ಮಾಣವಾಗಬಹುದು ಎಂಬ ಲೆಕ್ಕಾಚಾರ ಇದೆ. ಬಹುಶಃ ಅದಕ್ಕಾಗಿಯೇ ಈ ಚಿತ್ರಕ್ಕೆ ಮತ್ತೆ ಜೀವ ನೀಡಲು ಚಿಂತಿಸಿದ್ದಾರೆ ಎನ್ನಲಾಗಿದೆ.

    ಕಮಲ್ ಹಾಸನ್ ಮತ್ತು ಶ್ರೀದೇವಿ 'ಅಣ್ಣ-ತಂಗಿ'.!ಕಮಲ್ ಹಾಸನ್ ಮತ್ತು ಶ್ರೀದೇವಿ 'ಅಣ್ಣ-ತಂಗಿ'.!

    ಕಮಲ್ ಬದಲು ವಿಕ್ರಮ್.!

    ಕಮಲ್ ಬದಲು ವಿಕ್ರಮ್.!

    ಕಮಲ್ ಹಾಸನ್ ನಿರ್ಮಾಣ ಮತ್ತು ನಿರ್ದೇಶನದಲ್ಲಿ ಈ ಸಿನಿಮಾ ಬರಬೇಕಿತ್ತು. ಜೊತೆಗೆ ಅವರೇ ನಟಿಸುತ್ತಿದ್ದರು. ಆದ್ರೀಗ, ಕಮಲ್ ಹಾಸನ್ ಬದಲಾಗಿ ತಮಿಳಿನ ಖ್ಯಾತ ನಟ ಚಿಯಾನ್ ವಿಕ್ರಮ್ ಅವರನ್ನ ನಾಯಕರನ್ನಾಗಿಸಿ ಈ ಸಿನಿಮಾ ಮಾಡಲು ಮುಂದಾಗಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಈ ಸಂಬಂದ ರಾಜ್ ಕಮಲ್ ಪ್ರೊಡಕ್ಷನ್ ವಿಕ್ರಂ ಜೊತೆ ಚರ್ಚಿಸಿದೆಯಂತೆ.

    'ಮಾಡಿದ ತಪ್ಪು ಅರಿವಾಯಿತು': ರಜನಿ, ಕಮಲ್ ಆ ತಪ್ಪು ಮಾಡುವುದು ಬೇಡ'ಮಾಡಿದ ತಪ್ಪು ಅರಿವಾಯಿತು': ರಜನಿ, ಕಮಲ್ ಆ ತಪ್ಪು ಮಾಡುವುದು ಬೇಡ

    ಸೂಪರ್ ಸ್ಟಾರ್ ಕಲಾವಿದರು ಬೇಕು

    ಸೂಪರ್ ಸ್ಟಾರ್ ಕಲಾವಿದರು ಬೇಕು

    22 ವರ್ಷದ ಹಿಂದಿನ ತಾರಾಬಳಗ ನೋಡಿದ್ರೆ ದೊಡ್ಡ ದೊಡ್ಡ ನಟರೇ ಇದ್ದರು. ವಿಷ್ಣುವರ್ಧನ್, ಅಂಬರೀಶ್ ಪುರಿ, ನಾಸೀರ್, ಸತ್ಯರಾಜ್, ಜೆಮಿನಿ ಗಣೇಶನ್, ಎಂಎನ್ ನಂಬಿಯಾರ್, ನಾಗೇಶ್ ಅಂತವರು ನಟಿಸುತ್ತಿದ್ದರು. ಇವರೆಲ್ಲ ಬಹುತೇಕರು ಈಗ ಬದುಕಿಲ್ಲ. ಹಾಗಾಗಿ, ಇಂದಿನ ಜನರೇಷನ್ ಗೆ ತಕ್ಕಂತೆ ಸ್ಟಾರ್ ಕಲಾವಿದರು ಈ ಚಿತ್ರಕ್ಕೆ ಬೇಕಾಗಿದ್ದಾರೆ. ವಿಕ್ರಂ ಮಾಡುವುದು ಪಕ್ಕಾ ಆದರೆ ಉಳಿದ ಪಾತ್ರಗಳಿಗೆ ಯಾರು ಆಯ್ಕೆಯಾಗಬಹುದು?

    English summary
    Kamal Haasan dream cinema marudhanayagam stopped at 1997. as per news, this mega movie will re-start with chiyaan vikram.
    Tuesday, October 29, 2019, 13:14
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X