For Quick Alerts
  ALLOW NOTIFICATIONS  
  For Daily Alerts

  ರಾಜಕೀಯ ಹಾಗೂ ಸ್ನೇಹ ಬೇರೆ ಬೇರೆ ಎಂದ ಬಳಿಕವೇ ರಜನಿ ಭೇಟಿ ಮಾಡಿದ ಕಮಲ್ ಹಾಸನ್!

  |

  ತಮಿಳು ಚಿತ್ರರಂಗದ ಇಬ್ಬರು ದಿಗ್ಗಜರೆಂದರೆ ಅದು ರಜನಿಕಾಂತ್ ಹಾಗೂ ಕಮಲ್ ಹಾಸನ್. ಇಬ್ಬರ ಸಿನಿಮಾ ಶೈಲಿ ಬೇರೆ. ಇಬ್ಬರ ರಾಜಕೀಯ ನಿಲುವು ಕೂಡ ಬೇರೆ. ಹೀಗಿದ್ದರೂ ರಜನಿಕಾಂತ್ ಹಾಗೂ ಕಮಲ್ ಹಾಸನ್ ಇಬ್ಬರೂ ಉತ್ತಮ ಸ್ನೇಹಿತರು ಎಂದು ಅವರೇ ಸಾಬೀತು ಮಾಡಿದ್ದಾರೆ.

  ತಮಿಳಿನ ಖ್ಯಾತ ನಿರ್ದೇಶಕ ದಿವಂಗತ ಕೆ ಬಾಲಚಂದರ್ ಈ ಇಬ್ಬರು ನಟರಿಗೂ ಗುರುಗಳು. ಇವರ ಗರಡಿಯಲ್ಲೇ ಅಭಿನಯವನ್ನು ಮೈಗೂಡಿಸಿಕೊಂಡಿದ್ದ ರಜನಿಕಾಂತ್ ಹಾಗೂ ಕಮಲ್ ಹಾಸನ್ ಇಬ್ಬರು ಭಾರತೀಯ ಚಿತ್ರರಂಗದ ಜನಪ್ರಿಯರ ನಟರಾಗಿ ಬೆಳೆದಿದ್ದಾರೆ. ಗುರು ಒಬ್ಬರೇ ಆಗಿದ್ದರೂ, ಇಬ್ಬರ ಸಿನಿಮಾ ಆಯ್ಕೆ ಬೇರೆ. ಸಿನಿಮಾ ಅಭಿರುಚಿ ಬೇರೆ. ಈ ಕಾರಣಕ್ಕೆ ಇಬ್ಬರು ಸೂಪರ್‌ಸ್ಟಾರ್‌ಗಳು ಚಿತ್ರರಂಗದಲ್ಲಿ ಪ್ರತ್ಯೇಕವಾಗಿ ನಿಲ್ಲುತ್ತಾರೆ.

  ಅಕ್ಷಯ್ ಕುಮಾರ್ vs ಕಮಲ್ ಹಾಸನ್: ಗೆಲವು ಯಾರಿಗೆ!ಅಕ್ಷಯ್ ಕುಮಾರ್ vs ಕಮಲ್ ಹಾಸನ್: ಗೆಲವು ಯಾರಿಗೆ!

  ಸದ್ಯ ಕಮಲ್ ಹಾಸನ್ ಅಭಿನಯದ ಸಿನಿಮಾ 'ವಿಕ್ರಮ್' ಬಿಡುಗಡೆಗೆ ಸಜ್ಜಾಗಿ ನಿಂತಿದೆ. ಈ ಬೆನ್ನಲ್ಲೇ ಕಮಲ್ ಹಾಸನ್ ಭರ್ಜರಿ ಪ್ರಚಾರ ಆರಂಭಿಸಿದ್ದಾರೆ. ಈ ವೇಳೆ ಕಮಲ್ ಹಾಸನ್ ತಮ್ಮ ಗೆಳೆಯ ರಜನಿಕಾಂತ್ ಬಗ್ಗೆ ಮನಬಿಚ್ಚಿ ಮಾತಾಡಿದ್ದರು. ಸ್ನೇಹಿತರಾಗಿದ್ದರೂ ಕೆಲವು ವಿಷಯಗಳಲ್ಲಿ ನಾವಿಬ್ಬರೂ ಭಿನ್ನ ಎಂದಿದ್ದರು. ರಾಜಕೀಯನೇ ಬೇರೆ, ಸ್ನೇಹನೇ ಬೇರೆ ಎಂದಿದ್ದರು. ಹೀಗೆ ಹೇಳಿಕೆ ಕೊಟ್ಟ ಕೆಲವೇ ದಿನಗಳಲ್ಲಿ ಕಮಲ್ ಹಾಸನ್ ಸೂಪರ್‌ಸ್ಟಾರ್ ರಜನಿಕಾಂತ್‌ರನ್ನು ಭೇಟಿ ಮಾಡಿದ್ದಾರೆ.

  Exclusive: ಶಿವಣ್ಣನಿಗೆ ಕಥೆ ಒಪ್ಪಿಸಿದ ರಜನಿ ಸಿನಿಮಾದ ನಿರ್ದೇಶಕ: ಶಿವಣ್ಣನ ಪಾತ್ರದ ಹೈಲೈಟ್ ಏನು?Exclusive: ಶಿವಣ್ಣನಿಗೆ ಕಥೆ ಒಪ್ಪಿಸಿದ ರಜನಿ ಸಿನಿಮಾದ ನಿರ್ದೇಶಕ: ಶಿವಣ್ಣನ ಪಾತ್ರದ ಹೈಲೈಟ್ ಏನು?

  ರಜನಿ ಭೇಟಿಯಾದ ಕಮಲ್

  ರಜನಿ ಭೇಟಿಯಾದ ಕಮಲ್

  ಕಮಲ್ ಹಾಸನ್ 'ವಿಕ್ರಮ್' ಸಿನಿಮಾ ಪ್ರಚಾರದಲ್ಲಿದ್ದಾರೆ. 'ವಿಕ್ರಮ್' ಸಿನಿಮಾಗಾಗಿ ದೇಶ ಪರ್ಯಟನೆ ಮಾಡುತ್ತಿದ್ದಾರೆ. ಪ್ರತಿಯೊಂದು ಕಡೆಯಲ್ಲೂ ಕಮಲ್ ಹಾಸನ್ ಹಾಗೂ ರಜನಿಕಾಂತ್ ಸ್ನೇಹದ ಬಗ್ಗೆನೇ ಪ್ರಶ್ನೆಗಳನ್ನು ಮಾಡುತ್ತಿದ್ದಾರೆ. ಕೆಲ ದಿನಗಳ ಹಿಂದೆ ಕೂಡ ಇದೇ ಪ್ರಶ್ನೆಯನ್ನು ಮಾಡಲಾಗಿತ್ತು. ಆಗ ಕಮಲ್ ಹಾಸನ್ "ರಾಜಕೀಯನೇ ಬೇರೆ, ಸ್ನೇಹನೇ ಬೇರೆ" ಎಂದು ಹೇಳಿದ್ದರು. ಇದು ಭಾರಿ ಚರ್ಚೆಯಾಗಿತ್ತು. ಈ ಬೆನ್ನಲ್ಲೇ ಕಮಲ್ ಹಾಸನ್ ತಲೈವಾ ರಜನಿಕಾಂತ್‌ರನ್ನು ಭೇಟಿ ಮಾಡಿದ್ದಾರೆ.

  ರಜನಿ-ಕಮಲ್ ಫೋಟೊ ವೈರಲ್

  ರಜನಿ-ಕಮಲ್ ಫೋಟೊ ವೈರಲ್

  ರಜನಿಕಾಂತ್ ಹಾಗೂ ಕಮಲ್ ಹಾಸನ್ ನಡುವೆ ಸಿನಿಮಾ ವಿಚಾರದಲ್ಲೂ ಪೈಪೋಟಿ ಇತ್ತು. ಜೊತೆ ಇಬ್ಬರ ರಾಜಕೀಯ ನಿಲುವುಗಳು ಕೂಡ ಬೇರೆ. ಆದರೂ ಇಬ್ಬರ ಸ್ನೇಹದಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಅಂತ ಕಮಲ್ ಹಾಸನ್ ಪ್ರಚಾರದ ವೇಳೆ ಹೇಳಿದ್ದರು. ಹೀಗೆ ಹೇಳಿದ ಬಳಿಕ ದಿಢೀರನೇ ರಜನಿಕಾಂತ್ ಭೇಟಿ ಮಾಡಿದ್ದು ಅಚ್ಚರಿಗೆ ಕಾರಣವಾಗಿದೆ. ಆದರೆ, ಕಮಲ್ ಸೂಪರ್‌ಸ್ಟಾರ್ ರಜನಿಯನ್ನು ಭೇಟಿ ಮಾಡಿದ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

  ಕಮಲ್ ಸಿನಿಮಾದಲ್ಲಿ ನಟಿಸಬೇಕಿತ್ತು ತಲೈವಾ

  ಕಮಲ್ ಸಿನಿಮಾದಲ್ಲಿ ನಟಿಸಬೇಕಿತ್ತು ತಲೈವಾ

  ಕಮಲ್ ಹಾಸನ್ ಹಾಗೂ ರಜನಿಕಾಂತ್ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಆರಂಭದಲ್ಲಿ 'ವಿಕ್ರಮ್' ಸಿನಿಮಾದ ನಿರ್ದೇಶಕನ ಆಲೋಚನೆಯೇ ಬೇರೆಯಾಗಿತ್ತು. ಕಮಲ್ ಹಾಸನ್ ನಿರ್ಮಾಣದಲ್ಲಿ ರಜನಿಕಾಂತ್ ಸಿನಿಮಾದಲ್ಲಿ ನಟಿಸಬೇಕು ಅಂತ ನಿರ್ದೇಶಕ ಲೋಕೇಶ್ ಕಗನರಾಜ್ ಪ್ಲ್ಯಾನ್ ಮಾಡಿದ್ದರು. ಆದರೆ, ಕಾರಣಾಂತರಗಳಿಂದ ಇದು ಸ್ಥಗಿತಗೊಂಡಿತ್ತು ಎಂದು ಕಾಲಿವುಡ್‌ನಲ್ಲಿ ವರದಿಯಾಗಿದೆ.

  ರಜನಿ- ಕಮಲ್ ಹಾಸನ್ ಭೇಟಿಯ ಗುಟ್ಟೇನು?

  ಕಮಲ್ ಹಾಸನ್ ಸೂಪರ್‌ಸ್ಟಾರ್ ರಜನಿ ಭೇಟಿ ಸೌಜನ್ಯದ್ದಾ? ಅಥವಾ ಏನದೂ ಅಜೆಂಡಾ ಇತ್ತಾ? ಅನ್ನೋದು ಇನ್ನೂ ಗೊತ್ತಾಗಿಲ್ಲ. ನಿರ್ದೇಶಕ ಲೋಕೇಶ್ ಟ್ವಿಟರ್‌ನಲ್ಲಿ ಇಬ್ಬರ ಫೋಟೊವನ್ನು ಶೇರ್ ಮಾಡಿದ್ದು ಸೋಶಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸಿದೆ. ಸದ್ಯ ಕಮಲ್ 'ವಿಕ್ರಮ್' ಸಿನಿಮಾದ ಪ್ರಚಾರಕ್ಕೆಂದು ಕೇರಳಕ್ಕೆ ತೆರಳಿದ್ದಾರೆ. ಸಿನಿಮಾಗೆ ಯು/ಎ ಸರ್ಟಿಫಿಕೆಟ್ ಸಿಕ್ಕಿದ್ದು, ಫಹಾದ್ ಫಾಸಿಲ್, ವಿಜಯ್ ಸೇತುಪತಿ ಈ ಸಿನಿಮಾದಲ್ಲಿ ನಟಿಸಿದ್ದಾರೆ.

  English summary
  Kamal Haasan Met Rajinikanth Vikram Director Shares Photo Goes Viral, Know More.
  Sunday, May 29, 2022, 14:48
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X