twitter
    For Quick Alerts
    ALLOW NOTIFICATIONS  
    For Daily Alerts

    ಕಾವೇರಿ ತೀರ್ಪಿನ ಬಗ್ಗೆ ಬೇಸರಗೊಂಡ ತಮಿಳು ನಟ ಕಮಲ್ ಹಾಸನ್

    By Bharath Kumar
    |

    Recommended Video

    ಕಾವೇರಿ ತೀರ್ಪಿನ ಬಗ್ಗೆ ಬೇಸರಗೊಂಡ ನಟ ಕಮಲ್ ಹಾಸನ್ | Filmibeat Kannada

    ಕಾವೇರಿ ಜಲ ವಿವಾದಕ್ಕೆ ಸಂಬಂಧಪಟ್ಟಂತೆ ಶುಕ್ರವಾರ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಈ ತೀರ್ಪು ಕರ್ನಾಟಕ ಪಾಲಿಗೆ ಸ್ವಲ್ಪ ಸಮಾಧಾನಕಾರವಾಗಿದ್ದು, ನಾಡಿನ ಜನ ನಿಟ್ಟುಸಿರು ಬಿಡುವಂತಾಗಿದೆ.

    ಆದ್ರೆ, ತಮಿಳುನಾಡಿನ ಜನರು ಈ ತೀರ್ಪಿನಿಂದ ಅಚ್ಚರಿಗೊಳಗಾಗಿದ್ದು, ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಸರ್ವೋಚ್ಚ ನ್ಯಾಯಾಲಯದ ಈ ನಿರ್ಣಯದ ಬಗ್ಗೆ ತಮಿಳು ನಟ ಹಾಗೂ ರಾಜಕಾರಿಣಿ ಕಮಲ್ ಹಾಸನ್ ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ.

    ಸುಪ್ರೀಂ ಕೋರ್ಟ್ ಆದೇಶದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿರುವ ಕಮಲ್ ಹಾಸನ್, ಕರ್ನಾಟಕ ಮತ್ತು ತಮಿಳುನಾಡು ರೈತರು ಒಂದಾಗಬೇಕು ಎಂದು ಕರೆ ನೀಡಿದ್ದಾರೆ. ನೀರಿನ ಸಮಸ್ಯೆ ಬಂದಾಗ, ಸರ್ಕಾರಗಳು ವಿಫಲಗೊಂಡರೂ, ರೈತರು ಪರಿಹಾರ ಕಂಡುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಕಾವೇರಿ ತೀರ್ಪಿನ ಬಗ್ಗೆ ಕಮಲ್ ಹಾಸನ್ ಏನಂದ್ರು ಎಂದು ಪೂರ್ತಿ ತಿಳಿಯಲು ಮುಂದೆ ಓದಿ.....

    ಎರಡು ರಾಜ್ಯಗಳು ಏಕತೆ ಕಾಯ್ದುಕೊಳ್ಳಬೇಕು

    ಎರಡು ರಾಜ್ಯಗಳು ಏಕತೆ ಕಾಯ್ದುಕೊಳ್ಳಬೇಕು

    ಕಾವೇರಿ ವಿಚಾರದಲ್ಲಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳು ಏಕತೆಯನ್ನು ಕಾಯ್ದುಕೊಳ್ಳಬೇಕು ಎಂದು ಕಮಲ್ ಹಾಸನ್ ಮನವಿ ಮಾಡಿದ್ದಾರೆ. ''ಕಾವೇರಿ ನೀರು ಸರಬರಾಜಿನಲ್ಲಿ ತಮಿಳುನಾಡಿಗೆ ಆಗಿರುವ ಕಡಿತದ ಬಗ್ಗೆ ತಮಿಳುನಾಡಿನ ಎಲ್ಲಾ ರೈತರಂತೆ ನಾನು ಕೂಡ ಆಘಾತಗೊಂಡಿದ್ದೇನೆ'' - ಕಮಲ್ ಹಾಸನ್

    ನೀರು ಯಾವ ರಾಜ್ಯದ ಸ್ವತ್ತಲ್ಲ

    ನೀರು ಯಾವ ರಾಜ್ಯದ ಸ್ವತ್ತಲ್ಲ

    ''ಸುಪ್ರೀ ಕೋರ್ಟ್ ನೀಡಿರುವ ಆದೇಶವನ್ನ ಸೂಕ್ಷ್ಮವಾಗಿ ಗಮಿಸಿದರೇ, ನೀರು ಯಾವ ರಾಜ್ಯದ ಸ್ವತ್ತು ಅಲ್ಲ, ಯಾರೊಬ್ಬರ ಸ್ವತ್ತು ಅಲ್ಲ ಎನ್ನುವುದು ಜಾರಿಗೆ ತರುಲು ಸೂಚನೆಯಾಗಿದೆ.

    ಎರಡು ರಾಜ್ಯಗಳು ಕಾಳಜಿ ವಹಿಸಬೇಕು

    ಎರಡು ರಾಜ್ಯಗಳು ಕಾಳಜಿ ವಹಿಸಬೇಕು

    ''ಕಾವೇರಿ ವಿಚಾರವನ್ನೇ ಇಟ್ಟುಕೊಂಡು ಕೆಲ ರಾಜಕೀಯ ನಾಯಕರು ರಾಷ್ಟ್ರೀಯ ಹಿತಾಸಕ್ತಿಯನ್ನು ಬದಿಗೊತ್ತಿ ಮತಬ್ಯಾಂಕ್ ರಾಜಕೀಯ ಮಾಡಿದರೆ ಅದು ಎಲ್ಲರ ಮೇಲೂ ಪರಿಣಾಮ ಬೀರುತ್ತದೆ ಎಂದು ತಿಳಿಸಿದರು. ಈ ತೀರ್ಪಿನಿಂದಾಗಿ ತಮಿಳುನಾಡಿಗೆ ಕಡಿಮೆ ಪ್ರಮಾಣದ ನೀರು ದೊರೆತಿರುವ ಬಗ್ಗೆ ನಾನು ನಿರಾಸೆ ಹೊಂದಿದ್ದೇನೆ. ಆದರೆ ರಾಜ್ಯಗಳು ನದಿ ನೀರಿನ ಬಳಕೆ ಮತ್ತು ನದಿ ಸಂರಕ್ಷಣೆ ಬಗ್ಗೆ ಎರಡೂ ರಾಜ್ಯಗಳು ಕಾಳಜಿ ವಹಿಸಬೇಕು''

    ಎರಡು ರಾಜ್ಯದ ರೈತರು ಒಂದಾಗಬೇಕು

    ಎರಡು ರಾಜ್ಯದ ರೈತರು ಒಂದಾಗಬೇಕು

    ಕರ್ನಾಟಕ ಹಾಗೂ ತಮಿಳುನಾಡು ರೈತರು ಒಂದಾಗಬೇಕು. ಲಭ್ಯವಿರುವ ನೀರನ್ನು ವಿವೇಚನೆಯಿಂದ ಬಳಸಿಕೊಳ್ಳಬೇಕಾದ ಮಾರ್ಗಗಳು ಮತ್ತು ವಿಧಾನಗಳನ್ನು ನಾವು ಮಾತುಕತೆಯ ಮೂಲಕ ಬಗೆಹರಿಸಬೇಕಾಗಿದೆ. ಅಂತರ್ಜಲವನ್ನು ರಕ್ಷಿಸಲು ಸರ್ಕಾರ ವಿಫಲಗೊಂಡರೆ, ನಾವು ಅದನ್ನು ರಕ್ಷಿಸಬೇಕು' ಎಂದು ಕಮಲ್ ಹಾಸನ್ ಹೇಳಿದರು.

    ರಜನಿಕಾಂತ್ ಬೇಸರ

    ರಜನಿಕಾಂತ್ ಬೇಸರ

    ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ರಜನಿಕಾಂತ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸುಪ್ರೀಂಕೋರ್ಟ್ ನೀಡಿರುವ ಕಾವೇರಿ ತೀರ್ಪಿನಿಂದ ಬೇಸರವಾಗಿದೆ. ಇದರಿಂದ ರೈತರ ಜೀವನಕ್ಕೆ ಸಮಸ್ಯೆಯಾಗಲಿದೆ. ಈ ಸಂಬಂಧ ಮರು ಪರಿಶೀಲನಾ ಅರ್ಜಿ ಸಲ್ಲಿಸಲು ತಮಿಳುನಾಡು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ

    English summary
    Actor-turned-politician Kamal Haasan on Friday expressed shock at the Supreme Court's verdict on Cauvery River water dispute that reduced Tamil Nadu's share in the disputed waters.
    Saturday, February 17, 2018, 12:57
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X