For Quick Alerts
ALLOW NOTIFICATIONS  
For Daily Alerts

ಕಮಲ್ ಹಾಸನ್ 'ಉತ್ತಮ ವಿಲನ್' ರಿಲೀಸ್ ಊರ್ಜಿತ

By Rajendra
|

ವಿಶ್ವರೂಪಂ (2013) ಚಿತ್ರದ ಬಳಿಕ ಕಮಲ್ ಹಾಸನ್ ಅವರ ಮತ್ತೊಂದು ಮಹತ್ವಾಕಾಂಕ್ಷಿ ಚಿತ್ರ 'ಉತ್ತಮ ವಿಲನ್'. ಈ ಚಿತ್ರಕ್ಕೆ ಖ್ಯಾತ ನಟ ರಮೇಶ್ ಅರವಿಂದ್ ಅವರು ಆಕ್ಷನ್ ಕಟ್ ಹೇಳಿದ್ದಾರೆ ಎಂಬ ಕಾರಣಕ್ಕೆ ಚಿತ್ರದ ಬಗೆಗಿನ ಕುತೂಹಲ ಇನ್ನಷ್ಟು ಹೆಚ್ಚಾಗಿದೆ.

ಈ ಚಿತ್ರ ಯಾವಾಗ ಬಿಡುಗಡೆಯಾಗುತ್ತದೆ ಎಂಬ ಕುತೂಹಲಕ್ಕೆ ತೆರೆಬೀಳುವ ಸಮಯ ಬಂದಿದೆ. ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ತೆರೆಕಾಣುತ್ತಿರುವ ಈ ಚಿತ್ರದ ಆಡಿಯೋ ಇದೇ ಮಾರ್ಚ್ 1ರಂದು ಮಾರುಕಟ್ಟೆಗೆ ಬರಲಿದೆ. [ರಮೇಶ್ ಅರವಿಂದ್ 'ಉತ್ತಮ ವಿಲನ್' ತಾಜಾ ಚಿತ್ರ]

ಇನ್ನು ಚಿತ್ರವನ್ನು ಏಪ್ರಿಲ್ 2ರಂದು ಬಿಡುಗಡೆ ಮಾಡಲು ಸಿದ್ಧತೆಗಳು ಭರದಿಂದ ಸಾಗುತ್ತಿವೆ. ರಾಜ್ ಕಮಲ್ ಇಂಟರ್ ನ್ಯಾಶನಲ್ ಹಾಗೂ ಎನ್ ಲಿಂಗುಸ್ವಾಮಿ ಅವರ ತಿರುಪತಿ ಬ್ರದರ್ಸ್ ಸಂಸ್ಥೆ ಚಿತ್ರವನ್ನು ನಿರ್ಮಿಸಿದೆ. ಇಷ್ಟಕ್ಕೂ ಈ ಚಿತ್ರದ ಕಥೆ ಏನೆಂದರೆ...

ಉತ್ತಮ ವಿಲನ್ ಚಿತ್ರದಲ್ಲಿ ಕಮಲ್ ಅವರು ಎರಡು ಭಿನ್ನ ಶೇಡ್ ಗಳಲ್ಲಿ ಕಾಣಿಸಲಿದ್ದಾರೆ. ರಂಗಭೂಮಿ ಕಲಾವಿದ ಹಾಗೂ ಚಲನಚಿತ್ರ ನಟನಾಗಿ ಅವರದು ಎರಡು ಭಿನ್ನ ಪಾತ್ರಗಳು. ಇನ್ನೊಂದು ವಿಶೇಷ ಎಂದರೆ ಈ ಚಿತ್ರದಲ್ಲಿ ಕಮಲ್ ಅವರು ಕೇವಲ ನಟನೆಗಷ್ಟೇ ಸೀಮಿತವಾಗದೆ ಚಿತ್ರಕಥೆ ಹಾಗೂ ಸಂಭಾಷಣೆಯನ್ನೂ ಬರೆದಿರುವುದು.

ಸ್ವತಃ ಈ ವಿಷಯವನ್ನು ರಮೇಶ್ ಅರವಿಂದ್ ಅವರು ಬಹಿರಂಗಪಡಿಸಿದ್ದಾರೆ. ಎಂಟನೇ ಶತಮಾನದಲ್ಲಿದ್ದ ಉತ್ತಮನ್ ಎಂಬ ರಂಗಭೂಮಿ ಕಲಾವಿದನ ಹಾಗೂ 21ನೇ ಶತಮಾನಕ್ಕೆ ಸೇರಿದ ಮನೋರಂಜನ್ ಎಂಬ ಸಿನಿಮಾ ಸೂಪರ್ ಸ್ಟಾರ್ ಪಾತ್ರಗಳಲ್ಲಿ ಕಮಲ್ ಕಾಣಿಸಲಿದ್ದಾರೆ.

ಈ ಎರಡೂ ಪಾತ್ರಗಳಲ್ಲಿ ಕಮಲ್ ಹಾಸನ್ ಪ್ರೇಕ್ಷಕರನ್ನು ಮೈಮರೆಸಲಿದ್ದಾರೆ. ಕಮಲ್ ಜೊತೆಗೆ ದಕ್ಷಿಣ ಭಾರತದ ಇನ್ನೂ ನಾಲ್ಕು ಮಂದಿ ಜನಪ್ರಿಯ ಹೀರೋಗಳು ಚಿತ್ರದಲ್ಲಿರುವುದು ವಿಶೇಷ. ಖ್ಯಾತ ನಿರ್ದೇಶಕ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಕೆ ಬಾಲಚಂದರ್ ಸಹ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

ಉತ್ತಮ ವಿಲನ್ ಚಿತ್ರದ ಶೂಟಿಂಗ್ ಮುಗಿದಿದ್ದು ಸದ್ಯಕ್ಕೆ ನಿರ್ಮಾಣನಂತರದ ಕಾರ್ಯಗಳು ಭರದಿಂದ ಸಾಗುತ್ತಿವೆ. ಆಸ್ಕರ್ ಪ್ರಶಸ್ತಿ ಪುರಸ್ಕೃತ ಕ್ರೈಗ್ ನೇತೃತ್ವದಲ್ಲಿ ಚಿತ್ರದ ನಿರ್ಮಾಣ ನಂತರದ ಕಾರ್ಯಕ್ರಗಳು ಅಮೆರಿಕಾದಲ್ಲಿ ನಡೆಯುತ್ತಿವೆ. (ಏಜೆನ್ಸೀಸ್)

English summary
Uttama Villain Audio will be released on March 1st. The film will complete all the formalities and will release on April 2nd in Hindi, Telugu and Tamil languages. The film features an ensemble cast that includes Kamal Hassan, Jayaram, Andrea Jeremiah, Pooja Kumar, Nassar, Parvathi, Parvathy Nair and Urvashi.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more