»   » ಗೌರಿ ಲಂಕೇಶ್ ಹತ್ಯೆಯ ಬಗ್ಗೆ ನಟ ಕಮಲ್ ಹಾಸನ್ ಹೇಳಿದ್ದೇನು?

ಗೌರಿ ಲಂಕೇಶ್ ಹತ್ಯೆಯ ಬಗ್ಗೆ ನಟ ಕಮಲ್ ಹಾಸನ್ ಹೇಳಿದ್ದೇನು?

Posted By:
Subscribe to Filmibeat Kannada

ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಖಂಡಿಸಿ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಹತ್ಯೆ ಯಾಕೆ ನಡೆಯಿತು ಎಂಬ ಚರ್ಚೆ ಆಗ್ತಿದೆ. ಈಗ ತಮಿಳು ನಟ ಸೂಪರ್ ಸ್ಟಾರ್ ಕಮಲ್ ಹಾಸನ್ ಅವರು ಗೌರಿ ಲಂಕೇಶ್ ಅವರ ಹತ್ಯೆಯನ್ನ ಖಂಡಿಸಿ ಮಾತನಾಡಿದ್ದಾರೆ.

ಟ್ವಿಟ್ಟರ್ ನಲ್ಲಿ ಗೌರಿ ಅವರ ಹತ್ಯೆಯ ಬಗ್ಗೆ ಪ್ರತಿಕ್ರಿಯಿಸಿರುವ ಕಮಲ್ ಹಾಸನ್ ''ಗನ್ ನಿಂದ ಒಂದು ಧ್ವನಿಯನ್ನು ಮೌನವಾಗಿಸಿ ಚರ್ಚೆಯನ್ನು ಗೆಲ್ಲುವುದು ಕೆಟ್ಟ ಮಾರ್ಗ'' ಎಂದಿದ್ದಾರೆ.

ಗೌರಿ ಹತ್ಯೆ : ಗಾಂಭೀರ್ಯತೆ ಕಳೆದುಕೊಂಡ ರಾಹುಲ್ ವ್ಯಾಖ್ಯಾನ

ಕಮಲ್ ಹಾಸನ್ ಮಾತ್ರವಲ್ಲ, ಗೌರಿ ಲಂಕೇಶ್ ಅವರ ಹತ್ಯೆ ಖಂಡಿಸಿ ಹಲವು ಸೆಲಬ್ರಿಟಿಗಳು ಬೇಸರ ವ್ಯಕ್ತಪಡಿಸಿದ್ದರು. ಬಾಲಿವುಡ್ ಚಿತ್ರರಂಗದಲ್ಲೂ ಕೂಡ ಈ ಹತ್ಯೆಯನ್ನ ವಿರೋಧಿಸಿದ್ದಾರೆ. ನಿರ್ದೇಶಕ ಮಹೇಶ್ ಭಟ್, ನಟಿ ಸೋನಂ ಕಪೂರ್, ಫರಾನ್ ಅಖ್ತರ್ ಸೇರಿದಂತೆ ಮುಂತಾದವರು ಟ್ವಿಟ್ಟರ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗೌರಿ ಲಂಕೇಶ್ ಹತ್ಯೆಯ ಕಡೆಯ ಕ್ಷಣಗಳು ಹೇಗಿದ್ದವು?

kamal hassan tweet on gauri lankesh murder
English summary
Tamil superstar Kamal Haasan today spoke against the murder of senior journalist Gauri Lankesh.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada