'ಉತ್ತಮ ವಿಲನ್' ಆರ್ಭಟಕ್ಕೆ ಥಿಯೇಟರ್ ಗಳು ಸಿದ್ಧ
ಕಮಲ್ ಹಾಸನ್ ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಂಡಿರುವ ಉತ್ತಮ ವಿಲನ್ ತೆರಗೆ ಅಪ್ಪಳಿಸಲಿದೆ. ಕಮಲ್ ಹಾಸನ್ ಖಾಸಾ ದೋಸ್ತ್ ಕನ್ನಡಿಗ ರಮೇಶ್ ಅರವಿಂದ್ ಚಿತ್ರದ ನಿರ್ದೇಶನ ಮಾಡಿರುವುದು ವಿಶೇಷ.
ಚಿತ್ರದಲ್ಲಿ ಹಿಂದು ಧರ್ಮಕ್ಕೆ ಧಕ್ಕೆ ತರುವ ಅಂಶಗಳಿವೆ ಎಂಬ ಕಾರಣಕ್ಕೆ ಹಿಂದೊಮ್ಮೆ ವಿವಾದ ಸಹ ಎದ್ದಿತ್ತು. ನಂತರ ಮಧ್ಯ ಪ್ರವೇಶಿಸಿದ ನ್ಯಾಯಾಲಯ ಚಿತ್ರ ಬಿಡುಗಡೆಗೆ ಎದುರಾಗಿದ್ದ ಅಡೆ ತಡೆಯನ್ನು ನಿವಾರಣೆ ಮಾಡಿತ್ತು.

ಕನ್ನಡಿಗ ರಮೇಶ್ ಅರವಿಂದ್ ನಿರ್ದೇಶನ ಕಮಾಲ್ ನಲ್ಲಿ ಕಮಲ್ ಹಾಸನ್ ಅಭಿನಯದಲ್ಲಿ ಮೂಡಿಬಂದಿರುವ ಬಹು ನಿರೀಕ್ಷಿತ 'ಉತ್ತಮ ವಿಲನ್' ಶುಕ್ರವಾರ, ಮೇ, 1 ರಂದು ತೆರೆಗೆ ಅಪ್ಪಳಿಸಲಿದೆ. 172 ನಿಮಿಷದ ಚಿತ್ರ ದೇಶ ಸೇರಿದಂತೆ ವಿದೇಶಗಳಲ್ಲೂ ಏಕಕಾಲಕ್ಕೆ ಬಿಡುಗಡೆಯಾಗಲಿದೆ. ಆದರೆ ಚಿತ್ರ ತುಂಬಾ ದೀರ್ಘವಾಗಿದೆ ಎಂಬ ಹಿನ್ನಲೆಯಲ್ಲಿ ಕೆಲ ನಿಮಿಷಗಳಿಗೆ ಕತ್ತರಿ ಹಾಕಲು ವಿತರಕರು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಜನರ ಪ್ರತಿಕ್ರಿಯೆ ಆಧರಿಸಿ ಚಿತ್ರ ತಂಡ ಕತ್ತರಿ ಪ್ರಯೋಗ ಮಾಡಲಿದೆ.
ತಮಿಳುನಾಡಿನಲ್ಲಿ ಮಾತ್ರ ಚಿತ್ರದ ಅಷ್ಟೂ ಭಾಗ ಪ್ರದರ್ಶನವಾಗಲಿದ್ದು, ಉಳಿದ ಕಡೆ ಕತ್ತರಿ ಹಾಕಿದ ಚಿತ್ರ ಪ್ರದರ್ಶನವಾಗಲಿದೆ. ಕಮಲ್ ಹಾಸನ್ ಎಂಟನೇ ಶತಮಾನದ ನಾಟಕಕಾರನಾಗಿ ಕಾಣಿಸಿಕೊಂಡಿದ್ದಾರೆ. ಕಮಲ್ ಹಾಸನ್ ಜತೆಗೆ ಪೋಜಾ ಕುಮಾರ್, ಪಾರ್ವತಿ ನಾಯರ್, ಉರ್ವಶಿ, ಕೆ. ಬಾಲಚಂದರ್. ಕೆ ವಿಶ್ವನಾಥ್ ಸೇರಿದಂತೆ ಅನೇಕ ದಿಗ್ಗಜರು ತಾರಾ ಬಳಗದಲ್ಲಿ ಕಾಣಿಸಿಕೊಂಡಿದ್ದಾರೆ.


Click it and Unblock the Notifications











