ತೆರೆ ಮೇಲೆ ಹಳ್ಳಿ ಭಾಷೆ ಮಾತಾಡೋ 'ಕಮಲಿ' ತೆರೆ ಹಿಂದೆ ಸಿಕ್ಕಾಪಟ್ಟೆ ಸ್ಟೈಲಿಶ್!

ಕಿರುತೆರೆ ಧಾರಾವಾಹಿಗಳಲ್ಲಿ ಹೆಚ್ಚಾಗಿ ಗಮನ ಸೆಳೆಯುವುದು ಅಂದರೆ ಅದು ಧಾರಾವಾಹಿಯ ನಾಯಕಿಯರು. ಕನ್ನಡದ ಪ್ರತೀ ಧಾರಾವಾಹಿಗಳಲ್ಲೂ ಕೂಡ ನಾಯಕಿಯರದ್ದೇ ಮೇಲುಗೈ. ಅದೇ ರೀತಿ 'ಕಮಲಿ' ಸೀರಿಯಲ್‌ನಲ್ಲಿ ಬರುವ ಕಮಲಿ ಪಾತ್ರ ಜನರಿಗೆ ಬಹಳ ಅಚ್ಚುಮೆಚ್ಚು. ಕಮಲಿ ಒಮ್ಮೆ ಕಣ್ಣೀರು ಹಾಕಿದರೆ ಸಾಕು. ಎಲ್ಲರೂ ಕರಗಿ ಹೋಗ್ತಾರೆ.

ತೆರೆ ಮೇಲೆ ಮುದ್ದು ಮುದ್ದಾಗಿ ಹಳ್ಳಿ ಭಾಷೆ ಮಾತನಾಡುವ ಕಮಲಿ ತೆರೆ ಹಿಂದೆ ಸಿಕ್ಕಾಪಟ್ಟೆ ಸ್ಟೈಲಿಶ್. ಸದಾ ಮಾಡ್ರನ್ ಅವತಾರದಲ್ಲಿಯೇ ಇರುತ್ತಾರೆ ಕಮಲಿ. ಕಮಲಿ ಅವರ ನಿಜವಾದ ಹೆಸರು ಅಮೂಲ್ಯಾ ಗೌಡ. ನೀವು ಒಮ್ಮೆ ಅವರ ಫೊಟೋಗಳನ್ನು ದಂಗಾಗಿ ಬಿಡುತ್ತಿರಿ. ಅಷ್ಟರ ಮಟ್ಟಿಗೆ ಕಮಲಿ ಅವರ ಧಾರಾವಾಹಿಗಾಗಿ ತಮ್ಮನ್ನು ತಾವು ಬದಲಾಯಿಸಿಕೊಂಡಿದ್ದಾರೆ.

ನಟಿ ಅಮೂಲ್ಯ ಗೌಡ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯವಾಗಿ ಇರುತ್ತಾರೆ. ತಮ್ಮ ವೈಯಕ್ತಿಕ ವಿಚಾರಗಳನ್ನು, ಫೋಟೊ, ವಿಡಿಯೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಅವರ ನಿಜವಾದ ರೂಪಕಂಡು ಹಲವರು ಬೆರಗಾಗಿದ್ದು ಉಂಟು. ಸದ್ಯ ಅಮೂಲ್ಯ ಅವರು ಸ್ನೇಹಿತರೊಂದಿಗೆ ಐಲ್ಯಾಂಡ್ ನಲ್ಲಿ ಪ್ರತ್ಯಕ್ಷ ಆಗಿದ್ದಾರೆ. ಅಲ್ಲಿ ಅಮೂಲ್ಯ ಅವರು ಸಿಕ್ಕಾಪಟ್ಟೆ ಮಾಡ್ರನ್ ಹಾಗು ಸ್ಟೈಲಿಶ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

Kamali Serial Actress Amulya Gowda More Stylish Than On Screen

ಇನ್ನು ಇತ್ತೀಚೆಗೆ ಅಮೂಲ್ಯ ಅವರು ತಮ್ಮ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ. ಹುಟ್ಟು ಹಬ್ಬದ ಫೊಟೋಗಳನ್ನು ಕೂಡ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಭಾರಿ ಮೆಚ್ಚುಗೆ ಗಳಿಸಿಕೊಂಡಿದ್ದಾರೆ.

Kamali Serial Actress Amulya Gowda More Stylish Than On Screen

ಫ್ಯಾಷನ್ ಲೋಕವನ್ನು ಎಕ್ಸ್‌ಫ್ಲೋರ್ ಮಾಡುತ್ತಾ ಇರುತ್ತಾರೆ ಅಮೂಲ್ಯ. ನಾನಾ ರೀತಿಯ ಫ್ಯಾಷನ್‌ ಉಡುಗೆಯಲ್ಲಿ ಫೊಟೋಗೆ ಅಮೂಲ್ಯ ಪೋಸ್ ಕೊಡುತ್ತಾ ಇರುತ್ತಾರೆ. ಅವರು ಸೀರೆ, ಗೌನ್, ಜೀನ್ಸ್, ಸ್ವಿಮ್ ಸೂಟ್, ಲಾಂಗ್ ಡ್ರೆಸ್ ಹೀಗೆ ನಾನಾ ಫ್ಯಾಷನ್ ಉಡುಪುಗಳಲ್ಲಿ ಕಾಣಿಸಿಕೊಳ್ಳುತ್ತಾ ಇರುತ್ತಾರೆ. ಆದರೆ ಸಿರೀಯಲ್‌ನಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿ, ಹಳ್ಳಿ ಭಾಷೆ ಮಾತನಾಡುವ ಆ ಕಮಲಿ ಇವರೇನೆ ಎಂದು ಅನಿಸದೇ ಇರದು. ಸದ್ಯ ಕಿರುತೆರೆಯಲ್ಲಿ ಹೆಸರು ಮಾಡಿರುವ ಅಮೂಲ್ಯ ಅವರ ಮುಂದಿನ ಗುರಿ ಸಿನಿಮಾ ಆಗಿದೆ.

English summary
Kamali Serial Actress Amulya Gowda More Stylish In Off Screen,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X