'ಕಾಮಸೂತ್ರ 3D' ಚಿತ್ರದ ನಟಿ ಸೈರಾ ಖಾನ್ ನಿಧನ
'ಕಾಮಸೂತ್ರ 3D' ಚಿತ್ರದಲ್ಲಿ ನಟಿಸಿದ್ದ ಸೈರಾ ಖಾನ್ ವಿಧಿವಶರಾಗಿದ್ದಾರೆ. 'ಕಾಮಸೂತ್ರ 3D' 2013ರಲ್ಲಿ ಬಾಲಿವುಡ್ ನಲ್ಲಿ ಬಿಡುಗಡೆಯಾದ ಸಿನಿಮಾವಾಗಿದೆ.
ಸೈರಾ ಖಾನ್ ಹೃದಯ ರೋಗ ಸಮಸ್ಯೆಯಿಂದ ಬಳಲುತ್ತಿದ್ದರು. ಸೈರಾ ನಿಧನದ ಸುದ್ದಿ ಸ್ನೇಹಿತರು ಹಾಗೂ ಸಂಬಂಧಿಗಳಿಗೆ ಆಘಾತ ಉಂಟು ಮಾಡಿದೆ. ಸೈರಾ ಖಾನ್ ವಿಧಿವಶರಾದ ವಿಷಯವನ್ನು ನಿರ್ದೇಶಕ ರೂಪೇಶ್ ಪೌಲ್ ತಿಳಿಸಿದ್ದಾರೆ.
ಹೃದಯಾಘಾತ ಆದ ಕಾರಣ ಸೈರಾ ಖಾನ್ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಅವರನ್ನು ಬದುಕಿಸಿಕೊಳ್ಳಲು ಸಾಧ್ಯ ಆಗಲಿಲ್ಲ.

'ಕಾಮಸೂತ್ರ 3D' ಸಿನಿಮಾದಲ್ಲಿ ಶರ್ಲಿನ್ ಚೋಪ್ರಾ ನಟಿಸಬೇಕಾಗಿತ್ತು. ಆದರೆ, ಕೊನೆಗೆ ಆ ಅವಕಾಶವನ್ನು ಸೈರಾ ಖಾನ್ ಪಡೆದರು. ಮುಸ್ಲಿಂ ಕುಟುಂಬದದಿಂದ ಬಂದ ಸೈರಾ ಖಾನ್ ರನ್ನು 'ಕಾಮಸೂತ್ರ' ಸಿನಿಮಾದಲ್ಲಿ ನಟಿಸಲು ಒಪ್ಪಿಸಲು ಚಿತ್ರತಂಡ ಬಹಳ ಕಷ್ಟ ಪಟ್ಟಿತ್ತು.
ಕೊನೆಗೆ ಸಿನಿಮಾದಲ್ಲಿ ನಟಿಸಲು ಒಕೆ ಎಂದ ಸೈರಾ ಖಾನ್ ಚಿತ್ರದ ಪಾತ್ರಕ್ಕೆ ತಕ್ಕ ಹಾಗೆ ನಟಿಸಿದರು ಎಂದು ರೂಪೇಶ್ ಪೌಲ್ ಹೇಳಿಕೊಂಡಿದ್ದರು. ಈ ಸಿನಿಮಾದ ಮೂಲಕವೇ ಸೈರಾ ಬಾಲಿವುಡ್ ಪ್ರವೇಶ ಮಾಡಿದ್ದರು.


Click it and Unblock the Notifications











