»   » ನಟ ಜಗ್ಗೇಶ್ ಗೆ ಚೆಂದುಳ್ಳಿ ಚೆಲುವೆ ಕಾಮ್ನಾ ರಾಶಿಸಿಂಗ್ ಜೋಡಿ ಅಲ್ಲ.!

ನಟ ಜಗ್ಗೇಶ್ ಗೆ ಚೆಂದುಳ್ಳಿ ಚೆಲುವೆ ಕಾಮ್ನಾ ರಾಶಿಸಿಂಗ್ ಜೋಡಿ ಅಲ್ಲ.!

Posted By:
Subscribe to Filmibeat Kannada

ಫಸ್ಟ್ ಲುಕ್ ಮೂಲಕ ನಿರೀಕ್ಷೆ ಹುಟ್ಟಿಸಿದ್ದ '8MM' ಚಿತ್ರಕ್ಕೆ ಈಗ ನಾಯಕಿಯ ಆಯ್ಕೆ ಆಗಿದೆ ಎನ್ನುವ ಸುದ್ದಿ ಹರಿದಾಡಿತ್ತು. ನವರಸ ನಾಯಕ ಜಗ್ಗೇಶ್ ಅವರ ಜೋಡಿಯಾಗಿ ನಟಿ ಕಾಮ್ನಾ ರಾಶಿಸಿಂಗ್ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಕೇಳಿ ಬಂದಿತ್ತು. ಆದರೆ ಈ ಸುದ್ದಿಗೆ ಈಗ ನಟ ಜಗ್ಗೇಶ್ ಪ್ರತಿಕ್ರಿಯೆ ನೀಡಿದ್ದಾರೆ.

ಜಗ್ಗೇಶ್ ಈಗ ನವರಸ ನಾಯಕ ಮಾತ್ರವಲ್ಲ.. ಚಿತ್ರಸಾಹಿತಿ ಕೂಡ ಹೌದು.!

ನಟ ಜಗ್ಗೇಶ್ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಈ ಸುದ್ದಿಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. 'ಚಿತ್ರದ ಬಗ್ಗೆ ಏನೇ ಸುದ್ದಿ ಇದ್ದರೂ ನಾನೇ ತಿಳಿಸುತ್ತೇನೆ' ಎಂದು ಟ್ವೀಟ್ ಮಾಡಿದ್ದಾರೆ. ಈ ಮೂಲಕ ಚಿತ್ರಕ್ಕೆ ಕಾಮ್ನಾ ರಾಶಿಸಿಂಗ್ ಆಯ್ಕೆ ಆಗಿರುವ ಸುದ್ದಿಯನ್ನು ತಳ್ಳಿ ಹಾಕಿದ್ದಾರೆ.

Kamna Rashi Singh is selected to play lead in '8MM' movie

ಕಾಮ್ನಾ ಈ ಹಿಂದೆ ಅನಿರುದ್ಧ್ ನಟನೆಯ 'ರಾಜಸಿಂಹ' ಮತ್ತು ಪ್ರಥಮ್ ನಟನೆಯ ಹೊಸ ಚಿತ್ರದಲ್ಲಿಯೂ ನಾಯಕಿ ಆಗಿ ಕಾಣಿಸಿಕೊಂಡಿದ್ದಾರೆ. ಅಂದಹಾಗೆ, '8MM' ಒಂದು ಕ್ರೈಂ ಸುತ್ತ ಹೆಣೆದಿರುವ ಚಿತ್ರವಾಗಿದ್ದು, ಹರಿಕೃಷ್ಣ ಎಂಬುವರು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಜಗ್ಗೇಶ್ ರವರ ವೃತ್ತಿ ಜೀವನದಲ್ಲಿಯೇ ಈ ಸಿನಿಮಾ ವಿಭಿನ್ನವಾಗಿದೆ.

English summary
Kamna Rashi Singh is not selected to play lead opposite Kannada Actor Jaggesh in '8MM' movie. '8MM' ಚಿತ್ರಕ್ಕೆ ನಟಿ ಕಾಮ್ನಾ ರಾಶಿಸಿಂಗ್ ಆಯ್ಕೆ ಆಗಿಲ್ಲ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X