»   » ಈ ವಾರ 'ಕನಕ'ನ ಜೊತೆ 'ಚೂರಿಕಟ್ಟೆ' ಸಿನಿಮಾ ಬಿಡುಗಡೆ

ಈ ವಾರ 'ಕನಕ'ನ ಜೊತೆ 'ಚೂರಿಕಟ್ಟೆ' ಸಿನಿಮಾ ಬಿಡುಗಡೆ

Posted By:
Subscribe to Filmibeat Kannada

ಜನವರಿ 25 ರಂದು 'ಕರ್ನಾಟಕ ಬಂದ್' ಮುಗಿಯುತ್ತಿದ್ದಂತೆ ಜನವರಿ 26ರಂದು ಚಿತ್ರಮಂದಿರಕ್ಕೆ ಎರಡು ಕನ್ನಡ ಸಿನಿಮಾಗಳು ಅಪ್ಪಳಿಸಲಿದೆ. ದುನಿಯಾ ವಿಜಯ್ ಅಭಿನಯದ 'ಕನಕ' ಮತ್ತು ಹೊಸಬರ 'ಚೂರಿಕಟ್ಟೆ' ಸಿನಿಮಾ ಗಣರಾಜ್ಯೋತ್ಸವದ ವಿಶೇಷವಾಗಿ ರಾಜ್ಯಾದ್ಯಂತ ತೆರೆಕಾಣಲಿದೆ.

ಈಗಾಗಲೇ ಟ್ರೈಲರ್, ಹಾಡುಗಳ ಮೂಲಕ ದೊಡ್ಡ ಸದ್ದು ಮಾಡುತ್ತಿರುವ 'ಕನಕ'ನ ಮೇಲೆ ಪ್ರೇಕ್ಷಕರು ಭರವಸೆ ಇಟ್ಟುಕೊಂಡಿದ್ದಾರೆ. ಡಾ ರಾಜ್ ಕುಮಾರ್ ಅಭಿಮಾನಿಯಾಗಿ ದುನಿಯಾ ವಿಜಯ್ ಬಣ್ಣ ಹಚ್ಚಿದ್ದು, ವಿಭಿನ್ನ ಶೇಡ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಆರ್.ಚಂದ್ರು ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ಮಾನ್ವಿತಾ ಹರೀಶ್, ಹರಿಪ್ರಿಯಾ ನಾಯಕಿಯರಾಗಿ ಸಾಥ್ ಕೊಟ್ಟಿದ್ದಾರೆ. ಇದೇ ಮೊದಲ ಬಾರಿಗೆ ಗಾಯಕ ನವೀನ್ ಸಜ್ಜು ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ.

ಗಣರಾಜ್ಯೋತ್ಸವದ ದಿನ ಚಿತ್ರಮಂದಿರಕ್ಕೆ ಎಂಟ್ರಿ ಕೊಡ್ತಾನೆ 'ಕನಕ'

Kanaka and Choori Katte movie will release on january 26th

'ಚೌಕಾಬಾರ' ಎಂಬ ವಿಭಿನ್ನ ಕಿರುಚಿತ್ರವನ್ನು ನಿರ್ದೇಶನ ಮಾಡಿದ್ದ ನಿರ್ದೇಶಕ ರಘು ಶಿವಮೊಗ್ಗ 'ಚೂರಿಕಟ್ಟೆ'ಗೆ ಆಕ್ಷನ್ ಕಟ್ ಹೇಳಿದ್ದಾರೆ. 'ಸಿಂಪಲ್ ಆಗಿ ಇನ್ನೊಂದು ಲವ್ ಸ್ಟೋರಿ' ಖ್ಯಾತಿಯ ಪ್ರವೀಣ್ ನಾಯಕ. ಪ್ರವೀಣ್ ಗೆ ನಾಯಕಿಯಾಗಿ ಪ್ರೇರಣಾ ಎಂಬ ಹೊಸ ನಟಿ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ್ದಾರೆ.

Kanaka and Choori Katte movie will release on january 26th

ಇನ್ನುಳಿದಂತೆ ಅಚ್ಯುತ್ ಕುಮಾರ್, ಶರತ್ ಲೋಹಿತಾಶ್ವ, ಬಾಲಾಜಿ ಮನೋಹರ್, ಮಂಜುನಾಥ್ ಹೆಗಡೆ, ಪ್ರಮೋದ್ ಶೆಟ್ಟಿ ಅಭಿನಯಿಸಿದ್ದಾರೆ. ವಾಸುಕಿ ವೈಭವ್ ಸಂಗೀತ ನೀಡಿದ್ದು, ಟ್ರೈಲರ್ ಮತ್ತು ಹಾಡುಗಳು ಭರವಸೆ ಮೂಡಿಸಿದೆ.

English summary
Kannada actor duniya vijay starrer 'Kanaka' and Praveen starrer 'Choori Katte' movies will releasing on january 26th.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X