»   » ಟಿ.ಎನ್.ನಾಗೇಶ್ ಸಾರಥ್ಯದಲ್ಲಿ ಸಿನಿಮಾ ಆಗುತ್ತಿದೆ ಕನಕದಾಸರ 'ರಾಮಧಾನ್ಯ'

ಟಿ.ಎನ್.ನಾಗೇಶ್ ಸಾರಥ್ಯದಲ್ಲಿ ಸಿನಿಮಾ ಆಗುತ್ತಿದೆ ಕನಕದಾಸರ 'ರಾಮಧಾನ್ಯ'

Posted By:
Subscribe to Filmibeat Kannada

ಕನಕದಾಸರ ಜನಪ್ರಿಯ ಸಾಹಿತ್ಯದಲ್ಲಿ 'ರಾಮಧಾನ್ಯ ಚರಿತೆ' ಕೃತಿ ಸಹ ಒಂದು. ರಾಗಿ ಮತ್ತು ಭತ್ತ ನಾನೆಚ್ಚು ತಾನೆಚ್ಚು ಎಂದು ಜಗಳ ಮಾಡುವ ವಿಷಯವನ್ನು ಈ ಕೃತಿಯಲ್ಲಿ ನೋಡಬಹುದು. ಈ ಕೃತಿ ಆಧಾರಿತ ನಾಟಕ 'ರಾಮಧಾನ್ಯ' ಈಗ ಸ್ವಲ್ಪ ಮಟ್ಟಿನ ರೂಪಾಂತರ ಪಡೆದು ಸಿನಿಮಾ ಆಗುತ್ತಿದೆ.

ಹೌದು, ಈ ಹಿಂದೆ 'ಒಲವೇ ವಿಸ್ಮಯ' ಸೇರಿದಂತೆ ಮುಂತಾದ ಚಿತ್ರಗಳನ್ನು ಮಾಡಿರುವ ಟಿ.ಎನ್.ನಾಗೇಶ್ ರವರು 'ರಾಮಧಾನ್ಯ'ವನ್ನು ಒಂದಿಷ್ಟು ರೂಪಾಂತರ ಮಾಡಿ ತೆರೆಯ ಮೇಲೆ ತರಲು ಸಜ್ಜಾಗಿದ್ದಾರೆ.

Kanakadasa's 'Ramdanya' is becoming a movie

ಕನಕದಾಸರ 'ರಾಮಧಾನ್ಯ ಚರಿತೆ' ಕೃತಿಯನ್ನು ಮೂಲವಾಗಿಟ್ಟುಕೊಂಡು ರೂಪಾಂತರ ತಂಡದವರು 'ರಾಮಧಾನ್ಯ' ಎಂಬ ನಾಟಕವನ್ನು ನಿರ್ಮಿಸಿ ಈಗಾಗಲೇ ಹಲವು ಬಾರಿ ಪ್ರದರ್ಶನ ನೀಡಿದ್ದಾರೆ. ಈ ನಾಟಕವನ್ನು ಕೆ.ಎಸ್.ಡಿ.ಎಲ್ ಚಂದ್ರು ಎಂಬುವವರು ನಿರ್ದೇಶನ ಮಾಡಿದ್ದರು. ಈ ನಾಟಕ ನೋಡಿದ ನಾಗೇಶ್ ರವರು ಕೊಂಚ ರೂಪಾಂತರ ಮಾಡಿಕೊಂಡು ಈ ನಾಟಕದಲ್ಲಿ ಕೆಲಸ ಮಾಡಿರುವ ಬಸವರಾಜ್ ಸೂಳೇರಿಪಾಳ್ಯ ಎಂಬುವರ ಜೊತೆಗೆ ಸಿನಿಮಾ ಮಾಡುತ್ತಿದ್ದಾರೆ.

ನಾಗೇಶ್ ರವರು ಆಕ್ಷನ್ ಕಟ್ ಹೇಳಲಿರುವ 'ರಾಮಧಾನ್ಯ' ಚಿತ್ರದಲ್ಲಿ ಮೂರು ವಿಭಿನ್ನ ಕಾಲಘಟ್ಟಗಳು ತೆರೆಮೇಲೆ ಬರಲಿದೆಯಂತೆ. ಜೊತೆಗೆ ಈ ಮೂರು ಕಾಲಘಟ್ಟಗಳಲ್ಲಿ ಯಶಸ್ ಸೂರ್ಯ ರವರು ಮೂರು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಇದರಲ್ಲಿ ಕನಸದಾಸರ ಪಾತ್ರವೂ ಇರಲಿದೆ.

ಅಂದಹಾಗೆ ದಶಮುಖ ವೆಂಚರ್ ಸಂಸ್ಥೆಯಡಿ ನಾಗೇಶ್ ರವರು ಹತ್ತು ಜನರೊಂದಿಗೆ ಸೇರಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ಬೆನಕ ರಾಜು ಛಾಯಾಗ್ರಹಣ, ದೇಸಿ ಮೋಹನ್ ಸಂಗೀತ ಸಂಯೋಜನೆ, ಬಸವರಾಜ್ ಸೂಳೇರಿಪಾಳ್ಯ ಚಿತ್ರಕಥೆ-ಸಂಭಾಷಣೆ ಇರಲಿದೆ.

English summary
Kanakadasa's 'Ramdanya' is becoming a movie by Director T.N.Nagesh.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada