ನಟಿ ಸಂಜನಾಗೆ ಸಿಕ್ಕ ಹೊಸ ಗೆಳೆಯ ಇವರು
Recommended Video

ನಿಖಿಲ್ ಜೊತೆ ವರ್ಕೌಟ್ ಮಾಡ್ತಿರೋದು ಯಾರು..? | Filmibeat Kannada
ನಟಿ ಸಂಜನಾ ಹೆಚ್ಚು ಸಮಯವನ್ನು ಯೋಗ ಹಾಗೂ ಜಿಮ್ ನಲ್ಲಿ ಕಳೆಯುತ್ತಾರೆ. ತಮ್ಮ ಫಿಟ್ನೆಸ್ ಸೀಕ್ರೆಟ್ ಏನು ಎಂದು ಕೇಳಿದರೆ ಸಂಜನಾ ಯಾವಾಗಲೂ ಹೇಳುವುದು ಯೋಗ ಹಾಗೂ ಜಿಮ್ ಎಂದು.
ಯಾವಾಗಲೂ ಜಿಮ್ ಗೆ ಹೋಗುವ ಸಂಜನಾಗೆ ಈಗ ಅಲ್ಲಿ ಒಬ್ಬ ಹೊಸ ಗೆಳೆಯ ಸಿಕ್ಕಿದ್ದಾರೆ. ಅದು ನಟ ನಿಖಿಲ್ ಕುಮಾರ್ ಅವರು. ಹೌದು, ಈ ವಿಷಯವನ್ನು ಸ್ವತಃ ಸಂಜನಾ ಹಂಚಿಕೊಂಡಿದ್ದಾರೆ.

ಒಂದೇ ಚಿತ್ರರಂಗದಲ್ಲಿ ಇದ್ದರೂ ಸಂಜನಾ ಹಾಗೂ ನಿಖಿಲ್ ಕುಮಾರ್ ನಡುವೆ ಹೆಚ್ಚು ಸ್ನೇಹ ಇರಲಿಲ್ಲ. ಆದರೆ, ಈಗ ಒಂದೇ ಜಿಮ್ ನಲ್ಲಿ ಭೇಟಿಯಾಗುವ ಮೂಲಕ ಇಬ್ಬರು ಗೆಳೆಯ - ಗೆಳತಿ ಆಗಿದ್ದಾರೆ. ತಮ್ಮ ಹೊಸ ಗೆಳೆಯ ನಿಖಿಲ್ ಕುಮಾರ್ ಜೊತೆಗೆ ಫೋಟೋ ತೆಗೆದುಕೊಂಡು ಸಂಜನಾ ಸಂಭ್ರಮಿಸಿದ್ದಾರೆ.

ಅಂದಹಾಗೆ, ನಿಖಿಲ್ ಕುಮಾರ್ 'ಸೀತಾರಾಮ ಕಲ್ಯಾಣ' ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಸಂಜನಾ ಸದ್ಯ ಸೈಮಾ ಕಾರ್ಯಕ್ರಮವನ್ನು ಮುಗಿಸಿಕೊಂಡು ಬಂದಿದ್ದಾರೆ.
More from Filmibeat
English summary
Kananad actress Sanjjanaa Galrani got new friend.


Click it and Unblock the Notifications











