ಈ ವಾರ ಕನ್ನಡದಲ್ಲಿ ಬಿಡುಗಡೆಯಾಗ್ತಿದೆ 'ಕಾಂಚನಾ-3'
ರಾಘವ ಲಾರೆನ್ಸ್ ಅಭಿನಯದ 'ಕಾಂಚನಾ 3' ಸಿನಿಮಾ ಕಳೆದ ವಾರ ಬಿಡುಗಡೆಯಾಗಿದ್ದು, ಎಲ್ಲೆಡೆಯೂ ಭರ್ಜರಿ ಸದ್ದು ಮಾಡ್ತಿದೆ. ಬಾಕ್ಸ್ ಆಫೀಸ್ ನಲ್ಲೂ ಒಳ್ಳೆಯ ಬಿಸಿನೆಸ್ ಮಾಡ್ತಿದೆ.
ತಮಿಳು ಮತ್ತು ತೆಲುಗಿನಲ್ಲಿ ರಿಲೀಸ್ ಆಗಿದ್ದ ಈ ಚಿತ್ರ ಈಗ ಕನ್ನಡದಲ್ಲೂ ಬರಲು ಸಜ್ಜಾಗಿದೆ. ಆದ್ರೆ, ರೀಮೇಕ್ ಅಲ್ಲ ಡಬ್ಬಿಂಗ್. ಹೌದು, ಮೂಲ ಚಿತ್ರ ಕನ್ನಡದಲ್ಲಿ ಡಬ್ ಆಗಿದ್ದು, ಕೆ.ಎಸ್.ಕೆ ಪ್ರೊಡಕ್ಷನ್ ಕರ್ನಾಟಕದಲ್ಲಿ ರಿಲೀಸ್ ಮಾಡಲಿದೆ. ಇದೇ ವಾರ ರಾಜ್ಯಾದ್ಯಂತ ಕನ್ನಡದಲ್ಲೂ 'ಕಾಂಚನಾ-3' ರಿಲೀಸ್ ಆಗುತ್ತಿದೆ.

ಇತ್ತೀಚಿಗಷ್ಟೆ ಕಾಂಚನಾ 3 ಕನ್ನಡ ವರ್ಷನ್ ಆಡಿಯೋ ಬಿಡುಗಡೆಯಾಗಿದೆ. ಅಲ್ಲಿಗೆ ಈ ಚಿತ್ರವನ್ನ ರೀಮೇಕ್ ಮಾಡೋ ಪ್ಲಾನ್ ಇದ್ರೆ ಅದು ನಿರಾಸೆಯಾದಂತೆ. ಯಾಕಂದ್ರೆ, ಈ ಹಿಂದೆ ಕಾಂಚನಾ 2 ಚಿತ್ರವನ್ನ ಉಪೇಂದ್ರ ಅಭಿನಯದ ರೀಮೇಕ್ ಮಾಡಲಾಗಿತ್ತು.
ಹಾಗಾಗಿ, ಈ ಚಿತ್ರವನ್ನ ಕೂಡ ರೀಮೇಕ್ ಮಾಡಬಹುದು ಎಂಬ ನಿರೀಕ್ಷೆ ಇತ್ತು. ಇದೀಗ, ನೇರ ಚಿತ್ರವೇ ಕನ್ನಡದಲ್ಲಿ ಡಬ್ ಆಗಿ ಬಿಡುಗಡೆಯಾದರೇ, ಮತ್ತೆ ರೀಮೇಕ್ ಮಾಡೋ ಯೋಚನೆಗೆ ನಿರ್ಮಾಪಕರು ಮುಂದಾಗಲ್ಲ ಎನ್ನಲಾಗುತ್ತಿದೆ.
ಇನ್ನುಳಿದಂತೆ ಲಾರೆನ್ಸ್ ನಾಯಕನಾಗಿ ನಟಿಸಿರುವ ಈ ಚಿತ್ರವನ್ನ ಅವರೇ ನಿರ್ಮಾಣ ಮಾಡಿ, ನಿರ್ದೇಶನ ಕೂಡ ಮಾಡಿದ್ದಾರೆ. ವೇದಿಕಾ ಮತ್ತು ಓವಿಯಾ ನಾಯಕಿಯರಾಗಿ ಕಾಣಿಸಿಕೊಂಡಿದ್ದು, ಕಬೀರ್ ದುಹಾನ್ ಸಿಂಗ್ ಖಳನಾಯಕನಾಗಿ ಮಿಂಚಿದ್ದಾರೆ.


Click it and Unblock the Notifications











