»   » ಇಗೋ ಇನ್ನೆರಡು ಕನ್ನಡ ಚಲನಚಿತ್ರ

ಇಗೋ ಇನ್ನೆರಡು ಕನ್ನಡ ಚಲನಚಿತ್ರ

Posted By: Staff
Subscribe to Filmibeat Kannada

ನೀ ನನ್ನ ಜೀವ : ಅಣ್ಣ ತಂಗಿಯರ ಪವಿತ್ರ ಪ್ರೇಮದಲ್ಲಿ ನಡೆವ ಕೋಲಾಹಲದ ಸುತ್ತ ಹೆಣೆದ ಚಿತ್ರಕತೆಯುಳ್ಳ ನೀ ನನ್ನ ಜೀವ ಬೆಂಗಳೂರಿನ ಕಲ್ಪನಾ, ಉಮಾ, ಶಾಂತಿ, ಗೀತಾಂಜಲಿ, ನಂದಿನಿ (3 ಆಟ), ಕಲ್ಪನಾ, ಪುಟ್ಟಣ್ಣ, ವೀರೇಶ, ಅಜಂತಾ, ಗೋವರ್ಧನ್‌, ಸಿದ್ದಲಿಂಗೇಶ್ವರ (ಬೆಳಗಿನ ಆಟ) ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ.

ಮೈಸೂರು - ಒಲಿಂಪಿಯಾ, ಪದ್ಮ, ಶಾಂತಲ, ಮಂಡ್ಯದ ಮಹಾವೀರ, ಸಂಜಯ, ಚಿತ್ರದುರ್ಗದ ಪ್ರಸನ್ನ, ದಾವಣಗೆರೆಯ ಗೀತಾಂಜಲಿ, ಹುಬ್ಬಳ್ಳಿಯ ಸುಜಾತಾ, ಗದಗ್‌ನ ಮಹಾಲಕ್ಷ್ಮೀ, ಶಿವಮೊಗ್ಗದ ಮಾಡರ್ನ್‌, ದಾರವಾಢದ ವಿಜಯ ಹಾಗೂ ಬಿಜಾಪುರದ ಅಪ್ಸರ ಚಿತ್ರಮಂದಿರಗಳಲ್ಲಿ ಏಕಕಾಲದಲ್ಲಿ ತೆರೆಕಾಣುತ್ತಿದೆ.

ಚಿತ್ರದ ನಿರ್ಮಾಪಕರು : ಸೈಯ್ಯದ್‌ ಅಹ್ಮದ್‌, ಕತೆ, ಚಿತ್ರಕತೆ, ಸಂಭಾಷಣೆ ಹಾಗೂ ನಿರ್ದೇಶನ: ಸತ್ಯಜಿತ್‌, ತಾರಾಗಣ : ಚರಣ್‌ರಾಜ್‌, ಚಾರುಲತಾ, ಅಖಿಲಾ.

ನಕ್ಸಲೈಟ್ಸ್‌ : ಬಿ.ವಿ. ಚಕ್ರಪಾಣಿ ನಿರ್ಮಿಸಿರುವ ಶಿವಮಣಿ ನಿರ್ದೇಶನದ ನಕ್ಸಲೈಟ್‌, ಹೆಸರೇ ಹೇಳುವಂತೆ ಸಾಹಸ ಪ್ರಧಾನ ಚಿತ್ರ. ತಾರಾಗಣದಲ್ಲಿ ದೇವರಾಜ್‌, ವಿಜಯಲಕ್ಷ್ಮೀ, ಥ್ರಿಲ್ಲರ್‌ ಮಂಜು ಇದ್ದಾರೆ.

ತ್ರಿವೇಣಿ, ಪ್ರಮೋದ್‌, ಪುಟ್ಟಣ್ಣ, ಸಂಪಿಗೆ, ವೆಂಕಟೇಶ್ವರ, ಆದರ್ಶ, ಮುಕುಂದ, ಚೇತನ, ಸಿದ್ಧಲಿಂಗೇಶ್ವರ, ವೀರಭದ್ರೇಶ್ವರ, ಮಾರುತಿ, ಬಾಲಾಜಿ, ಗೋವರ್ಧನ್‌ (ದಿನ ಮೂರು ಆಟ), ತ್ರಿವೇಣಿ, ಪ್ರಸನ್ನ, ನಂದ, ನಳಂದ, ನವರಂಗ್‌, ಪುಷ್ಪಾಂಜಲಿ, ಆದರ್ಶ (ಬೆಳಗಿನ ಆಟ) ಹಾಗೂ ಮೈಸೂರಿನ ಗಾಯತ್ರಿ, ಪ್ರಭಾ, ಸರಸ್ವತಿ, ಮಂಡ್ಯದ ಸಂಜಯ, ಮಹಾವೀರ್‌, ಹಾಸನದ ಸಹ್ಯಾದ್ರಿ, ದಾವಣಗೆರೆಯ ಮೋತಿ, ಚಿತ್ರದುರ್ಗದ ಬಸವೇಶ್ವರ, ಹೊಸಪೇಟೆಯ ಲಕ್ಷ್ಮೀ, ಶಿವಮೊಗ್ಗದ ವಿನಾಯಕ, ಚಿಕ್ಕಮಗಳೂರು ಮಿಲನ್‌, ಹುಬ್ಬಳ್ಳಿಯ ರೂಪಂ, ಧಾರವಾಡದ ರೀಗಲ್‌, ಬಿಜಾಪುರದ ತ್ರಿಪುರ ಸುಂದರಿ ಚಿತ್ರಮಂದಿರಗಳಲ್ಲಿ ಏಕಕಾಲದಲ್ಲಿ ನಕ್ಸಲೈಟ್‌ ಬಿಡುಗಡೆಯಾಗುತ್ತಿದೆ.

English summary
More kannada films are on the pipeline
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada