»   » ಅರೆನಗ್ನ ಪ್ರತಿಭಟನೆ ಮಾಡಿದ ಶ್ರೀರೆಡ್ಡಿ ಬಗ್ಗೆ ಕಂಗನಾ ಬೇಸರ.!

ಅರೆನಗ್ನ ಪ್ರತಿಭಟನೆ ಮಾಡಿದ ಶ್ರೀರೆಡ್ಡಿ ಬಗ್ಗೆ ಕಂಗನಾ ಬೇಸರ.!

Posted By:
Subscribe to Filmibeat Kannada
ಶ್ರೀರೆಡ್ಡಿ ಬಗ್ಗೆ ಮಾತನಾಡಿದ ಕಂಗನಾ | Filmibeat Kannada

ತೆಲುಗು ವಾಣಿಜ್ಯ ಮಂಡಳಿ ಎದುರು ಅರೆನಗ್ನ ಪ್ರತಿಭಟನೆ ಮಾಡುವ ಮೂಲಕ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿರುವ ಟಾಲಿವುಡ್ ನಟಿ ಶ್ರೀರೆಡ್ಡಿಯ ಹೋರಾಟ ಬಾಲಿವುಡ್ ನಲ್ಲೂ ಸದ್ದು ಮಾಡಿದೆ.

ಇಂಡಸ್ಟ್ರಿಯಲ್ಲಿರುವ 'ಕಾಸ್ಟಿಂಗ್ ಕೌಚ್' ಬಗ್ಗೆ ಹಾಗೂ ತೆಲುಗು ನಟಿಯರಿಗೆ ಅವಕಾಶ ಸಿಗುತ್ತಿಲ್ಲ ಎಂಬ ಕಾರಣಕ್ಕೆ ನಟಿ ಶ್ರೀರೆಡ್ಡಿ ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸಿದ್ದರು. ಸಿನಿಮಾದಲ್ಲಿ ಅವಕಾಶ ಬೇಕು ಅಂದ್ರೆ, ನಿರ್ಮಾಪಕರು, ನಿರ್ದೇಶಕರು ಹಾಗೂ ನಟರೊಂದಿಗೆ ಕಾಂಪ್ರಪೈಸ್ ಆಗ್ಬೇಕು ಎಂಬ ಹೇಳಿಕೆ ನೀಡಿ ದೊಡ್ಡ ಸಂಚಲನ ಸೃಷ್ಟಿಸಿದ್ದರು. ಈ ಬಗ್ಗೆ ಬಿ-ಟೌನ್ ಕ್ವೀನ್ ಕಂಗನಾ ಬೇಸರ ವ್ಯಕ್ತಪಡಿಸಿದ್ದಾರೆ.

ರಕುಲ್ ಪ್ರೀತ್ ಗೆ ಶೂಟಿಂಗ್ ಸ್ಥಳಕ್ಕೆ ಹೋಗಿ ಹೊಡಿತೀನಿ ಎಂದು ಧಮ್ಕಿ ಹಾಕಿದ ನಟಿ

ಶ್ರೀರೆಡ್ಡಿ ಹೋರಾಟದ ಬಗ್ಗೆ ಪ್ರತಿಕ್ರಿಯಿಸಿರುವ ಕಂಗನಾ ರನೌತ್ ''ಕಾಸ್ಟಿಂಗ್ ಕೌಚ್ ಎಂಬುದು ಎಲ್ಲ ಇಂಡಸ್ಟ್ರಿಯಲ್ಲೂ ಇದೆ. ಅದರ ವಿರುದ್ಧ ಪ್ರತಿಭಟಿಸಲು ಈ ರೀತಿಯ ಹೋರಾಟ ಮಾಡುವುದು ತಪ್ಪು. ನಾವು ಹೋರಾಡುತ್ತಿರುವ ಸಮಸ್ಯೆ ಮುಖ್ಯವಾಗಬೇಕೆ ಹೊರತು, ನಮ್ಮ ಮೇಲೆ ಎಲ್ಲರ ಗಮನ ಬೀಳಬಾರದು. ಹಾಗೆ ಬಿದ್ರೆ, ಅದು ಪಬ್ಲಿಸಿಟಿಯ ಉದ್ದೇಶ ಆಗಿಬಿಡುತ್ತೆ'' ಎಂದಿದ್ದಾರೆ.

Kangana Ranaut gives reaction on Sri Reddy Strip Protest

''ನಾನು ಕೂಡ ಕಾಸ್ಟಿಂಗ್ ಕೌಚ್ ಸಮಸ್ಯೆಯನ್ನ ಎದುರಿಸಿದ್ದೇನೆ. ಆದ್ರೆ, ಶ್ರೀರೆಡ್ಡಿ ಅನುಸರಿಸುತ್ತಿರುವ ಮಾರ್ಗ ಸರಿಯಿಲ್ಲ'' ಎಂದು ಕಂಗನಾ ಅಭಿಪ್ರಾಯ ಪಟ್ಟಿದ್ದಾರೆ.

ರಾಣಾ ದಗ್ಗುಬಾಟಿ ಸಹೋದರನ ಖಾಸಗಿ ಫೋಟೋ ಲೀಕ್ ಮಾಡಿದ ಶ್ರೀರೆಡ್ಡಿ.!

ಸದ್ಯ, ಟಾಲಿವುಡ್ ಇಂಡಸ್ಟ್ರಿಯಲ್ಲಿ ದೊಡ್ಡ ಚರ್ಚೆಯಾಗುತ್ತಿರುವ ಶ್ರೀ ರೆಡ್ಡಿ ಖ್ಯಾತ ನಿರ್ಮಾಪಕ ಸುರೇಶ್ ಬಾಬು ಅವರ ಮಗ ಅಭಿರಾಮ್ ವಿರುದ್ಧ ಆರೋಪ ಮಾಡಿದ್ದಾರೆ. ಇನ್ನು ಕೆಲವು ವ್ಯಕ್ತಿಗಳ ಬಗ್ಗೆ ನನ್ನ ಬಳಿ ಸಾಕ್ಷಿಗಳಿವೆ. ಸದ್ಯದಲ್ಲೇ ಬಿಡುಗಡೆಗೊಳಿಸುತ್ತೇನೆಂದು ಆಕಂತ ಹುಟ್ಟಿಸಿದ್ದಾರೆ.

English summary
Sri Reddy has grabbed the attention of national media with her semi-naked protest at the Film Chamber. now, Bollywood star heroine Kangana Ranaut responded to the issue.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X