twitter
    For Quick Alerts
    ALLOW NOTIFICATIONS  
    For Daily Alerts

    'ತಲೈವಿ' ತಂಡದಿಂದ ರಚ್ಚುಗೆ ವಿಶೇಷ ಉಡುಗೊರೆ: ಡಿಂಪಲ್ ಕ್ವೀನ್‌ಗೆ ಗಿಫ್ಟ್ ಕೊಟ್ಟಿದ್ದೇಕೆ?

    |

    ಬಾಲಿವುಡ್ ನಟಿ ಕಂಗನಾ ರಣಾವತ್ ಅಭಿನಯಿಸಿರುವ 'ತಲೈವಿ' ಸಿನಿಮಾ ಸೆಪ್ಟೆಂಬರ್ 10 ರಂದು ವರ್ಲ್ಡ್‌ವೈಡ್ ತೆರೆಗೆ ಬರ್ತಿದೆ. ತಮಿಳು, ತೆಲುಗು ಹಾಗೂ ಹಿಂದಿಯಲ್ಲಿ ಭಾಷೆಯಲ್ಲಿ ರಿಲೀಸ್ ಆಗುತ್ತಿರುವ ಈ ಚಿತ್ರಕ್ಕೆ ಈಗಾಗಲೇ ಭರ್ಜರಿ ರೆಸ್‌ಪಾನ್ಸ್ ಸಿಕ್ಕಿದೆ. ತಲೈವಿ ಹಿಂದಿ ವರ್ಷನ್ ಪ್ರಿಮೀಯರ್ ಪ್ರದರ್ಶನ ಕಂಡಿದ್ದು, ಬಿಟೌನ್ ಮಂದಿ ಫುಲ್ ಖುಷ್ ಆಗಿದ್ದಾರೆ.

    ಕಂಗನಾ ರಣಾವತ್ ವೃತ್ತಿ ಜೀವನದಲ್ಲಿ ಇದೊಂದು ಅತ್ಯುತ್ತಮ ಸಿನಿಮಾ ಎನಿಸಿಕೊಳ್ಳಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಎಎಲ್ ವಿಜಯ್ ನಿರ್ದೇಶಿಸಿರುವ ಈ ಚಿತ್ರದಲ್ಲಿ ಕಂಗನಾ ಮತ್ತು ಅರವಿಂದ್ ಸ್ವಾಮಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ತಲೈವಿ ಸಿನಿಮಾ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಬಯೋಪಿಕ್ ಆಗಿದ್ದು, ಪುರುಚ್ಚಿ ತಲೈವಿ ಪಾತ್ರದಲ್ಲಿ ಕಂಗನಾ ಬಣ್ಣ ಹಚ್ಚಿದ್ದಾರೆ. ಎಂಜಿಆರ್ ಪಾತ್ರದಲ್ಲಿ ಅರವಿಂದ್ ಸ್ವಾಮಿ ಅಭಿನಯಿಸಿದ್ದಾರೆ.

    'ನನ್ನ ಜೀವನದ ಅತ್ಯುತ್ತಮ ಸಿನಿಮಾ ತಲೈವಿ': ಕಂಗನಾ ರಣಾವತ್ ಭರವಸೆ'ನನ್ನ ಜೀವನದ ಅತ್ಯುತ್ತಮ ಸಿನಿಮಾ ತಲೈವಿ': ಕಂಗನಾ ರಣಾವತ್ ಭರವಸೆ

    ಸಿನಿಮಾ ಅಧಿಕೃತವಾಗಿ ಬಿಡುಗಡೆಯಾಗುವುದಕ್ಕೂ ಮೊದಲೇ ಚಿತ್ರದ ಬಗ್ಗೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿರುವುದು ನಿಜಕ್ಕೂ ಭರವಸೆ ಮೂಡಿಸಿದೆ. ಈ ಮಧ್ಯೆ ಕನ್ನಡ ನಟಿ ಡಿಂಪಲ್ ಕ್ವೀನ್ ರಚಿತಾ ರಾಮ್‌ಗೆ ತಲೈವಿ ತಂಡದಿಂದ ಒಂದು ವಿಶೇಷವಾದ ಉಡುಗೊರೆ ಬಂದಿರುವುದು ಸರ್ಪ್ರೈಸ್ ಎನಿಸಿದೆ. ಮುಂದೆ ಓದಿ...

    ರಚ್ಚುಗೆ ತಲೈವಿ ತಂಡದಿಂದ ಗಿಫ್ಟ್

    ರಚ್ಚುಗೆ ತಲೈವಿ ತಂಡದಿಂದ ಗಿಫ್ಟ್

    ಡಿಂಪಲ್ ಕ್ವೀನ್ ರಚಿತಾ ರಾಮ್‌ಗೆ ತಲೈವಿ ಚಿತ್ರತಂಡದಿಂದ ಕಾಂಚೀಪುರಂ ಸೀರೆ ಉಡುಗೊರೆಯಾಗಿ ಕಳುಹಿಸಲಾಗಿದೆ. ಈ ಉಡುಗಿರೆಯನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ನಟಿ, ತಲೈವಿ ಚಿತ್ರಕ್ಕೆ ಶುಭಾಶಯ ಕೋರಿದ್ದಾರೆ. ''ತಲೈವಿ ತಂಡದಿಂದ ಅದ್ಭುತವಾದ ಉಡುಗೊರೆ ಪಡೆದಿದ್ದೇನೆ. ಬೃಂದಾ ಪ್ರಸಾದ್ ಮತ್ತು ವಿಷ್ಣು ಇಂದುರಿ ಅವರಿಗೆ ವಿಶೇಷ ಧನ್ಯವಾದ. ಇದು ನಿಜಕ್ಕೂ ನನಗೆ ಬಹಳ ವಿಶೇಷ. ತಲೈವಿ ಚಿತ್ರತಂಡಕ್ಕೆ ಆಲ್ ದಿ ಬೆಸ್ಟ್'' ಎಂದು ಪೋಸ್ಟ್ ಹಾಕಿದ್ದಾರೆ.

    ರಚಿತಾ ರಾಮ್‌ಗೆ ಈ ಗಿಫ್ಟ್ ಏಕೆ?

    ರಚಿತಾ ರಾಮ್‌ಗೆ ಈ ಗಿಫ್ಟ್ ಏಕೆ?

    ತಲೈವಿ ಸಿನಿಮಾಗೂ, ಕಂಗನಾ ರಣಾವತ್ ಚಿತ್ರತಂಡಕ್ಕೂ ಈ ಕಡೆ ಕನ್ನಡ ನಟಿ ರಚಿತಾ ರಾಮ್‌ಗೂ ಏನ್ ಸಂಬಂಧ ಎನ್ನುವ ಪ್ರಶ್ನೆ ಕಾಡುವುದು ಸಹಜ. ಏಕಂದ್ರೆ, ತಲೈವಿ ಚಿತ್ರತಂಡ ಅಷ್ಟು ಪ್ರೀತಿಯಿಂದ ಡಿಂಪಲ್‌ಗೆ ಕಾಂಚೀಪುರಂ ಸೀರೆಯನ್ನು ಉಡುಗೊರೆಯಾಗಿ ಕಳುಹಿಸಿದೆ ಅಂದ್ರೆ ಅಲ್ಲೊಂದು ವಿಶೇಷ ಇರಲೇಬೇಕು. ಅದೇನು ಎನ್ನುವುದು ಸದ್ಯಕ್ಕೆ ಬಹಿರಂಗವಾಗಿಲ್ಲ. ಆದರೆ, ತಲೈವಿ ತಂಡದಿಂದ ಸಿಕ್ಕ ಗಿಫ್ಟ್ ಸ್ವೀಕರಿಸಿದ ನಟಿ ಮಾತ್ರ ಖುಷಿಯಾಗಿದ್ದಾರೆ.

    ಕಂಗನಾ ನಟನೆಯ 'ತಲೈವಿ' ತಂಡದಿಂದ ಸಮಂತಾಗೆ ಸಿಕ್ತು ವಿಶೇಷ ಉಡುಗೊರೆಕಂಗನಾ ನಟನೆಯ 'ತಲೈವಿ' ತಂಡದಿಂದ ಸಮಂತಾಗೆ ಸಿಕ್ತು ವಿಶೇಷ ಉಡುಗೊರೆ

    ಸಮಂತಗೂ ಉಡುಗೊರೆ

    ಸಮಂತಗೂ ಉಡುಗೊರೆ

    ರಚಿತಾ ರಾಮ್‌ಗೂ ಮೊದಲೇ ತೆಲುಗು ನಟಿ ಸಮಂತಾ ಅಕ್ಕಿನೇನಿಗೆ ತಲೈವಿ ತಂಡ ಕಾಂಚೀಪುರಂ ಸೀರೆಯನ್ನು ಉಡುಗೊರೆಯಾಗಿ ಕಳುಹಿಸಿದೆ. ಕಂಗನಾ ಚಿತ್ರತಂಡದಿಂದ ಸಿಕ್ಕಿ ಗಿಫ್ಟ್ ಬಗ್ಗೆ ಸಮಂತಾ ಸಹ ಇನ್ಸ್ಟಾಗ್ರಾಂ ಸ್ಟೇಟಸ್‌ನಲ್ಲಿ ಪೋಸ್ಟ್ ಮಾಡಿ ಥ್ಯಾಂಕ್ಸ್ ಹೇಳಿದ್ದರು.

    ತಲೈವಿ ಚಿತ್ರದ ಬಗ್ಗೆ....

    ತಲೈವಿ ಚಿತ್ರದ ಬಗ್ಗೆ....

    ಜಯಲಲಿತಾ ಅವರ ಬಯೋಪಿಕ್ ಚಿತ್ರವನ್ನು ಎ ಎಲ್ ವಿಜಯ್ ನಿರ್ದೇಶಿಸಿದ್ದಾರೆ. ವಿಜಯಂದ್ರ ಪ್ರಸಾದ್ ಕಥೆ ಮಾಡಿದ್ದಾರೆ. ವಿಷ್ಣುವರ್ಧನ ಇಂದುರಿ, ಹಿತೇಶ್ ಟಕ್ಕರ್, ತಿರುಮಲ ರೆಡ್ಡಿ ಜಂಟಿಯಾಗಿ ಈ ಚಿತ್ರ ನಿರ್ಮಿಸಿದ್ದು, ಜೀ ಸ್ಟುಡಿಯೋಸ್ ವಿತರಣೆಗೆ ಕೈ ಜೋಡಿಸಿದೆ. ಜಯಲಲಿತಾ ಪಾತ್ರದಲ್ಲಿ ಕಂಗನಾ ರಣಾವತ್ ನಟಿಸಿದ್ದು, ಎಂಜಿಆರ್ ಪಾತ್ರದಲ್ಲಿ ಖ್ಯಾತ ನಟ ಅರವಿಂದ್ ಸ್ವಾಮಿ ಅಭಿನಯಿಸಿದ್ದಾರೆ.

    ತಲೈವಿ ಸಿನಿಮಾ ಮುಗಿಸಿರುವ ಕಂಗನಾ ಉಳಿದ ಸಿನಿಮಾ ವಿಚಾರಕ್ಕೆ ಬರುವುದಾದರೆ ಇತ್ತೀಚಿಗಕಷ್ಟೆ ಧಾಕಡ್ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಇದೀಗ ಕಂಗನಾ ತೇಜಸ್ ಸಿನಿಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಈ ಚಿತ್ರದಲ್ಲಿ ಕಂಗನಾ ವಾಯುಸೇನೆಯ ಪೈಲೆಟ್ ಆಗಿ ಕಾಣಿಸಿಕೊಂಡಿದ್ದಾರೆ.

    English summary
    Bollywood Actress Kangana Ranaut starrer Thalaivi movie team gifts Kanchipuram Saree to Rachita Ram.
    Wednesday, September 8, 2021, 12:45
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X