ಜಯಲಲಿತಾ ಜನ್ಮ ವಾರ್ಷಿಕೋತ್ಸವ: ರಿಲೀಸ್ ಆಯ್ತು 'ತಲೈವಿ' ಹೊಸ ಲುಕ್
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ತಮಿಳು ಚಿತ್ರರಂಗದ ಸ್ಟಾರ್ ನಟಿ ಜಯಯಲಿತಾ ಅವರ 72ನೇ ಜನ್ಮ ದಿನಾಚರಣೆ ಆಚರಿಸಲಾಗುತ್ತಿದೆ. ಹುಟ್ಟುಹಬ್ಬದ ವಿಶೇಷವಾಗಿ 'ತಲೈವಿ' ಸಿನಿಮಾದ ಹೊಸ ಲುಕ್ ರಿವೀಲ್ ಆಗಿದೆ. ಬಾಲಿವುಡ್ ನಟಿ ಕಂಗನಾ ರಣಾವತ್ ಅಭಿನಯದ ತಲೈವಿ ಸಿನಿಮಾದ ಲುಕ್ ರಿಲೀಸ್ ಆಗಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ.
ತಲೈವಿ ಹೆಸರಿನಲ್ಲಿ ಬರುತ್ತಿರುವ ಜಯಲಲಿತಾ ಬಯೋಪಿಕ್ ಚಿತ್ರರಸಿಕರಲ್ಲಿ ಮತ್ತು ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಈಗಾಗಲೆ ಚಿತ್ರದ ಮೊದಲ ಟೀಸರ್ ರಿಲೀಸ್ ಆಗಿದೆ. ಜಯಲಲಿತಾ ಆಗಿ ಕಾಣಿಸಿಕೊಂಡಿರುವ ಕಂಗನಾ ಲುಕ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಆದರೀಗ ರಿಲೀಸ್ ಆಗಿರುವ ಹೊಸ ಲುಕ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕಪ್ಪು ಮತ್ತು ಕೆಂಪು ಬಣ್ಣದ ಬಾರ್ಡರ್ ಇರುವ ಬಿಳಿ ಬಣ್ಣದ ಸೀರೆಯಲ್ಲಿ ನಟಿ ಕಂಗನಾ ಕಾಣಿಸಿಕೊಂಡಿದ್ದಾರೆ. ಅಂದ್ಹಾಗೆ ಈ ಸಿನಿಮಾಗೆ ಎ.ಎಲ್ ವಿಜಯ್ ಆಕ್ಷನ್ ಕಟ್ ಹೇಳಿದ್ದಾರೆ.

ತಲೈವಿ ಸಿನಿಮಾ ತಮಿಳು ಸೇರಿದಂತೆ ಹಿಂದಿ ಮತ್ತು ತೆಲುಗು ಭಾಷೆಯಲ್ಲೂ ತೆರೆಗೆ ಬರುತ್ತಿದೆ. ಜಯಲಲಿತಾ ಅವರ ಸಿನಿಮಾ ಮತ್ತು ರಾಜಕೀಯ ಜೀವನ ಎರಡನ್ನು ತಲೈವಿ ಮೂಲಕ ಕಟ್ಟಿಕೊಡಲಿದ್ದಾರೆ ನಿರ್ದೇಶಕ ವಿಜಯ್. ಚಿತ್ರಕ್ಕಾಗಿ ಕಂಗನಾ ಸಾಕಷ್ಟು ತಯಾರಿಗಳನ್ನು ಮಾಡಿಕೊಂಡಿದ್ದಾರೆ.
ಮೊದಲ ಟೀಸರ್ ನೋಡಿದ ಅಭಿಮಾನಿಗಳಿಗೆ ಭಾರಿ ನಿರಾಸೆ ಮೂಡಿಸಿತ್ತು. ಆದರೀಗ ರಿಲೀಸ್ ಆಗಿರುವ ಹೊಸ ಲುಕ್ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಸಿನಿಮಾ ಹೇಗಿರಲಿದೆ, ಜಯಲಲಿತಾ ಜೀವನ ಹೇಗಿತ್ತು ಎನ್ನುವ ಬಗ್ಗೆ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. ತಲೈವಿ ಸಿನಿಮಾ ಇದೆ ವರ್ಷ ಜೂನ್ ನಲ್ಲಿ ತೆರೆಗೆ ಬರಲಿದೆ.


Click it and Unblock the Notifications











