For Quick Alerts
  ALLOW NOTIFICATIONS  
  For Daily Alerts

  ಪಟಾಕಿ ಕಿಡಿ: ಐಪಿಎಸ್ ಅಧಿಕಾರಿ ಡಿ. ರೂಪಾ ವಿರುದ್ಧ ಸಿಡಿದೆದ್ದ ನಟಿ ಕಂಗನಾ

  |

  ಪಟಾಕಿ ನಿಷೇಧದ ಬಗ್ಗೆ ಐಪಿಎಸ್ ಅಧಿಕಾರಿ ಡಿ.ರೂಪಾ ನೀಡಿರುವ ಹೇಳಿಕೆ ಈಗ ವಿವಾದದ ಕಿಡಿ ಹೊತ್ತಿಸಿದೆ. 'ಪಟಾಕಿ ಸಿಡಿಸುವುದು ಹಿಂದೂ ಸಂಸ್ಕೃತಿಯಲ್ಲಿ ಹಿಂದಿನಿಂದಲೂ ಬಂದಿಲ್ಲ. ಮಹಾಕಾವ್ಯಗಳು, ಪುರಾಣಗಳಲ್ಲಿಯೂ ಅದರ ಬಗ್ಗೆ ಪ್ರಸ್ತಾಪವಿಲ್ಲ. ಯುರೋಪಿಯನ್ನರೊಂದಿಗೆ ಈ ದೇಶಕ್ಕೆ ಪಟಾಕಿಗಳು ಬಂದವು' ಎಂದು ಡಿ.ರೂಪ ಪಟಾಕಿ ಬ್ಯಾನ್ ಮಾಡುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ದೀರ್ಘವಾದ ಪೋಸ್ಟ್ ಹಾಕಿದ್ದಾರೆ. ಈ ಬಗ್ಗೆ ಸಾಕಷ್ಟು ಪರ ವಿರೋಧ ಚರ್ಚೆ ನಡೆಯುತ್ತಿದೆ.

  ಬಾಲಿವುಡ್ ನಟಿ ಕಂಗನಾ ರಣಾವತ್ ರೂಪಾ ಹೇಳಿಕೆಯನ್ನು ಟೀಕಿಸಿ ನಾಚಿಕೆಯಾಗಬೇಕು ರೂಪಾ ಅವರಿಗೆ ಎಂದು ಸರಣಿ ಟ್ವೀಟ್ ಮಾಡಿದ್ದಾರೆ. ನವೆಂಬರ್ 14ರಂದು ಡಿ.ರೂಪಾ ಅವರ ಪಟಾಕಿ ನಿಷೇಧಕ್ಕೆ ಸಂಬಂಧಿಸಿದಂತೆ ವಿವರಿಸಿರುವ ಪೋಸ್ಟ್ ಗೆ ಸಾಕಷ್ಟು ಮಂದಿ ವಿರೋಧ ವ್ಯಕ್ತಪಡಿಸಿದ್ದಾರೆ.

  ಕಂಗನಾಗೆ ಮೂರನೇ ಬಾರಿ ಸಮನ್ಸ್ ನೀಡಿದ ಮುಂಬೈ ಪೊಲೀಸರು

  ಪುರಾಣಗಳಲ್ಲಿಯೂ ಪಟಾಕಿ ಪ್ರಸ್ತಾಪವಿದೆ ಎಂದು ಅನೇಕರು ವಾದಿಸುತ್ತಿದ್ದಾರೆ. 'ಅರ್ಧಂಬರ್ಧ ಜ್ಞಾನದೊಂದಿಗೆ ಜನರ ಹಾದಿ ತಪ್ಪಿಸುವಿರಿ, ಸರ್ಕಾರ ಆದೇಶವನ್ನು ಪಾಲನೆ ಮಾಡುತ್ತಿಲ್ಲ ಹಾಗೂ ಅದರ ಬಗ್ಗೆ ಗೌರವವನ್ನೂ ತೊರುತ್ತಿಲ್ಲ, ನಿಮ್ಮಂಥ ಟ್ರೋಲರ್ ಗಳೊಂದಿಗೆ ಚರ್ಚೆ ಮುಂದುವರಿಸುವುದು ಅನವಶ್ಯಕ' ಎಂದು ಡಿ ರೂಪಾ ಟ್ವೀಟ್ ಮಾಡಿ, ಕೆಲವು ಟ್ವಿಟ್ಟರ್ ಖಾತೆಗಳನ್ನು ಬ್ಲಾಕ್ ಮಾಡುವುದಾಗಿ ಹೇಳಿದ್ದಾರೆ. ಅಲ್ಲದೆ ಒಂದು ಖಾತೆಯನ್ನು ಬ್ಲಾಕ್ ಮಾಡಿದ್ದಾರೆ.

  ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟಿ ಕಂಗನಾ, 'ಪುರಾಣಗಳಲ್ಲಿ ಪಟಾಕಿ ಪ್ರಸ್ತಾಪವಿರುವ ದಾಖಲೆಗಳನ್ನು ಒದಗಿಸಿದ್ದರೂ, ಅವುಗಳನ್ನು ರೂಪಾ ಒಪ್ಪಲಿಲ್ಲ. ಈಗ ಸಾಕ್ಷ್ಯ ಒದಗಿಸಿದವರ ಖಾತೆಯೇ ಬ್ಲಾಕ್ ಆಗಿದೆ' ಎಂದಿದ್ದಾರೆ.

  ಇನ್ನು 'ಸಾಮಾನ್ಯ ಜನರ ಮೂಲಭೂತ ಹಕ್ಕುಗಳನ್ನು ಕಾಪಾಡುವ ನಿಟ್ಟಿನಲ್ಲಿ ಸರ್ಕಾರವು ಡಿ.ರೂಪಾ ಅವರಂತಹ ಜನರನ್ನು ನೇಮಿಸುತ್ತದೆ. ಆದರೆ ಅವರನ್ನು ನೋಡಿ, ಸತ್ಯ ಆಧಾರಗಳಿಂದ ವಾದದಲ್ಲಿ ಗೆಲ್ಲಲು ಅಸಹಾಯಕಾರಿ. @TlinExile ಖಾತೆಯನ್ನು ಬ್ಲಾಕ್ ಮಾಡಿದ್ದಾರೆ. ನಿಮಗೆ ನಾಚಿಕೆಯಾಗಬೇಕು' ಎಂದು ರೂಪ ವಿರುದ್ಧ ಕಿಡಿ ಕಾರಿದ್ದಾರೆ.

  ಸಿನಿಮಾದಲ್ಲಿ ಇರುವುದು ಎಲ್ಲವೂ ಸತ್ಯ ಅಲ್ಲ ಅಂದ್ರು ರಿಯಲ್ ಲೈಫ್ ಹೀರೊ ಗೋಪಿನಾಥ್ | Filmibeat Kannada

  ಮೀಸಲಾತಿ ಅಡ್ಡಪರಿಣಾಮಿಗಳಿವು, ಯೋಗ್ಯರಲ್ಲದವರಿಗೆ ಅಧಿಕಾರ ದೊರೆತರೆ ಹೀಗೆ ಆಗುವುದು. ಗಣಪಡಿಸುವುದಕ್ಕಿಂತ ನೋಯಿಸುವುದೆ ಜಾಸ್ತಿ. ಅವರ ವೈಯಕ್ತಿಕ ಜೀವನದ ಬಗ್ಗೆ ನನಗೇನು ತಿಳಿದಿಲ್ಲ. ಆದರೆ ಅವರ ಹತಾಶೆ ಅವರ ಅಸಮಾರ್ಥ್ಯತೆಯಿಂದ ಹೊರಬರುತ್ತಿರುವುದು ಖಂಡಿತ' ಎಂದಿದ್ದಾರೆ.

  English summary
  Bollywood Actress Kangana Ranaut slams IPS officer D Roopa for her statement on ban firecrackers.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X