'ಕಾವೇರಿ ಕೂಗಿಗೆ' ಧ್ವನಿ ಗೂಡಿಸಿದ ಕಂಗನಾ, ತಮನ್ನಾ, ಕಾಜಲ್

Recommended Video

'ಕಾವೇರಿ ಕೂಗಿಗೆ' ಧ್ವನಿ ಗೂಡಿಸಿದ ಕಂಗನಾ | FILMIBEAT KANNADA

'ಕಾವೇರಿ ಕೂಗು' (Cauvery Calling) ಅಭಿಯಾನಕ್ಕೆ ದೊಡ್ಡ ಪ್ರತಿಕ್ರಿಯೆ ಸಿಗುತ್ತಿದೆ. ಈಶ ಪೌಂಡೇಷನ್ ಆಯೋಜನೆ ಮಾಡಿರುವ ಈ ಅಭಿಯಾನಕ್ಕೆ ಸಿನಿಮಾ ಕಲಾವಿದರು ಬೆಂಬಲ ನೀಡಿದ್ದಾರೆ.

ಬರೀ ಕನ್ನಡದ ಸ್ಟಾರ್ ಗಳು ಮಾತ್ರವಲ್ಲದೆ ಇತರ ಭಾಷೆಯ ನಟಿಯರು ಸಹ ಕಾವೇರಿ ಕೂಗಿಗೆ ಧ್ವನಿಯಾಗಿದ್ದಾರೆ. ನಟಿ ಕಾಜಲ್ ಅಗರ್ವಾಲ್, ತಮನ್ನಾ ಭಾಟಿಯಾ, ಬಾಲಿವುಡ್ ನಟಿ ಕಂಗನಾ ರಣಾವತ್ ಈ ಬಗ್ಗೆ ಮಾತನಾಡಿದ್ದಾರೆ.

''ನೀರು ಬಹು ಅಮೂಲ್ಯವಾದದ್ದು. ಆದರೆ, 2020ರ ಒಳಗೆ ಭಾರತದ 21 ನಗರಗಳಲ್ಲಿ ನೀರಿನ ಸಮಸ್ಯೆ ಉಂಟಾಗುತ್ತದೆ. ಚೆನ್ನೈನಲ್ಲಿ 2019ರಲ್ಲಿಯೇ ನೀರಿನ ಸಮಸ್ಯೆ ಎದುರಾಗಿದೆ. ಮುಂದೆ ಬೆಂಗಳೂರಿಗೆ ಇದೇ ಸ್ಥಿತಿಗೆ ಬರುತ್ತದೆ. ಈ ಸಮಸ್ಯೆಗೆ ಪರಿಹಾರ ನಮ್ಮ ಕೈನಲ್ಲಿ ಇದೆ. ನಾವು ಮರಗಳನ್ನು ಬೆಳೆಸಬೇಕಾಗಿದೆ.'' ಎಂದು ನೀರಿನ ಸಮಸ್ಯೆ ಬಗ್ಗೆ ಅರಿವು ಮೂಡಿಸಿದ್ದಾರೆ.

Kangana, Tamanna, Kajal Supports Cauvery Calling Campaign

ನೂರು ವರ್ಷದ ಹಿಂದೆ ಬೀಳುತ್ತಿದ್ದ ಮಳೆಯ ಪ್ರಮಾಣ ಈಗೇನೂ ಕಡಿಮೆ ಆಗಿಲ್ಲ. ಆದರೆ, ಮಳೆಯಿಂದ ಬಿದ್ದ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಭೂಮಿಯಲ್ಲಿ ಇಲ್ಲ. ಹೀಗಾಗಿ ಪಶ್ಚಿಮಫಟ್ಟದಲ್ಲಿ ಭೂಕುಸಿತ ಆಗುತ್ತಿದೆ. ಎಂದು ಸದ್ಗುರು ಹೇಳಿದ್ದಾರೆ.ಕಾವೇರಿ ಉಳಿವಿಗೆ ಈ ಮಹಾ ಅಭಿಯಾನ ಶುರು ಮಾಡಿದ್ದಾರೆ

'ಕಾವೇರಿ ಕೂಗು' ಅಭಿಯಾನಕ್ಕೆ ನಟ ಉಪೇಂದ್ರ, ಪುನೀತ್ ರಾಜ್ ಕುಮಾರ್, ರಕ್ಷಿತ್ ಶೆಟ್ಟಿ, ದಿಗಂತ್, ನಟಿ ಸುಹಾಸಿನಿ, ಪ್ರಣಿತಾ, ರಾಗಿಣಿ ದ್ವಿವೇದಿ, ಶ್ರೀನಿಧಿ ಶೆಟ್ಟಿ ಸೇರಿದಂತೆ ಅನೇಕರು ಬೆಂಬಲ ನೀಡಿದ್ದಾರೆ.

ಕಂಗಾನ, ತಮನ್ನಾ ಹಾಗೂ ಕಾಜಲ್ ರನ್ನು ಮೂವರು 'ಕ್ವೀನ್' ಎಂದು ಕರೆಯಲಾಗಿದೆ. ಕಂಗಾನ 'ಕ್ವೀನ್' ಚಿತ್ರದಲ್ಲಿ ನಟಿಸಿದ್ದು, ಅದರ ರಿಮೇಕ್ ನಲ್ಲಿ ತಮನ್ನಾ ಮತ್ತು ಕಾಜಲ್ ಕಾಣಿಸಿಕೊಂಡಿದ್ದಾರೆ

More from Filmibeat

English summary
Actress Kangana Ranaut, Tamanna Bhatiya, Kajal Aggarwal supports Cauvery Calling campaign.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X