''ನಟ ಸುದೀಪ್ ರನ್ನು ಬ್ಯಾನ್ ಮಾಡಿ''- ಕನ್ನಡಪರ ಸಂಘಟನೆಯ ಒತ್ತಡ

ನಟ ಕಿಚ್ಚ ಸುದೀಪ್ ರನ್ನು ಚಿತ್ರರಂಗದಿಂದ ಬ್ಯಾನ್ ಮಾಡಬೇಕು ಎಂದು ಕನ್ನಡಪರ ಸಂಘಟನೆವೊಂದು ಒತ್ತಡ ಹೇರಿದೆ. ರಮ್ಮಿ ಜಾಹಿರಾತಿನಲ್ಲಿ ಸುದೀಪ್ ಕಾಣಿಸಿಕೊಂಡಿದ್ದು, ಇದರಿಂದ ತಪ್ಪು ಸಂದೇಶ ಹೋಗುತ್ತಿದೆ ಎಂದು ಸಂಘಟನೆ ಅಧ್ಯಕ್ಷ ಆರೋಪ ಮಾಡಿದ್ದಾರೆ.

Recommended Video

ಸುದೀಪ್ ಗೆ ಎಚ್ಚರಿಕೆ ಕೊಟ್ಟ ಕನ್ನಡಪರ ಸಂಘಟನೆಗಳು | Sudeep | Rummy | Filmibeat Kannada

''ರಮ್ಮಿ ಒಂದು ಜೂಜಾಟ. ಇದನ್ನು ಸುದೀಪ್ ಪ್ರಚಾರ ಮಾಡುತ್ತಿದ್ದಾರೆ. ಇದು ಅನೇಕರ ಮೇಲೆ ಪರಿಣಾಮ ಬೀರಿದೆ. ಸಾಕಷ್ಟು ಅಭಿಮಾನಿಗಳನ್ನು ಕೆಟ್ಟ ದಾರಿಗೆ ಪ್ರಚೋದಿಸುತ್ತಿದ್ದಾರೆ. ಇದರಿಂದ ಎಷ್ಟೋ ಜನರ ಜೀವನ ಹಾಳಾಗುತ್ತಿದೆ'' ಎಂದು ಆರೋಪ ಮಾಡಿದ್ದಾರೆ.

Kannada Activists Filed A Complaint In Film Chamber To Ban Sudeep

ಸುದೀಪ್ ಕೂಡಲೇ ಈ ಜಾಹಿರಾತಿನಿಂದ ಹೊರ ಬರಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇಲ್ಲದಿದ್ದರೆ ಅವರನ್ನು ಚಿತ್ರರಂಗದಿಂದ ಬ್ಯಾನ್ ಮಾಡಬೇಕು ಎಂದು ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಂಘಟನೆಯ ಅಧ್ಯಕ್ಷ ಶಿವಕುಮಾರ್ ನಾಯಕ್ ದೂರು ನೀಡಿದ್ದಾರೆ.

ಒಬ್ಬ ನಟ ಜೂಜಾಟಕ್ಕೆ ಸಂದೇಶ ಕೊಡಬಾರದು. ದರ್ಶನ್, ಯಶ್ ರೀತಿ ಒಳ್ಳೆಯ ಕೆಲಸಕ್ಕೆ ಪ್ರೇರಣೆ ನೀಡಲಿ. ಯಶೋಮಾರ್ಗದಿಂದ ಯಶ್ ಸಾಕಷ್ಟು ಒಳ್ಳೆಯ ಕೆಲಸ ಮಾಡಿದ್ದಾರೆ. ಈ ರೀತಿ ಸುದೀಪ್ ಸಹ ಒಳ್ಳೆ ಸಂದೇಶವನ್ನು ಅಭಿಮಾನಿಗಳಿಗೆ ನೀಡಬೇಕು ಎಂದು ಶಿವಕುಮಾರ್ ನಾಯಕ್ ಹೇಳಿದ್ದಾರೆ.

5ನೇ ತಾರೀನ ಒಳಗೆ ಸುದೀಪ್ ರನ್ನು ಸಂಪರ್ಕಿಸುವುದಾಗಿ ಅಧ್ಯಕ್ಷರು ಭರವಸೆ ನೀಡಿದ್ದು, ಅದು ಆಗದೆ ಇದ್ದರೆ, ಸುದೀಪ್ ಮನೆಯ ಮುಂದೆ ಧರಣಿ ಮಾಡುವುದಾಗಿ ಸಂಘಟನೆ ಅಧ್ಯಕ್ಷರು ಎಚ್ಚರಿಕೆ ನೀಡಿದ್ದಾರೆ.

More from Filmibeat

English summary
Kannada activists filed a complaint in film chamber to ban Sudeep from kannada film industry.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X